ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಮೈಸೂರಿನಲ್ಲಿ ದಶಲಕ್ಷಣ ಪರ್ವ ವಿಧಿಪೂರ್ವಕವಾಗಿ ಆಚರಿಸಲಾಗುತ್ತಿದ್ದು ಮೊದಲನೇ ದಿನವಾದ ಉತ್ತಮ ಕ್ಷಮಾದಿನದ ಮಹತ್ವವನ್ನು ಮುನಿಶ್ರೀ 108 ಪ್ರಗಲ್ವಸಾಗರ ಮುನಿಮಹಾರಾಜರು ಪ್ರವಚನದ ಮೂಲಕ ಭೋದಿಸಿದರಲ್ಲದೇ ಪ್ರವಚನದ ಆಯ್ದ ಪ್ರಶ್ನಾವಳಿಗಳಿಗೆ ಉತ್ತರಿಸಿದವರಿಗೆ ಬಹುಮಾನದ ರೂಪದಲ್ಲಿ ಜಪಮಾಲೆ ಜಿನವಾಣಿಯನ್ನು ನೀಡಿದರು. ದಶಲಕ್ಷಣ ಪೂಜೆಯ ವಿಧಿವಿಧಾನಗಳ ಮೊದಲ ದಿನದ ಕಾರ್ಯಕ್ರಮಗಳ ದೃಶ್ಯಾವಳಿಗಳು ನಿಮಗಾಗಿ. ನಂತರ ಮುನಿಮಹಾರಾಜರು ಧರ್ಮದ ವಿಧಿವಿಧಾನಗಳ ಬಗ್ಗೆ ಅಲ್ಲಿ ಬಂದಿರುವಂತಹ ಜೈನ ಭಾಂಧವರಿಗೆ ಆಶೀರ್ವಚನವನ್ನು ಪಠಿಸಿದರು.














