ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ / ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ / 05-11-2023 / jwalamalanews / 2023

 

ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಜೈ ಜಿನೇಂದ್ರ ವೀಕ್ಷಕರೇ,

ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ವಿಕಲಚೇತನರಿಗೆ ಉಚಿತ ಶಿಬಿರದ ಸಂಕ್ಷಿಪ್ತ ವಿವರ

ಮೈಸೂರು ನಗರದ ಹೊಸಮಠದ ನಟರಾಜ ಕಲ್ಯಾಣ ಮಂಟಪದಲ್ಲಿ ದಿನಾಂಕ: 5/11/2023 ರಂದು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ವತಿಯಿಂದ ನಾರಾಯಣ ಸೇವಾ ಸಂಸ್ಥಾನ್  ರಾಜಸ್ಥಾನ್, ಜೈನ್ ಮಿಲನ್ ಚಾರಿಟೇಬಲ್ ಟ್ರಸ್ಟ್ ಮೈಸೂರು , ಶ್ರೀ ಗುರುಪುಷ್ಕರ ಜೈನ ಸೇವಾ ಸಮಿತಿ ಬಳ್ಳಾರಿ, ಶ್ರೀ ಅಖಿಲ ಭಾರತ್ ವರ್ಷೀಯ ಸಾಧುಮಾರ್ಗಿ ಜೈನ ಸಂಘ ಇವರ ಸಂಯುಕ್ತ ಸಹಯೋಗದೊಂದಿಗೆ ಮಾಡ್ಯುಲರ್ ಬೃಹತ್ ಕೃತಕ ಅಂಗಗಳು ಕೈ ಮತ್ತು ಕಾಲಿನ ಅಂಗಗಳ ಮಾಪನ , ವಿಕಲಚೇತನರಿಗೆ ಉಚಿತ ಶಿಬಿರ ಕಾರ್ಯಕ್ರಮ ನಡೆಯಿತು.ಅನೇಕರು ಈ ಉತ್ತಮ ಕಾರ್ಯಕ್ರಮದ ಲಾಭ ಪಡೆದರು. ಇಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಸಂಸ್ಥೆಗಳು ಮಾಡುತ್ತಲೇ ಬಂದಿದ್ದಾರೆ  ಹಾಗೂ ಅದು ಶ್ಲಾಘನೀಯ ಕೂಡ . ವಿಧಾನ ಪರಿಷತ್ ಸದಸ್ಯರಾದ  ಸಿ.ಎನ್ ಮಂಜೇಗೌಡರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಹೊಸಮಠದ  ಶ್ರೀ ಚಿದಾನಂದ ಮಹಾಸ್ವಾಮೀಜಿ , ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತವಿಜಯಾನಂದ ಸ್ವಾಮೀಜಿ, ನಗರ ಪಾಲಿಕೆ ಸದಸ್ಯರಾದ ಬಿ.ಪಿ ಮಂಜುನಾಥ್ ಎಸ್ ಬಿ ಎಂ ಮಂಜು ಮಾಜಿ ಸದಸ್ಯ ಎನ್ ಡಿ ಪಾರ್ಥಸಾರಥಿ ಲಯನ್ಸ್ ಪ್ರಾಂತ್ಯದ ಅಧ್ಯಕ್ಷರಾದ ಹೇಮಂತ್ ಕುಮಾರ್ ಬನ್ಸಾಲಿ  ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿತ್ತು. ಹಾಗೆಯೇ ಸಮಾಜಕ್ಕೆ ಒಳ್ಳೆಯ ಮಾದರಿಯಾಗುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಎಲ್ಲ ಗಣ್ಯರುಗಳು ತುಂಬಾ ಸಂತೋಷವಾಗಿ ಮಾತನಾಡಿದರು.

ಅಲ್ಲಿ ನೆರೆದಿದ್ದ ಗಣ್ಯರುಗಳು ಹಾಗೂ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಗರಸಭೆಯ ಅಧ್ಯಕ್ಷರು ಹಾಗೂ ಇನ್ನೂ ಪ್ರಮುಖರುಗಳು ಕಾರ್ಯಕ್ರಮ ನಡೆಯುತ್ತಿರುವುದು ಸಮಾಜಕ್ಕೆ ತುಂಬಾ ಮುಖ್ಯ  ಪಾತ್ರವನ್ನು ವಹಿಸುತ್ತದೆ.