-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಭಾರತೀಯ ಜೈನ್ ಮಿಲನ್ ವಲಯ 8 ಮಧ್ಯ ಕರ್ನಾಟಕ ದಾವಣಗೆರೆ ವಿಭಾಗ.
ಪರಮಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಗಳವರಿಗೆ ಭಾವಪೂರ್ಣ ವಿನಯಾಂಜಲಿಯೊಂದಿಗೆ, ಶ್ರೀ ಕ್ಷೇತ್ರ ಸ್ವಾಧಿ ಜೈನ ಮಠ ಆತಿಥ್ಯದಲ್ಲಿ ಮತ್ತು ಜೈನ್ ಮಿಲನ್ ಹಾವೇರಿ ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಸ್ವಾಧಿ ಜೈನ ಮಠದಲ್ಲಿ ಜರುಗುವ ಜಿನಭಜನಾ ಸ್ಪರ್ಧೆ 7ನೇ ಆವೃತ್ತಿ.
ಜಗದ್ಗುರು ಅಕಲಂಕ ಕೇಸರಿ ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಮತ್ತು ಮಾರ್ಗದರ್ಶನ ಸಹಯೋಗ ಆತಿಥ್ಯ ಹಾಗೂ ಶುಭಾಶೀರ್ವಾದದೊಂದಿಗೆ ವೀರ್ ಧರ್ಮಸ್ಥಳ ಸುರೇಂದ್ರ ಕುಮಾರ್ ರವರ ಅನುಭವಿ ಮಾರ್ಗದರ್ಶನದಲ್ಲಿ ವಿರಾಂಗನ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯಲ್ಲಿ ಅಖಿಲ ಕರ್ನಾಟಕ ಕಿರಿಯರ ಹಾಗೂ ಹಿರಿಯರ ಜಿನಭಜನಾ ಸ್ಪರ್ಧೆ.
ದಿನಾಂಕ 03-12-2023ನೇ ಭಾನುವಾರದಂದು ಶ್ರೀಕ್ಷೇತ್ರ ಸ್ವಾಧಿ ದಿಗಂಬರ ಜೈನ ಮಠದ ಸಭಾ ಭವನದಲ್ಲಿ ಜರುಗಲಿದೆ.
ಮಧ್ಯಕರ್ನಾಟಕ ದಾವಣಗೆರೆ ವಿಭಾಗಕ್ಕೆ ಸಂಬಂಧ ಪಟ್ಟ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜೈನ್ ಮಿಲನ್ ಮತ್ತು ಜೈನ ಸಮಾಜದ ಎಲ್ಲ ಶ್ರಾವಕ ಶ್ರಾವಕಿಯರು ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸ ಬೇಕಾಗಿ ವಿನಂತಿ.
ತಂಡದ ಹೆಸರನ್ನು ನೊಂದಾಹಿಸಿಕೊಳ್ಳಲು ಕೊನೆಯ ದಿನಾಂಕ 25-11-2023. ತಾವು ಭಾಗವಹಿಸಿ ಇತರರನ್ನು ಭಾಗವಹಿಸಲು ಪ್ರೇರೆಪಿಸಿ. ಧರ್ಮಜಾಗೃತಿ ಮೂಡಿಸಿ.
ತಮ್ಮೇಲ್ಲರಿಗೂ ಆದರದ ಸ್ವಾಗತವನ್ನು ಬಯಸುವವರು.
ಈ ಕಾರ್ಯಕ್ರಮವು ಜ್ವಾಲಮಾಲ ನ್ಯೂಸ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ.














