ಮಂಗಳೂರು ಜೈನ್ ಮಿಲನ್ ನರವಿ ಕಾರ್ಯಗಾರ / ಜ್ವಾಲಾಮಾಲಾ ನ್ಯೂಸ್ / 2023

ಜೈ ಜಿನೇಂದ್ರ ವೀಕ್ಷಕರೆ, ಭಾರತೀಯ ಜೈನ್ ಮಿಲನ್ ವಲಯ 8, ಇದರ ಮಂಗಳೂರು ವಿಭಾಗದ ಮಿಲನ್ ಘಟಕಗಳ ಪದಾಧಿಕಾರಿಗಳಿಗಾಗಿ ಕಾರ್ಯಗಾರವನ್ನು ನಾರಾವೀಯ ಧರ್ಮಶ್ರೀ ಸಭಾಭವನದಲ್ಲಿ ದಿನಾಂಕ 20-8-2023 ಭಾನುವಾರದಂದು ಆಯೋಜಿಸಲಾಗಿತ್ತು. ಉದ್ಘಾಟಕರಾಗಿ ವಲಯ 8ರ ಅಧ್ಯಕ್ಷರಾದ ಯುವರಾಜ್ ಭಂಡಾರಿ, ಮುಖ್ಯ ಅತಿಥಿಗಳಾಗಿ  ನಿಕಟ ಪೂರ್ವ ಅಧ್ಯಕ್ಷರಾದ ವೀರ್ ಪುಷ್ಪರಾಜ್ ಜೈನ್ ಹಾಗೂ ಗೌರವ ಉಪಸ್ಥಿತಿಯಲ್ಲಿ ವಲಯ 8ರ ಪ್ರಧಾನ ಕಾರ್ಯದರ್ಶಿಗಳಾದ ರತ್ನರಾಜ್ ಜೈನ್ ಹಾಗೂ ಶ್ರೀ ಸುದರ್ಶನ್ ವಲಯ ಉಪಾಧ್ಯಕ್ಷರು ಮತ್ತು ಶ್ರೀ ಸುಭಾಷ್ ಚಂದ್ರ ಜೈನ್ ಮಂಗಳೂರು ವಲಯ ಕಾರ್ಯದರ್ಶಿ ಕೆ ಪ್ರಸನ್ನ ಕುಮಾರ್ ವಲಯ 8ರ ಕಾರ್ಯಧ್ಯಕ್ಷರು ಮತ್ತು ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆ ಗಣ್ಯರು ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಗಾರಕ್ಕೆ ಚಾಲನೆಯನ್ನು ನೀಡಿದರು.

 ಮುಖ್ಯ ಅತಿಥಿಗಳಾದ ವಿರ್ ಪುಷ್ಪರಾಜ್ ಜೈನ್ ರವರು ಕಾರ್ಯಕ್ರಮವನ್ನು ಕುರಿತು ಮಾತನಾಡಿ ಕಾರ್ಯಕ್ರಮದ ಆಯೋಜನೆಯನ್ನು ಮಾಡಿರುವ ಪರಿಯನ್ನು ಶ್ಲಾಘಿಸಿದರು.

ವಲಯ ಉಪಾಧ್ಯಕ್ಷರಾದ ಶ್ರೀ ಸುದರ್ಶನ್ ಜೈನ್ ರವರು ಮಾತನಾಡಿ ವಿಶೇಷವಾಗಿ ಮಂಗಳೂರು ವಿಭಾಗಕ್ಕೆ ತನ್ನದೆ ಆದ ಸ್ಥಾನ ಮತ್ತು ಗೌರವವಿದೆ ಏಕೆಂದರೆ ಪ್ರತಿ ಬಾರಿಯು ಮಂಗಳೂರು ವಿಭಾಗ ವಲಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆದಿದೆ ಎಂದರು.

