ಕಾವೇರಿ ಧಾಮ ಪಂಚಕಲ್ಯಾಣ/ jwalamalanews / 2023

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜ್ವಾಲಮಾಲ ಧರ್ಮಯಾತ್ರೆ

ಭಗವಾನ್ ಶ್ರೀ ಬಾಹುಬಲಿ ಪ್ರತಿಷ್ಠಾಪನ ಮಹೋತ್ಸವದಲ್ಲಿ ಸಿದ್ದಚಕ್ರ ಆರಾಧನೆ ಹಾಗೂ ಅಲ್ಲಿಯೇ ದೊರೆತ ಜಿನ ಬಿಂಬಗಳಿಗೆ ಹಾಗೂ ಶ್ರೀ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ವಿಧಿಪೂರ್ವಕವಾಗಿ ಜರುಗಿತ್ತು.

ಪ್ರತಿಷ್ಠಾಪನ ನಂತರ ಈ ಕ್ಷೇತ್ರಕ್ಕೆ ಶ್ರೀ ವಿಜಯೇಶ್ವರ ಬಾಹುಬಲಿ ದಿಗಂಬರ ಜೈನ ತೀರ್ಥ ಕಾವೇರಿ ದಾಮ ಎಂದು ಮರು ನಾಮಕರಣಗೊಳಿಸಲಾಗಿತ್ತು. ಹೊಯ್ಯಸಳ ದೊರೆಗಳು ತಮ್ಮ ವಿಜಯದ ಸಂಕೇತವಾಗಿ ಬಸದಿಗಳನ್ನು ದೇವಸ್ತಾನಗಳನ್ನು ನಿರ್ಮಿಸಿ ಮೂಲ ಹೆಸರಿನೊಂದಿಗೆ ವಿಜಯವನ್ನು ಹೊಂದಿಸಿತಿದ್ದಿದ್ದು ಇತಿಹಾಸದಲ್ಲಿ ತಿಳಿದು ಅದರಂತೆಯೇ ಯುಗಳ ಮುನಿ ಮಹಾರಾಜರು ಬೇಲೂರಿನ ವಿಜಯ ನಾರಾಯಣ ಕನಕಗಿರಿಯ ವಿಜಯ ಪಾರ್ಶ್ವನಾಥ ಸ್ವಾಮಿ ಅಂದೆಯೇ ಇಲ್ಲಿನ ಭಾಹುಬಲಿಗೆ ಶ್ರೀ ವಿಜಯೇಶ್ವರ ಬಾಹುಬಲಿ ದಿಗಂಬರ ಜೈನ ತೀರ್ಥ ಕಾವೇರಿ ದಾಮ ಎಂದು ಕರೆದಿದ್ದಾರೆ. ಪ್ರಕೃತಿ ನಿರ್ಮಿತ ಸುಂದರ ಪರಿಸರದಲ್ಲಿ ನಯನ ಮನೋಹರವಾಗಿ ನಡೆದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ನಿಮಗಾಗಿ ಪ್ರಸ್ತುತ ಪಡಿಸುತ್ತಿದ್ದೇವೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್