ಅರಸಾಪುರ / ವಾರ್ಷಿಕ ಪೂಜಾ ಮತ್ತು ದಶಮಾನೋತ್ಸವ / jwalamalanews / 2023

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ಭಗವಾನ್ ಶ್ರೀ 1008 ಶ್ರೀ ರ್ಮನಾಥಸ್ವಾಮಿ ಮತ್ತು ಶ್ರೀ ಬ್ರಹ್ಮಯಕ್ಷ ಜಿನಮಂದಿರದ ವಾರ್ಷಿಕ ಪೂಜೆ ಹಾಗೂ ದಶಮಾನೋತ್ಸವದ ಸಮಾರಂಭ ದಿನಾಂಕ 4-6-2023ರಂದು ನಡೆಯಿತು.

ಶ್ರೀ ಕ್ಷೇತ್ರ ಸಿಂಹನ ಗದ್ದೆ ಪರಮ ಪೂಜ್ಯ ಸ್ವಸ್ತಿಶ್ರೀ ಶ್ರೀ ಮಧನಬಿನವ, ಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರು, ಶ್ರೀಕ್ಷೇತ್ರ ಕನಕಗಿರಿ ಪರಮ ಪೂಜ್ಯ ಭಟ್ಟಾರಕ ಚೂಡಾಮಣಿ ಸ್ವಸ್ತಿ ಶ್ರೀ ಭೂವನ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು, ಶ್ರೀ ಕ್ಷೇತ್ರ ಮೂಡು ಬಿದ್ರೆ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಚಾರ್ಯ ವರ್ಯ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು, ಶ್ರೀ ಕ್ಷೇತ್ರ ಅರತಿಪುರ ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ವರೂರಿನ ಪರಮ ಪೂಜ್ಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿಗಳ ಪಾವನ ಸಾನಿಧ್ಯ ಮತ್ತು ಆಶೀರ್ವಾದದೊಂದಿಗೆ ಶ್ರೀ ಪಿ ನಾಗೇಂದ್ರ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಜಿನ ಮಂದಿರದಲ್ಲಿ ಕಲ್ಯಾಣ ಮಂದಿರ ಆರಾಧನೆ ಹಾಗೂ ಅಭಿಷೇಕ ಕಾರ್ಯಕ್ರಮಗಳು ವಿಧಿಪೂರ್ವಕವಾಗಿ ನಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಧರ್ಮ ತೀರ್ಥ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಹಿರಿಯ ವಿದ್ವಾಂಸರಾದ ಡಾ|| ಎಸ್ ಪಿ ಪದ್ಮ ಪ್ರಸಾದ್, ಜ್ವಾಲ ಮಾಲ ಡಾಟ್ ನ್ಯೂಸ್ ನ ನಿರ್ದೇಶಕರಾದ ಶ್ರೀಮತಿ ವೈಶಾಲಿ ಚಂದ್ರಪ್ರಭು, ಶ್ರೀಮತಿ ಮಾಲ ಮತ್ತು ಶ್ರೀ ಸುದಾಕರ್ ಬೆಳ್ಳೂರು, ಇವರುಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತುಮಕೂರಿನ ಹಾಲು ಒಕ್ಕೂಟದ ನಿರ್ದೇಶಕರಾದ ಶ್ರೀ ಈಶ್ವರಯ್ಯನವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಂಚ ಮಠದ ಭಟ್ಟಾರಕರುಗಳು ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿದ್ದು ಸನ್ಮಾನಿತರಿಗೆ ಹಾಗೂ ಆಯೋಜಕರಿಗೆ ಮತ್ತು ಭಕ್ತಾಧಿಗಳಿಗೂ ಕೂಡ ಸಂತಸ ತಂದಿತ್ತು.