-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಭಾರತೀಯ ಜೈನ್ ಮಿಲನ್ ವಲಯ – 8 ಬೆಂಗಳೂರು ವಿಭಾಗಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್ -7.
ದಿನಾಂಕ 24-12-2023 ರಂದು ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ನಡೆಯಲಿದೆ. ಪರಮ ಪೂಜ್ಯ ಮುನಿಶ್ರೀ 108 ವೀರಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ, ಪರಮ ಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳವರಿಗೆ ಭಾವಪೂರ್ಣ ವಿನಯಾಂಜಲಿಯೊಂದಿಗೆ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ವಿರಾಂಗನ ಡಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ಜಿನ ಭಜನಾ ಸ್ಪರ್ಧೆಯೂ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ವೀರ್ ಡಿ ಸುರೇಂದ್ರ ಕುಮಾರ್ ರವರ ಮಾರ್ಗಧರ್ಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಉದ್ಘಾಟನೆ ಮೈಕ್ರೋಲ್ಯಾಭ್ಸ್ ನ ಚೇರ್ಮೆನ್ ರವರಾದ ಶ್ರೀ ದಿಲೀಪ್ ಸುರಾನಾ ರವರಿಂದ ನಡೆಯಲಿದೆ. ಅಂದಿನ ಸಮಾರೋಪ ಸಮಾರಂಭದಲ್ಲಿ ಜಿನಸಂಸ್ಕಾರ್ ಶ್ರಾವಕರಿಂದ ಸಮೂಹ ಸ್ತೋತ್ರ ಪಠಣೆ, ಭಜನೆ ಹಾಗೂ ಮುನಿಶ್ರೀಗಳ ಪಿಂಛಿ ಪರಿವರ್ತನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಾಗೂ ಈ ಕಾರ್ಯಕ್ರಮ ಜ್ವಾಲಮಾಲ ನ್ಯೂಸ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














