ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಜೈ ಜಿನೇಂದ್ರ ವೀಕ್ಷಕರೇ,
ಕರಾವಳಿ ಕರ್ನಾಟಕದ ಅಚ್ಚ ಹಸಿರಿನ ಸುಂದರ ಪ್ರಕೃತಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಪಾಲ್ಗುಣಿ ನದಿ ತೀರದಲ್ಲಿರುವ ಸುಂದರ ರಮಣೀಯ ಕ್ಷೇತ್ರ ವೇಣೂರು. ಕರ್ನಾಟಕದ ಪ್ರಸಿದ್ದ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವು ಧರ್ಮಸ್ಥಳದಿಂದ 35 ಕಿಲೋಮೀಟರ್ ಜೈನ ಕಾಶಿ ಮೂಡುಬಿದಿರೆಯಿಂದ ಕೇವಲ 20 ಕಿಲೋ ಮೀಟರ್ ದೂರದಲ್ಲಿದೆ. ಒಂದು ಕಾಲದಲ್ಲಿ ಬಹು ದೊಡ್ಡ ವ್ಯಾಪಾರ ಕೇಂದ್ರವಾಗಿದ್ದ ವೇಣೂರಿನಲ್ಲಿ ಬಿನ್ನಾಣಿ ಬಸದಿ, ಶ್ರೀ ಪಾರ್ಶ್ವನಾಥ ಬಸದಿ, ಕಲ್ಲು ಬಸದಿ ಹೀಗೆ ಏಳು ಬಸದಿಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಇದ್ದು ಧರ್ಮ ಸಹಿಷ್ಣುತೆಯ ಭಾರತೀಯ ಉನ್ನತ ಪರಂಪರೆಗನುಸಾರವಾಗಿ ಜೈನ ರಾಜ ಮನೆತನಗಳ ಸರ್ವ ಧರ್ಮ ಸಮನ್ವಯ ಮನೋಭಾವಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಇಲ್ಲಿನ ಕಲ್ಲು ಬಸದಿಯಲ್ಲಿ ಮೂಲ ಮೂರ್ತಿ ಶ್ರೀ ಶಾಂತಿನಾಥ ಸ್ವಾಮಿಯ 5 ಅಡಿ ಎತ್ತರದ ಕಪ್ಪು ಶಿಲೆಯ ಮನೋಹರ ಬಿಂಬವಾದರೆ ಬಾಹುಬಲಿ ಮೂರ್ತಿಯ ಹಿಂಬದಿಯ ಅಂಗಳದಲ್ಲಿ ಶ್ರೀ ಪಾರ್ಶ್ವನಾಥ ಬಸದಿಯಲ್ಲಿ ಪಾರ್ಶ್ವನಾಥ ತೀರ್ಥಂಕರರ ಕಂಚಿನ ವಿಗ್ರಹ ಪೂರ್ವಾಭಿಮುಖವಾಗಿದೆ.
ಕ್ಷೇತ್ರದ ಪ್ರಮುಖ ಆಕರ್ಷಣೆ ವಿಶ್ವಕ್ಕೆ ತ್ಯಾಗ , ಅಹಿಂಸೆ, ಶಾಂತಿಯುತ ಉನ್ನತ ಮೌಲ್ಯಗಳನ್ನು ಸಾರಿದ ಉತ್ತರಾಭಿಮುಖವಾಗಿರುವ 35 ಅಡಿ ಎತ್ತರದ ಪ್ರಾಚೀನತೆಯ ಕಳೆಯನ್ನು ಹೊತ್ತ ಭಗವಾನ್ ಶ್ರೀಬಾಹುಬಲಿ ಸ್ವಾಮಿ . ಈ ವಿಗ್ರಹವು ತುಲಾನಾತ್ಮಕವಾಗಿ ಕಾರ್ಕಳದ ಮೂರ್ತಿಯನ್ನು ಹೋಲುತ್ತದೆ. ಭವ್ಯವಾದ ಬಾಹುಗಳು ಉದ್ದ ಹಾಗೂ ದಪ್ಪನೆಯ ಕೈಗಳು ತುಂಬಿದ ತುಟಿಗಳು ತುಸು ಬಾಗಿದ ಮೂಗು ವಿಶಾಲವಾಗಿ ಕೆಳಕ್ಕೆ ಬಾಗಿದ ಕೆನ್ನೆಗಳು ದೃಢವಾದ ಹಾಗೂ ಉಬಬಿದ ಕೊರಳು , ಗರಿಗರಿಯಾದ ಗುಂಗುರು ಕೂದಲು ತೂಗಾಡುವ ಕಿವಿಗಳು ಮುಖದಲ್ಲಿ ಮಂದಸ್ಮಿತ ನಗುವಿನ ಈ ದಿಗಂಬರ ಮೂರ್ತಿ ತುಳುನಾಡಿನ ರಾಜ ,ಮನೆತನಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿರುವ ವೇಣೂರಿನ ಅಜಿಲ ವಂಶದ ನಾಲ್ಕನೇ ವೀರ ತಿಮ್ಮಣ್ಣಜಿಲಾ ಎಂಬ ಅರಸರು 1904 ರಲ್ಲಿ ಸ್ಥಾಪಿಸಿದರೆಂಬುದು ಐತಿಹಾಸಿಕ ಆಧಾರಗಳಿಂದ ತಿಳಿದುಬಂದಿರುವ ವಿಚಾರವಾಗಿದೆ. ಈ ಬಾಹುಬಲಿ ಮೂರ್ತಿಯ ಸ್ಥಾಪನೆ ಮಾಡಿದ ಅಜಿಲವ ವಂಶದ ಇಂದಿನ ಅರಸರಾಗಿರುವ ತಿಮ್ಮಣ್ಣರಸರಾದ ಡಾ|| ಪದ್ಮಪ್ರಸಾದ್ ಅಜೀಲರು ತೀರ್ಥಕ್ಷೇತ್ರದ ಕೆಲಸಕಾರ್ಯಗಳಲ್ಲಿ ಸಕ್ರಿಯ ಮಾರ್ಗದರ್ಶನ ನೀಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಧರ್ಮಾಸಕ್ತರನ್ನು ಶಿಲ್ಪಾಕಲಾಸಕ್ತರನ್ನು ಆಕರ್ಷಿಸುವ ಇಂತಹ ಏಕಶಿಲಾ ವಿಗ್ರಹಕ್ಕೆ ಭಗವಾನ್ ಶ್ರೀ ಬಾಹುವಲಿ ಸ್ವಾಮಿಗೆ ಮಹಾ ಮಸ್ತಕಾಭಿಷೇಕ . ಇದು ನಮಗೆಲ್ಲಾ ಸಂಭ್ರಮದ ವಿಷಯವಾಗಿದೆ. ಲೋಕ ಕಲ್ಯಾಣಾರ್ಥವಾಗಿ ಸಮುದಾಯದಲ್ಲಿ ಧಾರ್ಮಿಕ ಪ್ರವೃತ್ತಿಯ ಸಂರಕ್ಷಣೆಯ ನಡೆಯುವ ಮಹಾ ಮಸ್ತಕಾಭಿಷೇಕ 21 ನೆ ಶತಮಾನದ 3 ನೆ ಮಹಾಮಸ್ತಕಾಭಿಷೇಕವಾಗಿ 2024 ರ ಫೆಬ್ರವರಿ 22 ರಿಂದ 9 ದಿನಗಳ ಕಾಲ ನಡೆಯಲಿದೆ. ಇಂದಿನ ದಿನಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ಜೈನ ಧರ್ಮೀಯರಿಗೆ ಪ್ರದರ್ಶನ ನೀಡುತ್ತಿರುವ ಮಹಾನ್ ಯುಗಳ ಮುನಿಗಳ ಸಂಘ 108 ಮುನಿಶ್ರೀ ಅಮೋಘ ಕೀರ್ತಿ ಮುನಿಮಹಾರಾಜರು ಮತ್ತು 108 ಮುನಿಶ್ರೀ ಅಮರಕೀರ್ತಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಆಶೀರ್ವಾದ ಪೂರ್ವಕವಾಗಿ ಈ ಮಹಾ ಮಸ್ತಕಾಭಿಷೇಕವು ಸಂಪನ್ನಗೊಳ್ಳಲಿದೆ ವೇಣೂರು ಬಾಹುಬಲಿ ಕ್ಷೇತ್ರ ಸೀಮೆಯ ಗುರುಪೀಠವಾಗಿರುವ ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಭಾರತಭೂಷಣ ಡಾ|| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮುನಿಮಹಾರಾಜರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಈ ಮಹಾ ಮಸ್ತಕಾಭಿಷೇಕವನ್ನು ನಡೆಸಲಾಗುತ್ತದೆ. ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿರುವ ಪದ್ಮ ವಿಭೂಷಣ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿಯ ಅಧ್ಯಕ್ಷರಾಗಿದ್ದು ಈ ಮಹಾಮಸ್ತಕಾಭಿಷೇಕ ಸಮಿತಿಯನ್ನು ಅವರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದೆ.
