-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಭಾರತೀಯ ಜೈನ್ ಮಿಲನ್ ವಲಯ 8ರ ಮೈಸೂರು ವಿಭಾಗದ ಜಿನ ಭಜನಾ ಸ್ಪರ್ಧೆ. ಜಗತ್ ವಿಖ್ಯಾತ ಗೊಮ್ಮಟನ ನೆಲೆ ಬೀಡು ಭಗವಾನ್ ಬಾಹುಬಲಿಯ ಪವಿತ್ರ ಪುಣ್ಯ ಕ್ಷೇತ್ರ ಶ್ರವಣ ಬೆಳಗೊಳ ಜೈನ ಮಠದ ನೂತನ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ನೇತೃತ್ವ ಮಾರ್ಗದರ್ಶನ ಹಾಗೂ ಶುಭಾಶೀರ್ವಾದ ದೊಂದಿಗೆ ಮತ್ತು ಶ್ರೀ ಮಠದ ಆತಿಥ್ಯ ಹಾಗೂ ಶ್ರೀ ಕೂಷ್ಮಾಂಡಿನಿ ಮಹಿಳಾ ಸಮಾಜ ಶ್ರೀ ದಿಗಂಬರ ಜೈನ ಸಮಾಜ ಶ್ರವಣ ಬೆಳಗೊಳ ಇವರುಗಳ ಸಹಯೋಗದೊಡನೆ ನಡೆಯಲಿದೆ.
ದಿನಾಂಕ 19-11-2023 ರ ಭಾನುವಾರದಂದು ಶ್ರೀ ಚಾವುಂಡರಾಯ ಸಭಾ ಮಂಟಪ ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠ ಇಲ್ಲಿ ನಡೆಯಲಿದೆ.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ವೀರಾಂಗನ ಡಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ವೀರ್ ಡಿ ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದ 7ನೇ ಆವೃತ್ತಿಯ ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ 2023ರ ಅಂಗವಾಗಿ ಮೈಸೂರು ವಿಭಾಗದ ಸ್ಪರ್ಧೆಯ ಉದ್ಘಾಟನ ಕಾರ್ಯಕ್ರಮ ಶ್ರೀಕ್ಷೇತ್ರ ಶ್ರವಣ ಬೆಳಗೊಳದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಸಮಸ್ತ ತ್ಯಾಗಿ ವೃಂಧ ಹಾಗೂ ಆರ್ಯಿಕಾ ಮಾತಾಜಿಯವರ ಪಾವನ ಸಾನಿಧ್ಯದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ಉದ್ಘಾಟನೆಯನ್ನು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ನಡೆಸಿಕೊಡಲಿದ್ದಾರೆ. ಭಾರತೀಯ ಜೈನ್ ಮಿಲನ್ ವಲಯ 8ರ ಗೌರವ ಅಧ್ಯಕ್ಷರಾದ ವೀರಾಂಗನ ಶೀಲಾ ಅನಂತರಾಜ್, ಶ್ರವಣ ಬೆಳಗೊಳದ ಶ್ರೀ ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ವೀರಾಂಗನ ಮಹಾಲಕ್ಷ್ಮಿ ಪ್ರಮೋದ್ ಕುಮಾರ್, ಶ್ರವಣ ಬೆಳಗೊಳದ ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ವೀರ್ ಜಿ.ಪಿ ಪದ್ಮಕುಮಾರ್ ರವರು ಉಪಸ್ಥಿತರಿರಲಿದ್ದಾರೆ. ನಂತರ ಸ್ಪರ್ಧ ಕಾರ್ಯಕ್ರಮ ಆರಂಭಗೊಳಲ್ಲಿದ್ದು ಸಂಜೆ 4ಕ್ಕೆ ಸಮಾರೋಪ ಕಾರ್ಯಕ್ರಮ. ತ್ಯಾಗಿಗಳು ಹಾಗೂ ಆರ್ಯಿಕಾ ವೃಂದದವರ ದಿವ್ಯ ಸಾನಿಧ್ಯದಲ್ಲಿ ಶ್ರೀಕ್ಷೇತ್ರ ಶ್ರವಣ ಬೆಳಗೊಳದ ಜೈನ ಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಡಿ ಸುರೇಂದ್ರ ಕುಮಾರ್ ರವರು ರಾಜ್ಯಮಟ್ಟದ ಜಿನ ಭಜನಾ ಸ್ಪರ್ಧೆಯ ಕೋರ್ ಕಮಿಟಿ ಸದಸ್ಯರಾದ ವೀರಾಂಗನಾ ಶ್ರದ್ದಾ ಅಮಿತ್ ರವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ವಲಯ 8 ರ ಅಧ್ಯಕ್ಷರಾದ ವೀರ್ ಕೆ. ಯುವರಾಜ್ ಭಂಡಾರಿಯವರು ವಹಿಸಲಿದ್ದಾರೆ. ಭಾರತೀಯ ಜೈನ್ ಮಿಲನ್ ಅಂತರಾಷ್ಟ್ರೀಯ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷರಾದ ನಾ. ಪ್ರಸನ್ನ ಕುಮಾರ್, ಭಾರತೀಯ ಜೈನ್ ಮಿಲನ್ ವಲಯ 8 ರ ಪ್ರಧಾನ ಕಾರ್ಯದರ್ಶಿಗಳಾದ ವೀರ್ ಎಂ ರತ್ನರಾಜ್, ಭಾರತೀಯ ಜೈನ್ ಮಿಲನ್ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಸಿ ಎಸ್ ನಾಗರಾಜು ಇವರುಗಳು ಉಪಸ್ಥಿತರಿದ್ದಾರೆ.
ಇಂತಹ ಅದ್ಬುತ ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತ ಕೋರಲಾಗಿದೆ.
ಈ ಕಾರ್ಯಕ್ರಮವು ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ ನೇರಪ್ರಸಾರಗೊಳಲ್ಲಿದೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














