ಆನೆಕೆರೆ ಬಸದಿ / ಕಾರ್ಕಳ / PROMO/jwalamalanews / 2023

ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಜೈ ಜಿನೇಂದ್ರ  ವೀಕ್ಷಕರೆ,

ಭಾರತದ  ತೀರ್ಥಕ್ಷೇತ್ರಗಳ ಪರಂಪರೆಯಲ್ಲಿ ಪುಣ್ಯಕ್ಷೇತ್ರವೆಂದು ಪ್ರಸಿದ್ದವಾಗಿದೆ. ಮೂಡುಬಿದಿರೆಯನ್ನು ಒಳಗೊಂಡಂತೆ ಜೈನಕಾಶಿಯೆಂದೇ ಕರೆಯಲ್ಪಡುವ ಕಾರ್ಕಳ ಕ್ಷೇತ್ರ ಅಸಂಖ್ಯಾತ ಶ್ರದ್ಧಾವಂತರ ಭಕ್ತಿಯ ಕೇಂದ್ರವೆನಿಸಿದೆ. 18 ಜಿನಮಂದಿರಗಳಿಂದ  ಕಂಗೊಳಿಸುತ್ತಿರುವ  ಜಿನಮಂದಿರ ಹಿರಿಯಂಗಡಿಯ ಭಗವಾನ್ ಶ್ರೀ ನ್ಯೇಮಿನಾಥ ಸ್ವಾಮಿಯ ಹಿರೇಬಸದಿ ರಾಷ್ಟ್ರೀಯ ಸ್ಮಾರಕವೆನಿಸಿರುವ ಉನ್ನತ ಮಾನಸ್ಥಂಭ  ಮಾತ್ರವಲ್ಲದೇ ಅತ್ಯನ್ನುತವಾದ ಶಿಲಾಬೆಟ್ಟದ ಮೇಲೆ ಜಗತ್ತಿಗೆಲ್ಲಾ ತ್ಯಾಗದ ಸಂದೇಶವನ್ನು ಸಾರುತ್ತಿರುವ ಭಗವಾನ್ ಬಾಹುಬಲಿ ಸ್ವಾಮಿಯ 42 ಅಡಿ ಎತ್ತರದ ಏಕಶಿಲಾಬಿಂಬದ ಕಾರಣದಿಂದ ಲೋಕ ವಿಖ್ಯಾತಿಯನ್ನು ಪಡೆದಿದೆ. ಇದೆಲ್ಲವೂ ಜೈನರಾದ ನಮ್ಮೆಲ್ಲರ  ಮಹಾ ಭಾಗ್ಯವೆಂದೇ ಹೇಳಬೇಕು. ಶ್ರೇಷ್ಠ ಜೈನರ ರಾಜವಂಶವಾದ ಭೈರವರಸರ ರಾಜಧಾನಿಯಾಗಿ ಮೆರೆದ ಈ ಪುಣ್ಯ ಕ್ಷೇತ್ರ ಧೈವೀ ಶಕ್ತಿಗಳ ಸಾನಿಧ್ಯವನ್ನು ಪಡೆದಿರುವ ಪಾವನ ಕ್ಷೇತ್ರವೆನಿಸಿದೆ ಒಂದೊಮ್ಮೆ ಸುಂದರ ಅರಮನೆಯನ್ನು ಹೊತ್ತು ಮೆರೆದ ಈ ಪುಣ್ಯಭೂಮಿ ಇಂದು ಗುರುಮಠ ಸಂಸ್ಕಾರ ನೀಡುವ ಆಶ್ರಮಗಳು ಜೈನ ವಿದ್ಯಾಸಂಸ್ಥೆಗಳಿಂದ ಮೆರೆಯುತ್ತಿದೆ ಇಂತಹ ಪುಣ್ಯ ಕ್ಷೇತ್ರ ವಿಶ್ವದ ಪ್ರವಾಸಿ ಕೇಂದ್ರಗಳಲ್ಲಿ ಒಂದೆನಿಸಿದ್ದು ಎರಡು ಚತುರ್ಮುಖ ಬಸದಿಗಳನ್ನು ಹೊಂದಿರುವುದು ಇಲ್ಲಿಯ ವೈಶಿಷ್ಟ್ಯವೆನಿಸಿದೆ. ಎರಡು ಅದ್ವಿತೀಯ ಜಿನಾಲಯಗಳೆನೆಸಿದ್ದು ಸ್ಥಳೀಯ ಮತ್ತು ದರ್ಶನಾರ್ಥಿಗಳ  ಆಕರ್ಷಣೆಯ ಕೇಂದ್ರವೆಂದೆನಿಸಿದೆ. ಅದರಲ್ಲಿಯೂ ಹೆದ್ದಾರಿಯ ಬದಿಯಲ್ಲಿದ್ದು ವಿಶಾಲವಾದ ಸುಂದರ ಸರೋವರದ ನಡುವೆ ಕಂಗೊಳಿಸುವ ಆನೆಕೆರೆ ಚತುರ್ಮುಖ ಬಸದಿ ನಿರಾಯಾಸವಾಗಿ ಪ್ರತಿಯೊಬ್ಬರ ಕಣ್ಣಿಗೆ ಬೀಳುವ ಮಂದಿರವೆನಿಸಿದೆ. ಜೈನರ ಸಂಸ್ಕೃತಿಯ ಪ್ರತೀಕದಂತೆ ಇರುವ ಈ ಆನೆಕೆರೆ ಬಸದಿ ಇತ್ತೀಚಿನ ವರ್ಷಗಳಲ್ಲಿ ಶಿಥಿಲವಾಗಿ  ತುಂಬಾ ಅವಗಣಿತ ಸ್ಥಿತಿಯಲ್ಲಿದ್ದುದು ತಮಗೆಲ್ಲಾ ತಿಳಿದೇ ಇದೆ. ಪ್ರಸ್ತುತ ಈ ಬಸದಿಯನ್ನು ಸರ್ವಾಂಗ ಸುಂದರವಾಗಿ ಜೀರ್ಣೋದ್ದಾರಗೊಳಿಸುವ ಸಂಕಲ್ಪ ಕಾರ್ಯಗತಗೊಳ್ಳುತ್ತಿದ್ದು ಕೆಲಸಗಳು ವೇಗವಾಗಿ ನಡೆಯುತ್ತಿರುವುದನ್ನು ತಮ್ಮ ಗಮನಕ್ಕೆ ಮತ್ತೊಮ್ಮೆ ತರುತ್ತಿದ್ದೇವೆ.

ಮಾತಿಗೂ ನಿಲುಕದ ಅತಿ ಮನೋಹರ ಪ್ರಕೃತಿಯ ಮಡಿಲಲ್ಲಿ ಮೈದುಂಬಿ ನಿಂತ ಸರೋವರ ನಡುವೆ ಕಿರೇಬಸದಿಯೆಂದೇ ಖ್ಯಾತಿವೆತ್ತ ಜಿನಮಂದಿರ. ಈ ಸುಂದರ ಚತುರ್ಮುಖ ಜಿನಮಂದಿರದಲ್ಲಿ ನೆಲೆ ನಿಂತಿದ್ದಾರೆ ಶ್ರೀ ಆದಿನಾಥ ಶಾಂತಿನಾಥ ಚಂದ್ರನಾಥ ಮಹಾವೀರ ಈ ಬಸದಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಪಂಚಕಲ್ಯಾಣಕ್ಕೆ ತಯಾರಿ ನಡೆದಿದೆ. ಕಾರ್ಕಳದ ಹೃದಯಭಾಗದಲ್ಲಿ 26 ಎಕರೆ ವಿಸ್ತೀರ್ಣದಲ್ಲಿ ಶೋಭಿಸುತ್ತಿರುವ ಆನೆಕೆರೆ ಬೈಂದವರಸರ ಆನೆಗಳಿಗೆ ನೀರು ಕುಡಿಸಲು ಮತ್ತು ಸ್ನಾನ ಮಾಡಿಸಲು ನಿರ್ಮಾಣಗೊಂಡ ಸುಂದರ ಸರೋವರ ಅದರ ಮಧ್ಯೆ ಭೈರವರಸರ ವಂಶಸ್ಥರುಗಳು 16/05/1945 ರಲ್ಲಿ ಪ್ರತಿಷ್ಠಾಪನೆಗೊಳಿಸಿದ ಚತುರ್ಮುಖ ಕಿರೇಬಸದಿಯಲ್ಲಿ ಭಗವಾನ್ ಶ್ರೀ ಶ್ರೀ ಆದಿನಾಥ  ಸ್ವಾಮಿ, ಶ್ರೀ ಶಾಂತಿನಾಥ  ಸ್ವಾಮಿ, ಶ್ರೀ ಚಂದ್ರನಾಥ ಸ್ವಾಮಿ, ಶ್ರೀ  ಮಹಾವೀರ ಸ್ವಾಮಿ ಪರಂಪರಾನುಗತವಾಗಿ ಆರಾಧಿಸುತ್ತಾ ಬಂದಿರುವುದಲ್ಲದೇ ವಿಶೇಷವಾಗಿ ಮೇಗಿನ ನೆಲೆಯಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರು ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಗೊಂಡು  ಪೂಜಿಸ್ಪಡುತ್ತಿದ್ದರು. ಈಗಾಗಲೇ ಗುರುಹಿರಿಯರ ಉಪಸ್ಥಿತಿಯಲ್ಲಿ ನಡೆದ ಈ ಕ್ಷೇತ್ರದ ಸ್ಥಳ ಪ್ರಶ್ನೆಯಲ್ಲಿ ಈ ಕ್ಷೇತ್ರದ ಜೀರ್ಣೋದ್ದಾರ ಹಾಗೂ ಪುನರ್ ಪ್ರತಿಷ್ಠೆ ನೆರವೇರಿದರೆ ಇಡೀ ಕ್ಷೇತ್ರ  ವಿಶೇಷ ಪ್ರಸಿದ್ದಿಯನ್ನು ಪಡೆಯಲಿದೆ ಎಂದು ತಿಳಿದುಬಂದಿರುತ್ತದೆ. ವಿಶಿಷ್ಟ ವಾಸ್ತು ಶೈಲಿಯಿಂದ ಕಂಗೊಳಿಸುವ ರೀತಿಯಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಕಿರೆಬಸದಿ ಕ್ಷೇತ್ರ ಇಡೀ ಜೈನ ಬಸದಿಯ ಸ್ಥಾನಮಾನವನ್ನು ಹೆಚ್ಚಿಸಲಿದೆ ಹಾಗೂ ಪ್ರಸಿದ್ದ ಪ್ರವಾಸಿ ತಾಣವಾಗಲಿದೆ  ನಮ್ಮ ಭಾವನೆ. ಅದಕ್ಕೆಂದೇ ಎಲ್ಲರ ಸಹಕಾರದ ನಿರೀಕ್ಷೆಯೊಂದಿಗೆ ಕಾರ್ಯೋನ್ಮುಖರಾಗಿದ್ದೇವೆ. ಈ ಕಿರೆಬಸದಿ ಐದು ಶತಮಾನಗಳ ಹಿಂದೆ ರಾಜನ ನೇತೃತ್ವದಲ್ಲಿ ಪೂಜ್ಯ ದಿಗಂಬರ ಮುನಿ ಮಹಾರಾಜರ ಮಾರ್ಗದರ್ಶನ ಮತ್ತು ಸಾನಿಧ್ಯದಲ್ಲಿ ನೆರವೇರಿತು ಎಂದು ತಿಳಿದುಬಂದಿದೆ. ಪ್ರಸ್ತುತ ಪುಣ್ಯಭಾಗದಿಂದ ಯುಗಳ ಮುನಿಶ್ರೀಗಳಾದ ಪರಮಪೂಜ್ಯ 108 ಮುನಿಶ್ರೀ ಅಮೋಘಕೀರ್ತಿಮುನಿಮಹಾರಾಜರು ಮತ್ತು ಪರಮಪೂಜ್ಯ 108 ಮುನಿಶ್ರೀ ಅಮರಕೀರ್ತಿ ಮುನಿಮಹಾರಾಜರ ವಿಶೇಷ ಕೃಪಾಶೀರ್ವಾದದೊಂದಿಗೆ ಮತ್ತು ವಿಶೇಷ ಮುತುವರ್ಜಿಯೊಂದಿಗೆ  ಈ ಬಸದಿ ಸಂಪೂರ್ಣ ಶಿಲಾಮಯಗೊಳ್ಳಲು ಮಾರ್ಗದರ್ಶನ ನಮಗೆ ಲಭಿಸಿದೆ. ಈ ಬಸದಿಯಲ್ಲಿ ಈಗಾಗಲೇ ಸುಂದರ ಶಿಲಾಮಯ ಹೊರಗಿನ ಗುಡಿ ಮತ್ತು ಬಸದಿಯ ಸಂಪೂರ್ಣ ಶಿಲಾಮಯದೊಂದಿಗೆ  ಪುರಾತನ ವಾಸ್ತುಶಿಲ್ಪ ಕೆತ್ತನೆಯೊಂದಿಗೆ ಅತ್ಯಂತ ಸುಂದರವಾಗಿ ಮಾಡಲಾಗುತ್ತಿದೆ. ಸುಂದರ ಚತುರ್ಮುಖ ಕಿರೆಬಸದಿಯನ್ನು ಸಂಪೂರ್ಣ ಶಿಲಾಮಯವಾಗಿ ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದ್ದು ಕಾರ್ಕಳ ಜೈನ ಮಠಾದೀಶರಾದ ಪಾವನ ಸಾನಿಧ್ಯದಲ್ಲಿ ಬಸದಿಯ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿವೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಪದ್ಮವಿಭೂಷಣ ರಾಜಶ್ರೀ ಡಾ|| ವಿರೇಂದ್ರ ಹಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ  ಹಾಗು ಬಸದಿಯ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ  ಡಾ|| ಎಂ.ಎನ್ ರಾಜೇಂದ್ರ ಕುಮಾರ್ , ಕಾರ್ಯಾಧ್ಯಕ್ಷರು ಶ್ರೀ ಜೈನ ಧರ್ಮ ಜೀರ್ಣೋದ್ದಾರಕ ಸಂಘ ಇವರ ನೇತೃತ್ವದಲ್ಲಿ ಹಾಗೂ ಶ್ರೀ ಕೆ. ರತ್ನಾಕರರಾಜ್ , ಪಡುಬಿದಿರೆ ಬೀಡು , ಶ್ರೀ ಅಭಯ್ ಚಂದ್ರ ಜೈನ್ ಮೂಡುಬಿದಿರೆ  ,ಶ್ರೀ ಎಂ .ಕೆ ವಿಜಯ್ ಕುಮಾರ್ ಪ್ರಧಾನ ಕಾರ್ಯದರ್ಶಿ , ಶ್ರೀ ಜೈನಧರ್ಮ ಜೀರ್ಣೋದ್ದಾರಕ ಸಂಘ , ವಾಸ್ತುತಜ್ನರಾಗಿ  ಮೂಡುಬಿದಿರೆ ಸುದರ್ಶನ ಇಂದ್ರರು ಮತ್ತು ಸಮಾಜ ಬಾಂಧವರ ಸರ್ವ ಸಹಕಾರದೊಂದಿಗೆ  ಬಸದಿಯನ್ನು ಸುಂದರವಾಗಿ  ಅಭಿವೃದ್ದಿಗೊಳಿಸುವ ಧೃಡ ಸಂಕಲ್ಪದೊಂದಿಗೆ  ಜೀರ್ಣೋದ್ದಾರಕ್ಕೆ ಕಾರ್ಯ ಪ್ರವೃತ್ತರಾಗಿರುತ್ತಾರೆ. ಸುಮಾರು 2.22 ಕೋಟಿ ವೆಚ್ಚದಲ್ಲಿ ನಾಡಿದಾದ್ಯಂತ ಶ್ರಾವಕ ಬಂಧುಗಳ ಕೊಡುಗೈ ದಾನಿಗಳ ಸಹಕಾರದೊಂದಿಗೆ ಬಸದಿ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಾರ್ಕಳ ಶಾಸಕರು ಮಾನ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ವಿ. ಸುನೀಲ್ ಕುಮಾರ್ ರವರ ಮುತುವರ್ಜಿಯಿಂದ ಆನೆಕೆರೆಯ ಸುತ್ತಮುತ್ತಲಿನ ಬಸದಿಯು ಪ್ರಾರಂಭವಾಗುತ್ತಿರುವುದು ಯುಗಾಯುಗ.

ಕಾರ್ಕಳ ಜೀವಜಲ ಅಭಿವೃದ್ದಿ ಕೆರೆಯ ಮಧ್ಯದ ಚತುರ್ಮುಖ ಬಸದಿಯ ಜೀರ್ಣೋದ್ದಾರದೊಂದಿಗೆ  ಐತಿಹಾಸಿಕ ಮಹತ್ವವನ್ನು ಪಡೆದಿರುವ ಈ ಒಂದು ಪುಣ್ಯ ಕಾರ್ಯದಲ್ಲಿ ನಾಡಿದಾದ್ಯಂತ ಸಧರ್ಮ ಬಂಧುಗಳು ಮತ್ತು ಕೊಡುಗೈ ದಾನಿಗಳು ತುಂಬುಹೃದಯದ ಸಹಕಾರವನ್ನು ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.