ಜೈ ಜಿನೇಂದ್ರ ವೀಕ್ಷಕರೇ,
ಜೈನ ಧರ್ಮದ ಪ್ರಾಚೀನ ಸಿದ್ದ ಕ್ಷೇತ್ರ ಕನಕಗಿರಿ. ಭಗವಾನ್ ಶ್ರೀ ವಿಜಯ ಪಾರ್ಶ್ವನಾಥ ಸ್ವಾಮಿಯ ನಿರ್ವಾಣ ಕಲ್ಯಾಣ ಮಹೋತ್ಸವದ ಪ್ರಯುಕ್ತ ಮುಕುಟ ಸಪ್ತಮಿ ಪ್ರಯುಕ್ತ ಮೋಕ್ಷ ಕಲ್ಯಾಣ ಪೂಜೆಯನ್ನು 2023 ರ ಅಗಸ್ಟ್ 23 ರಂದು ವಿಶೇಷ ಆರಾಧನೆ ಪೂಜೆ ಮಹಾಭಿಷೇಕ ಮತ್ತು ಅನೇಕ ಧಾರ್ಮಿಕ ವಿಧಿ ವಿಧಾನಪೂರ್ವಕ ಕಾರ್ಯಗಳು ನಡೆಯಿತು.
ಪರಮಪೂಜ್ಯ ಸ್ವಸ್ತಿ ಶ್ರೀ ಭುವನಕೀರ್ತಿಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ಪ್ರಜ್ನಾಶ್ರವಣ 108 ದೇವನಂದಿ ಮುನಿಮಹಾರಾಜರ ಪರಮಶಿಷ್ಯರಾದ ಪರಮಪೂಜ್ಯ ಶ್ರೀ ಅನುಪಮಕೀರ್ತಿ ಮುನಿಮಹಾರಾಜರು, ಪರಮಪೂಜ್ಯ ಸ್ವಸ್ತಿ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಮಹಾಸ್ವಾಮಿಜಿಗಳವರು ಶ್ರೀ ದಿಗಂಬರ ಜೈನ ಮಠ ಕೊಲ್ಲಾಪುರ ಇವರ ನೇತೃತ್ವದಲ್ಲಿ ಭಗವಾನ್ ಶ್ರೀ ವಿಜಯ ಪಾರ್ಶ್ವನಾಥ ತೀರ್ಥಂಕರರ ಮಹಾಸ್ವಾಮಿ ಮೂಲ ಪ್ರತಿಮೆಗೆ 108 ಮಂಗಲ ಕಳಸಗಳಿಂದ ಅಭಿಷೇಕ ಮಹಾಪೂಜೆ ದೇವಿ ಪದ್ಮಾವತಿ ಅಮ್ಮನವರಿಗೆ ಜ್ವಾಲಾಮಾಲಿನಿ ಅಮ್ಮನವರಿಗೆ ಶ್ರೀ ಕೂಷ್ಮಾಂಡಿನಿ ಅಮ್ಮನವರಿಗೆ ಶ್ರೀ ಬ್ರಹ್ಮದೇವರಿಗೆ ವಿಶೇಷ ಶೋಷಷೋಪಚಾರ ಪೂಜೆ ನೆರವೇರಿತು.
ನಂತರ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪರಮಪೂಜ್ಯ ಮುನಿಮಹಾರಾಜರು ಕನಕಗಿರಿ ಶ್ರೀಗಳು ಹಾಗೂ ಕೊಲ್ಲಾಪುರ ಶ್ರೀಗಳವರ ಸಾನಿಧ್ಯದಲ್ಲಿ ಗೊಮ್ಮಟವಾಣಿ ಪತ್ರಿಕೆಯ ಸಂಪಾದಕರಾದ ಎಸ್.ಎಂ ಅಶೋಕ್ ಕುಮಾರ್ ರವರು, ಮೈಸೂರು ದಿಗಂಬರ ಸಮಾಜದ ಅಧ್ಯಕ್ಷರಾದ ಸುನೀಲ್ ಕುಮಾರ್, ಸರಗೂರು ಜೈನ ಸಮಾಜದ ಅಧ್ಯಕ್ಷರಾದ ನಾಗರಾಜುರವರು ಹಾಗೂ ಇತರ ಗಣ್ಯರು ಉಪಸ್ಥತಿತರಿದ್ದರು. ಅಲ್ಲಿ ನೆರೆದಿದ್ದ ಗಣ್ಯರುಗಳು ತಮ್ಮ ತಮ್ಮ ಅನಿಸಿಕೆ ಹಾಗೂ ಬಸದಿಯ ಕುರಿತು ಅಭಿಪ್ರಾಯಗಳನ್ನು ತಮ್ಮ ಆಶೀರ್ವಚನದ ಮೂಲಕ ತಿಳಿಸಿದರು.
ಪ್ರತಿವರ್ಷದಂತೆ ನಡೆದುಕೊಂಡು ಬರುತ್ತಿರುವ 2022-2023ನೇ ಸಾಲಿನ ಶೈಕ್ಷಣಿಕ ಸಾಧನೆಗಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರದ ಶ್ರೀ ಜೈನ್ ಎಜ್ಯುಕೇಶನ್ ಸೊಸೈಟಿ ಅವರಿಂದ ಕೀರ್ತಿ ಸನ್ಮಾನ ಏರ್ಪಡಿಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿದರು.














