ಶ್ರೀ ದೇವೇಂದ್ರಕೀರ್ತಿ ಸ್ವಾಮೀಜಿ/ ಜ್ವಾಲಾಮಾಲಾ ನ್ಯೂಸ್ / 2023

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜ್ವಾಲಮಾಲ ಧರ್ಮಯಾತ್ರೆ

ಪರಮ ಪೂಜ್ಯ ಸ್ವಸ್ತಿಶ್ರೀ ಡಾ|| ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀ ಕ್ಷೇತ್ರ ಹೊಂಬುಜ :- ದೂರದರ್ಶನ ವಾಹಿನಿಯಲ್ಲಿ ವಿವಿಧ ರೀರಿಯಲ್ಲಿ ಒಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಮೂಡಿಬರುತ್ತಿದೆ. ನಮ್ಮ ಭಾರತೀಯ ಸಂಸ್ಕೃತಿ ಮತ್ತು ದೇಶದ ವಿವಿಧ ಆಯಾಮಗಳನ್ನ ದೂರದರ್ಶನದಲ್ಲಿ ತೋರಿಸುವಂತಹದ್ದು ಕಳೆದ ಅನೇಕ ವರ್ಷಗಳಿಂದಲು ನಮ್ಮ ಸಮಾಜದಲ್ಲಿ ಧಾರ್ಮಿಕ ಚಟುವಟಿಕೆಗಳು ಸಾಕಷ್ಟು ನಡೆಯುತ್ತವೆ. ಆ ಎಲ್ಲ ಚಟುವಟಿಕೆಗಳು ದೂರದರ್ಶನದ ಮೂಲಕವಾಗಿ ತೋರಿಸುವ ಮೂಲಕ ಅನೇಕ ಕಾರ್ಯಕ್ರಮಗಳನ್ನ ಸಂಯೋಜನೆ ಮಾಡಿರುವಂತಹ ಜ್ವಾಲಮಾಲ ನ್ಯೂಸ್ ತಂಡದವರು ಹೊಸದಾದ ಕಾರ್ಯಕ್ರಮವನ್ನ ದೂರದರ್ಶನದಲ್ಲಿ ಧರ್ಮಯಾತ್ರೆ ಎನ್ನುವ ಹೆಸರಿನಲ್ಲಿ ಆರಂಭಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಜೈನ ಧರ್ಮದ ಪ್ರಭಾವನೆ ಮತ್ತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಶ್ರೀಮತಿ ವೈಶಾಲಿ ಚಂದ್ರಪ್ರಭು ರವರ ನೇತೃತ್ವದಲ್ಲಿ ಈ ಒಂದು ಕಾರ್ಯಕ್ರಮ ಮೂಡಿ ಬರುತ್ತಿದೆ. ಸಮಾಜದ ಬೇರೆ ಬೇರೆ ರೀತಿಯ ಧಾರ್ಮಿಕ ಸಾಮಾಜಿಕ ಶೈಕ್ಷಣಿಕವಾದಂತಹ ಕಾರ್ಯಕ್ರಮಗಳು ನಡೆಯುವಂತಹದನ್ನ ವಾರದ ಒಂದು ದಿವಸದಲ್ಲಿ ತೋರಿಸುವ ಮೂಲಕವಾಗಿ ಬೇರೆ ಇತರೆ ಜನರಿಗೂ ಒಂದು ರೀತಿಯ ಮಾರ್ಗದರ್ಶಕವಾದಂತಹ ಕಾರ್ಯಕ್ರಮವನ್ನ ನಿರೂಪಿಸಿ ಸಮಾಜದ ಕಾರ್ಯಕ್ರಮಗಳು ಎಲ್ಲರಿಗೂ ತಲುಪುವ ಒಂದು ಪ್ರಯತ್ನವನ್ನ ತಂಡದವರು ಮಾಡುತ್ತಿದ್ದಾರೆ. ಈ ಧರ್ಮಯಾತ್ರೆ ಎಂಬ ಕಾರ್ಯಕ್ರಮದ ಮೂಲಕವಾಗಿ ಜೈನ ಧರ್ಮದ ಪ್ರಚಾರ ಮತ್ತು ಪ್ರಸಾರ ಸಾಕಷ್ಟು ಆಗುವ ರೀತಿಯಲ್ಲಿ ತಂಡದ ಎಲ್ಲರಿಗೂ ಯಶಸ್ಸು ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಆಶೀರ್ವದಿಸುತ್ತೇನೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್