ತಮ್ಮ ಉದ್ಘಾಟನ ಭಾಷಣದಲ್ಲಿ ಯುವರಾಜ್ ಭಂಡಾರಿಯವರು ಮಾತನಾಡುತಾ ಮಿಲನ್ ಘಟಕಗಳ ಪದಾಧಿಕಾರಿಗಳಿಗೆ ಸಲಹೆ ಸೂಚನೆಯನ್ನು ನೀಡಿದರು. ನಂತರ ಮಂಗಳೂರು ವಿಭಾಗದಲ್ಲಿ ಎಲ್ಲ ಜೈನ್ ಮಿಲನ್ ಗಳು ತುಂಬ ಚೆನ್ನಾಗಿ ಕೆಲಸಮಾಡುತ್ತಿದ್ದಾರೆ.

ಭಾರತೀಯ ಜೈನ್ ಮಿಲನ್ 8ರ ಕಾರ್ಯದರ್ಶಿ ರತ್ನರಾಜ್ ಜೈನ್ ರವರು ವಲಯದ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೆ ನಡೆದ ಕಾರ್ಯಕ್ರಮಗಳ ವಿವರಣೆಯನ್ನು ಸಭೆಗೆ ವಿವರಿಸಿದರು.

ಶ್ರೀ ಖಜಾಂಚಿಗಳಾದ ಚಂದ್ರಶೇಖರ್ ಅರಿಗ ವಾರ್ಷಿಕ ಶುಲ್ಕ ಇತರ ವಿಚಾರ ಕುರಿತು ಸಭೆಗೆ ತಿಳಿಸಿದರು.

ಜಂಟಿ ಕಾರ್ಯದರ್ಶಿ ಮಹಾವೀರ್ ಗೊಗ್ಗೆ ಯವರು ವಲಯದ ಮಾಸಿಕ ಸಭೆಯ ರಿಪೋರ್ಟ್ ಗಳ ಕುರಿತು ವಿವರಣೆಯನ್ನು ನೀಡಿದರು.

ಪ್ರಚಾರ ಸಮಿತಿಯ ಕುರಿತು ಜಂಟಿ ಕಾರ್ಯದರ್ಶಿ ವೈಶಾಲಿ ಚಂದ್ರ ಪ್ರಭು ರವರು ಮಾತನಾಡಿದರು. ಪ್ರಚಾರ ಸಮಿತಿಯ ಕಾರ್ಯವನ್ನು ಬೆಂಗಳೂರಿನಲ್ಲಿ ಸುರೇಂದ್ರಣ್ಣನವರ ಆಶೀರ್ವಾದದಿಂದ ಆರಂಭಿಸಿದ್ದಾಗಿ ತಿಳಿಸಿದರು.

ಮಂಗಳೂರು ವಿಭಾಗದ ನಿರ್ದೇಶಕರುಗಳಾದ ಶ್ರೀ ಶ್ರೀವರ್ಮ ಅಜ್ರಿ, ಶ್ರೀ ಸುಕುಮಾರ್ ಭಲ್ಲಾಳ್, ಪ್ರಮೋದ್ ಕುಮಾರ್, ಯುವರಾಜ್ ಬಲಿಪಾ, ಶ್ವೇತ ಮೂಡುಬಿದ್ರೆ, ರಾಜಶ್ರೀ ಹೆಗ್ಗಡೆ ಕಾರ್ಯಗಾರದಲ್ಲಿ ಭಾಗವಹಿಸಿ ಮಿಲನ್ ಚಟುವಟಿಕೆಗಳ ಹೆಚ್ಚಿಸುವ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8ರ ಪದಾಧಿಕಾರಿಗಳ ಕಾರ್ಯಗಾರದ ಕೈಪಿಡಿ ಪುಸ್ತಕವನ್ನ ಉದ್ಘಾಟಿಸಲಾಯಿತು.

ಮಂಗಳೂರು ವಿಭಾಗದ 18 ಮಿಲನ್ ಗಳ 95 ಮಿಲನ್ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.

ಸಮಾರೋಪ ಸಮಾರಂಭದಲ್ಲಿ ಕಾರ್ಯಧ್ಯಕ್ಷರಾದ ಶ್ರೀ ಕೆ ಪ್ರಸನ್ನಕುಮಾರ್ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಾ.ರಾ.ವಿ ಜೈನ್ ಮಿಲನ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ರವರು ಎಲ್ಲರನ್ನು ವಂದಿಸಿದರು.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್