ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಭಗವಾನ್ ಶ್ರೀ ಬಾಹುಬಲಿಸ್ವಾಮಿ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶ್ರೀ ಸಿದ್ಧಚಕ್ರ ಆರಾಧನೆ ಬಸದಿ ಹೊಸಕೋಟೆ.
ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ :- ಸದ್ಧರ್ಮ ಬಂಧುಗಳೇ, ಬಸದಿ ಹೊಸಕೋಟೆ ಮಂಡ್ಯ ಜಿಲ್ಲೆ ಇಲ್ಲಿ ಇರುವಂತಹ ಮೈಸೂರು ಪ್ರಾಂತ್ಯದ ಕನ್ನಂಬಾಡಿ ಹಿನ್ನೀರಿನ ಪ್ರದೆಶದಲ್ಲಿ ಇರುವ ಪುರಾತನವಾದಂತಹ ಜೈನ ಸಂಸ್ಕೃತಿಯ ನೆಲೆಬೀಡಾದಂತಹ ಕ್ಷೇತ್ರ. ಈ ಕ್ಷೇತ್ರದಲ್ಲಿ ಅನೇಕ ಶತಮಾನದಿಂದ ಧಾರ್ಮಿಕ ಪುರುಷರು ನೆಲೆ ನಿಂತು ಸಮಾಜಿಕ ಮತ್ತು ಧಾರ್ಮಿಕವಾದಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದರು. ಯುಗಧರ್ಮದ ಪ್ರಕಾರ ಅದು ತುಂಬ ಶಿಥಿಲವಾಗಿ ನಶಿಸಿ ಸ್ಥಳಾಂತರವಾಗಿ ಇದ್ದಂತಹ ಸಂದರ್ಭದಲ್ಲಿ ಅಲ್ಲಿರುವಂತಹ ಪ್ರಾಚೀನ ದೇವಾಲಯಗಳನ್ನು ಪುನಃ ಜೀರ್ಣೋದ್ಧಾರ ಮಾಡುವಂತಹ ಸಂದರ್ಭ ನಮ್ಮ ಮುಂದೆ ಪ್ರಾಪ್ತವಾಗಿದೆ. ಈ ಸಂದರ್ಭದಲ್ಲಿ ಪರಮ ಪೂಜ್ಯ ಯುಗಳ ಮುನಿಗಳಾದ ಅಮರ ಕೀರ್ತಿ ಮತ್ತು ಅಮೋಘ ಕೀರ್ತಿ ಮಹಾರಾಜರು ಮಾರ್ಗದರ್ಶನವನ್ನು ಮಾಡಿ ಮತ್ತು ಎಲ್ಲ ಪೂಜ್ಯ ಮಠಾಧೀಶರು ಹಾಗೂ ಧರ್ಮಸ್ಥಳದ ರಾಜಶ್ರೀ ವೀರೇಂದ್ರ ಹೆಗ್ಗಡೆಯವರು ಮತ್ತು ಸಮಾಜದ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೇ ನವೆಂಬರ್ ತಿಂಗಳ 23,24,25ರಂದು ಪುನರ್ ಪ್ರತಿಷ್ಠಾಪನಾ ಮಾಡುತ್ತಿರುವಂತಹ ಕಾರ್ಯಕ್ರಮ. ಈ ಒಂದು ವೈಭವವಾಗಿರುವಂತಹ ಭಕ್ತಿ ಪೂರ್ವವಾಗಿರುವಂತಹ ಅತಿಶಯವಾಗಿರುವಂತಹ ಮಹೋತ್ಸವದಲ್ಲಿ ಎಲ್ಲರು ಕೂಡ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಧರ್ಮ ಲಾಭವನ್ನ ಮಾಡಿಕೊಳ್ಳಬೇಕು ಜ್ವಾಲಮಾಲ ನ್ಯೂಸ್ ಈ ಕಾರ್ಯಕ್ರಮವನ್ನ ಸಮಯಕ್ಕೆ ಸರಿಯಾಗಿ ಮುಂಚಿತವಾಗಿ ಸಮಾಚಾರವನ್ನು ಬಿತ್ತರಿಸುತ ಇದ್ದಾರೆ, ಅವರ ಪ್ರಚಾರದಿಂದ ಮನೆ ಮನೆಗೆ ತಲುಪುವಂತಹ ಈ ಕಾರ್ಯಕ್ರಮವನ್ನು ತಾವೇಲ್ಲರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು ತೀರ್ಥ ಕ್ಷೇತ್ರಗಳ ಅಭಿವೃಧ್ದಿಗೆ ಸಹಕರಿಸ ಬೇಕು ತೀರ್ಥ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ಇದಕ್ಕೆ ತಮ್ಮ ಸಹಕಾರ ಮತ್ತು ತಾವು ನಡೆದುಕೊಳ್ಳುವಂತಹ ಭಕ್ತಿ ನಿರಂತವಾಗಿರಲ್ಲಿ ಎಂದು ನಾವು ಕೂಡ ಪ್ರಾರ್ಥಿಸುತ್ತೇವೆ ಎಲ್ಲರಿಗೂ ಶುಭ ಹಾರೈಸುತ್ತೇವೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














