ಎಂ ಎಂ ಜಿನೇಂದ್ರ

ಎಷ್ಟೋ ಬಾರಿ ಪದಗಳಲ್ಲಿ ಹೇಳಲಾಗದನ್ನು ರೇಖೆಗಳಲ್ಲಿ ಹೇಳಿಮುಗಿಸಬಹುದು, ರೇಖೆಗಳ ಮುಂದೆ ಬಣ್ಣವು ಬೇಕಿಲ್ಲ ಎನಿಸಬಹುದು, ರೇಖೆಗಳು ಮಾತನಾಡಲುಬಹುದು ಆದರೆ ಅದು ಕೇಳಿಸುವುದಿಲ್ಲ, ಕೇಳಿಸಿದರೆ ಅದು ಮನಸ್ಸಿಗೆ ಮಾತ್ರ. ಇದು ಎಮ್.ಎಮ್. ಜಿನೇಂದ್ರರವರ ಅನಿಸಿಕೆ.

ಹಲವು ಮನೆಗಳನ್ನು ತಮ್ಮ ಕಲೆಯಿಂದ ಸಿಂಗರಿಸಿದ,  ಹಲವು ಕಲಾಕೃತಿಗಳನ್ನು ತಮ್ಮ ಕೊಡುಗೆಯಿಂದ ನೀಡಿದ ನಮ್ಮ ಸಮಾರಂಭಗಳ ಮೇರಗನ್ನು ಹೆಚ್ಚಿಸಲು ಸುಂದರ ವೇದಿಕೆಯನ್ನು ನಿರ್ಮಾಣ ಮಾಡಿಕೊಡುವ ನಮ್ಮ ಸಮಾಜದ ಹೆಮ್ಮೆ ನಮ್ಮೆಲ್ಲರ ಮೆಚ್ಚಿನ ಉದಯೋನ್ಮುಖ ಕಲೆಗಾರ ಎಮ್.ಎಮ್. ಜೀನೆಂದ್ರರವರ ಕಲಾ ಪ್ರದರ್ಶನಕ್ಕಾಗಿ “ರೇಖೆಗಳು” ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಏನ್ನೂವ ಸ್ವಂತ ವೇದಿಕೆ ಸಜ್ಜಾಗಿದೆ, ಫೆಬ್ರವರಿ 4, 2017ರಂದು ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರು ಭಾಗವಹಿಸಿ ಪ್ರೋತ್ಸಾಹಿಸಿ.