ಜೈನ ಸಮಾಜದಲ್ಲಿ ವಿವಿಧ ಸಾಧನೆ ಮಾಡಿರುವ ಗಣ್ಯರುಗಳನ್ನು ಒಳಗೊಂಡ ಮಹಾಮಸ್ತಕಾಭಿಷೇಕ ಸಮಿತಿ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಫೆಬ್ರವರಿ 22 ರಿಂದ 9 ದಿನಗಳ ಕಾಲ ನಡೆಯಲಿರುವ ೀ ಮಹಾ ಉತ್ಸವದಲ್ಲಿ ಧಾರ್ಮಿಕ ಸಭೆ , ಗೋಷ್ಠಿ ಸಾಂಸ್ಕೃತಿಕಾದಿ ಕಾರ್ಯಕ್ರಮಗಳಲ್ಲಿ ನಾಡಿನ ಗಣ್ಯ ವಿದ್ವಾಂಸರು , ಕಲಾವಿದರು, ಸಾಹಿತಿಗಳು ಭಾಗವಹಿಸಲಿದ್ದು ಸಹೃದಯರಿಗೆ ಇದೊಂದು ರಸದೌತಣದ ದಿವ್ಯ ಮುಹೂರ್ತವಾಗಲಿದೆ. ಮಹಾ ಮಸ್ರಕಾಭಿಷೇಕದ ಈ ಸಂದರ್ಭವು ಅವಿಸ್ಮರಣೀಯವಾಗುವಂತೆ ಜನ ಸಮುದಾಯಕ್ಕೆ ಮಾಹಿತಿ ಮತ್ತು ಮನೋರಂಜನೆಯನ್ನು ಒದಗಿಸುವ ದೃಷ್ಠಿಯಿಂದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಫೆಬ್ರವರಿ 2004 ರಲ್ಲಿ ಜರುಗುವ ಭಗವಾನ್ ಶ್ರೀ ಬಾಹುಬಲಿ ಮಸ್ತಕಾಭಿಷೇಕದ ನಿಮಿತ್ತ ಅಟ್ಟಣಿಗೆಯ ಸ್ತಂಭನ್ಯಾಸವನ್ನು ದಿನಾಂಕ 16/10/2023 ರಂದು ವಿಧಿಪೂರ್ವಕವಾಗಿ ನಡೆಸಲಾಯಿತು. ಈ ಬೃಹತ್ ಸಮಾರಂಭವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವಲ್ಲಿ ನಾಡಿನ ಉದ್ದಗಲದ ಧರ್ಮ ಬಂಧುಗಳೆಲ್ಲರೂ ಮುಕ್ತಹಸ್ತರಾಗಿ ತಮ್ಮ ತನು ಮನ ಧನಗಳ ಸಹಕಾರ ನೀಡುವರೆಂದು ನಾವೆಲ್ಲರೂ ಆಶಿಸುತ್ತೇವೆ.














