ಜೈ ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತದಲ್ಲಿ ಭಕ್ತರು ಕಟ್ಟಿದ ಆಶ್ರಮದಲ್ಲಿ 15 ವರ್ಷಗಳಿಂದ ತಮ್ಮ ತಪೋಸಾಧನೆಯಲ್ಲಿ ನಿರತರಾಗಿದ್ದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಜುಲೈ 6 ರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದನ್ನು ಗಮನಿಸಿದ ಭಕ್ತರು ಚಿಕ್ಕೋಡಿ ಪೋಲೀಸ್ ಠಾಣೆಗೆ ದೂರು ನೀಡುತ್ತಾರೆ ಶೋಧ ಕಾರ್ಯ ಕೈಗೊಂಡಾಗ 2ದಿನಗಳಿಂದ ಕಾಣೆಯಾಗಿದ್ದ ಆಚಾರ್ಯರು ಕೊಲೆಯಾಗಿರುವುದು ಬೆಳಕಿಗೆ ಬರುತ್ತದೆ. ಅವರ ದೇಹವನ್ನು ಕತ್ತರಿಸಿ ಬೋರ್ ವೆಲ್ ಒಳಕ್ಕೆ ಹಾಕಲಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದು ಅನುಮಾನದ ಮೇರೆಗೆ ಇಬ್ಬರನ್ನು ಬಂಧಿಸಲಾಗುತ್ತದೆ. ಅವರೇ ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತದೆ. ಭಟ್ಟಾರಕರುಗಳು ಮುಂದೆ ನಿಂತು ಶವದ ಅಂತ್ಯ ಸಂಸ್ಕಾರವಾಗುತ್ತದೆ. ಪರಮಪೂಜ್ಯ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ನ್ಯಾಯ ಸಿಗುವವರೆಗೂ ಜೈನ ಮುನಿಗಳ ರಕ್ಷಣೆಯ ಭರವಸೆ ಸಿಗುವವರೆಗೂ ಉಪವಾಸ ಮಾಡುವುದಾಗಿ ಒಂದು ವೇಳೆ ಸಿಗಲಿಲ್ಲವಾದರೆ ಸಲ್ಲೇಖನ ಕೈಗೊಳ್ಳುವುದಾಗಿ ಸಂಕಲ್ಪ ಮಾಡುತ್ತಾರೆ ನಂತರ ನಡೆದ ಬೆಳವಣಿಗೆಯೇ ಜೈನರು ಒಗ್ಗಟ್ಟಾಗುವುದು ಮಾತ್ರವೇ ನಮ್ಮ ಮುಂದಿನ ದಾರಿ ಎಂದು ಪ್ರಾರಂಭಿಸಿದ ಹೋರಾಟ. ಮುನಿಗಳಿಂದ ಮಠಾದೀಶರುಗಳಿಂದ ಖಂಡನೆ. ಚಿಕ್ಕೋಡಿಯ ಗುಣಧರನಂದಿ ಮಹಾರಾಜ್ ಮುನಿಮಹಾರಾಜರಿಗೆ ಇದರಿಂದ ತುಂಬಾ ಆಘಾತವಾಗಿದ್ದು ದುಃಖತಪ್ತರಾಗಿದ್ದಾರೆ. ಇಲ್ಲಿನ ಎಸ್ ಪಿ ಯವರು ತುಂಬಾ ಚುರುಕಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಇಲ್ಲಿನ ಎಂ.ಎಲ್.