ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಪದ್ಮಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ದಿಗಂಬರ ಜೈನ ಸಮಾಜ ಚಾತುರ್ಮಾಸ ಉಪಸಮಿತಿ ಸೈಯೋಗದೊಂದಿಗೆ ಆರಾಧನ ಮಹೋತ್ಸವ ನಡೆಯಿತ್ತಿದ್ದು ಕೋಟೆ ಶ್ರೀ ಶಾಂತಿನಾಥ ಬಸದಿಯಲ್ಲಿ ಮುನಿ ಸೂವ್ರತ ವಿಧಾನ ಚಾತುರ್ಮಾಸದ ಭಾನುವಾರ ನಡೆಸಿದ ಆರಾಧನೆಯಲ್ಲಿ ಕಡೆಯದಾಗಿದ್ದು ಶ್ರೀ ಕ್ಷೇತ್ರ ಸೋಂಧಾ ಮಠದ ಸ್ವಾಮೀಜಿಯವರಾದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಶ್ರೀಮತಿ ಶೈಲಶ್ರೀ ಶಮಾನಂದ ಪ್ರಾಯೋಜಕತ್ವದಲ್ಲಿ ಅತ್ಯಂತ ವೈಭವವಾಗಿ ಜರುಗಿತು.
ಮೈಸೂರಿನ ಸಮಸ್ತ ಶ್ರಾವಕ ಶ್ರಾವಕಿಯರು ಭಾಗವಹಿಸುವುದರ ಮೂಲಕ ವಿಧಾನವನ್ನು ಮತ್ತು ಪುಣ್ಯಲಾಭಗೊಳಿಸಿದರು. ಸೋಂಧಾ ಮಠದ ಸ್ವಾಮೀಜಿ ಯವರು ವಿಧಾನವನ್ನು ತಾವೇ ನಡೆಸಿಕೊಟ್ಟರು. ಕಾರ್ಯಕ್ರಮವು ಅಭಿಷೇಕ ಮತ್ತು ಆರಾಧನೆಗಳಿಂದ ಅಮೋಘವಾಗಿ ಸಂಪನ್ನಗೊಂಡಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














