ಕನಕಗಿರಿಯಲ್ಲಿ ನಡೆಯುತ್ತಿರುವ ಅತಿಶಯ ಮಹೋತ್ಸವದಲ್ಲಿ ಬೃಹತ್ ಮಹರ್ಷಿ ಪೂಜಪಾದ ಸಭಾ ಮಂಟಪದಲ್ಲಿ ಅಂತರ್ಮನಾ ಮುನಿಶ್ರೀ 108 ಪ್ರಸನ್ನಸಾಗರ ಮುನಿ ಮಹಾರಾಜರ ಹಾಗೂ ಕನಕಗಿರಿ, ಹರ ಹಂತಗಿರಿ, ಜಿನ ಕಂಚೆಯ ಭಟಾರಕರ ಮಾರ್ಗದರ್ಶನದಲ್ಲಿ ಅರಾಧನ ವಿಧಾನ ವಿಧಿವತ್ತಾಗಿ ನಡೆಯುತ್ತಿದೆ. ಮುನಿಶ್ರೀ 108 ಪಿಯೂಷ್ ಸಾಗರಜಿ ಮಹಾರಾಜರು, ಶುಲ್ಲಕ ಶ್ರೀ 105 ಪರ್ವ ಸಾಗರ ಮಹಾರಾಜರು ಉಪಸ್ಥಿತರಿದ್ದು ವ್ರತಿಕರು ಅರಾಧನೆಯಲ್ಲಿ ಪಾಲ್ಗೊಂಡು ಭಕ್ತಿ ಪೂಜೆಸಲ್ಲಿಸುತ್ತಿದ್ದಾರೆ.
ನಂತರ ಚಾಮರಾಜ ನಗರದ ಉಸ್ತುವಾರಿ ಸಚಿವರಾದ ಶ್ರೀ ಯು.ಟಿ. ಖಾದರ್ ರವರ ಆಗಮಮಿಸಿ ಸಂತಭವನದ ಉಧ್ಘಾಟನೆ ಹಾಗೂ ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯ ಉಧ್ಘಾಟನೆಯನ್ನು ಕೊಡ ಮಾಡಿದರು. ನಂತರ ಪರಮಪೂಜ್ಯ ಅಂತರ್ಮನಾ ಮುನಿಶ್ರೀ 108 ಪ್ರಸನ್ನಸಾಗರ ಮಹಾರಾಜರು, ಪರಮಪೂಜ್ಯ 108 ಮುನಿಶ್ರೀ ಪಿಯೂಷ್ ಸಾಗರ ಮಹಾರಾಜರು, ಪೂಜ್ಯ 105 ಶುಲ್ಲಕ ಶ್ರೀ ಪರ್ವ ಸಾಗರ ಮಹಾರಾಜರುಗಳ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ಪ್ರಾರಂಭವಾಯಿತು. ಪರಮ ಪೂಜ್ಯ ಸ್ವಸ್ತಿಶ್ರೀ ದವಳಕೀರ್ತಿ ಭಟಾರಕರು, ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿ ಸೇನಾ ಭಟಾರಕರು, ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟಾರಕರು ದಿವ್ಯಸಾನಿಧ್ಯವಹಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ರಾಮುರವರು, ಜಿಲ್ಲಾಪಂಚಾಯಿತಿ ಸದಸ್ಯರಾದ ಶ್ರೀ ನವೀನ್, ಮಹೋತ್ಸವದ ರಾಷ್ಟೀಯ ಅಧ್ಯಕ್ಷರಾದ ಆರ್.ಕೆ ಜೈನ್ ರವರು, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಮತಿ ಪುಟ್ಟಮ್ಮ ಉಪಸ್ಥಿತರಿದ್ದರು. ಶ್ರೀ ಹರೀಶ್ ಕುಮಾರ್ ಹೆಗ್ಡೆರವರು ಪ್ರಾಸ್ತವಿಕ ನುಡಿಗಳ ನಾಡಿದರು. ಉಧ್ಘಾಟನೆಮಾಡಿದ ಯು.ಟಿ.ಖಾದರ್ ರವರು ಮಾತನಾಡಿ ಜೈನಧರ್ಮದ ಶ್ರೇಷ್ಠತೆ ಬಗ್ಗೆ ಉತ್ತಮ ಮಾತುಗಳ ನಾಡಿದರು. ಕಾರ್ಯಧ್ಯಕ್ಷರಾದ ಶ್ರೀ ಸುಧೀರ್ ರವರು ವಂದನಾರ್ಪಣೆಯನ್ನು ನೆರೆವೇರಿಸಿಕೊಟ್ಟರು. ಕುಮುದಾ ನಾಗಭೂಷಣ್ ರವರ ಅಚ್ಚುಕಟ್ಟಾದ ನಿರೂಪಣೆಯ ಕಾರ್ಯಕ್ರಮದಲ್ಲಿ ಜೈನ ಸಮಾಜದ ಗಣ್ಯರು ಸದಸ್ಯರುಗಳು ಹಾಗೂ ಉಪಸ್ಥಿತರಿದ್ದರು.