ಎಗಳು, ಎಂಪಿಗಳೂ ಯಾವ ವಿಐಪಿಗಳೂ ಸಹ ಇಲ್ಲಿಯವರೆಗೂ ಯಾರೂ ಸಹ ನಮ್ಮನ್ನು ತಿರುಗಿಯೂ ನೋಡುತ್ತಿಲ್ಲ. ನಮ್ಮ ಜೈನ ಮುನಿಗಳಿಗೆ ಸುರಕ್ಷಿತ ಕೊಟ್ಟು ನಮ್ಮ ಜೈನ ಧರ್ಮದ ಬಾಂಧವರು ಅಲ್ಪಸಂಖ್ಯಾತರಾಗಿದ್ದೇವೆ ಆದ್ದರಿಂದು ನಮ್ಮನ್ನು ಯಾವ ಮುಖ್ಯಮಂತ್ರಿಗಳೂ ಸಹ ಇದುವರೆಗೂ ಯಾವ ಸಂತಾಪವನ್ನೂ ಸೂಚಿಸಿಲ್ಲ ನಮ್ಮ ಜೈನ ಮತ ಬಾಂದವರು ಎಲ್ಲರೂ ಸೇರಿ ಮತದಾನದಲ್ಲಿ ಆಯ್ಕೆ ಮಾಡಿ ಗೆಲ್ಲಿಸಿದ್ದೇವೆ, ಆದರೆ ಇವತ್ತು ಯಾವ ರಾಜಕಾರಣಿಗಳಾಗಲೀ, ಅಥವಾ ಸರ್ಕಾರಿ ಅಧಿಕಾರಿಗಳಾಗಲೀ ನಮ್ಮ ಬಸದಿ ಹಾಗೂ ನಮ್ಮ ಜೈನ ಬಾಂದವರ ಕಡೇ ತಿರುಗಿಯೇ ನೋಡುತ್ತಿಲ್ಲ. ಇದರಿಂದ ನನಗೆ ತುಂಬಾ ನೋವಾಗಿದೆ ನಮ್ಮ ಜೈನ ಸಮಾಜಕ್ಕೆ ಜೈನ ಬಸದಿಗಳಿಗೆ ಸುರಕ್ಷತೆಯನ್ನು ಒದಗಿಸಿಕೊಡಬೇಕು ಹಾಗೂ ಇವತ್ತು ಇದೇ ರೀತಿ ಮುಂದುವರೆಯುತ್ತಿದ್ದರೆ ನಮ್ಮ ಜೈನ ಬಾಂದವರಿಗೆಲ್ಲಾ ಹಾಗೂ ನಮಗೂ ಸಹ ಸುರಕ್ಷತೆಇಲ್ಲದಂತಾಗಿದೆ. ಇವರ ಸರ್ಕಾರಕ್ಕೆ ನಮ್ಮಂತಹ ಮಠ, ಬಸದಿಗಳಿಂದ ಹಲವಾರು ಶಾಂತಿಪೂರ್ವಕ ಕೆಲಸಗಳನ್ನು ಸಾಮಾಜಿಕವಾಗಿ , ವಿದ್ಯಾಭ್ಯಾಸಗಳಿಗೆ , ನಿರಾಶ್ರಿತರಿಗೆ ಆಶ್ರಯ ಹೀಗೆ ಹತ್ತುಹಲವಾರು ಕಾರ್ಯಗಳನ್ನು ಮಾಡಿಕೊಂಡು ನಮ್ಮ ಪರಿಶ್ರಮದಿಂದ ನಡೆಸಿಕೊಂಡು ಬರುತ್ತಿದ್ದೇವೆ. ನಮಗೆ ನ್ಯಾಯ ದೊರೆಯುವವರೆಗೂ ನಾನು ನೀರನ್ನು ಸಹ ಕುಡಿಯದೇ ಹಾಗೂ ಏನನ್ನೂ ಉಪಹಾರ ತೆಗೆದುಕೊಳ್ಳದೇ ಅಮರಾಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುತ್ತಿದ್ದೇನೆ. ನಮಗೆ ನ್ಯಾಯ ಸಿಗಬೇಕು ಅಷ್ಟೇ. ಎಂದು ತುಂಬಾ ನೊಂದು ಕೊಂಡು ಮುನಿಮಹಾರಾಜರು ಸರ್ಕಾರಕ್ಕೆ ಒತ್ತಡವನ್ನು ಹೇರುವುದರ ಮೂಲಕ ಹೇಳಿಕೆಯನ್ನು ಕೊಟ್ಟರು.
ಇಡೀ ರಾಜ್ಯದ ಎಲ್ಲಾ ಜೈನ ಸಮಾಜ ಬಾಂಧವರು , ಮುನಿಗಳು , ಸಂಘಸಂಸ್ಥೆಗಳು, ಆಚಾರ್ಯ ಮುನಿವರ್ಯರುಗಳು ಎಲ್ಲರೂ ಸೇರಿ ಹೇಳುವ ಹೇಳಿಕೆ ಒಂದೇ ಅದೇನೆಂದರೆ, ನಮಗೆ ರಕ್ಷಣೆ ಬೇಕು ಹಾಗೂ ಈ ಕೃತ್ಯವನ್ನು ಮಾಡಿರುವವರಿಗೆ ಘೋರ ಶಿಕ್ಷೆಯಾಗಬೇಕು ಸಮಾಜಕ್ಕೆ ಎಲ್ಲರೂ ಪಾಠ ಕಲಿಯುವಂತಹ ಪಾಠವಾಗಬೇಕೆಂದು ಸರ್ಕಾರಕ್ಕೆ ಒತ್ತಡ ಹೇರಿವುದರ ಮೂಲಕ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.














