-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡು ಶ್ರೀ 1008 ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಚೈತ್ಯಾಲಯ ಧಾಮ ಸಂಪ್ರೋಕ್ಷಣ ಮತ್ತು ಪುನರ್ ಪ್ರತಿಷ್ಠಾಪನ ಮಹೋತ್ಸವ, ಪಂಚಕಲ್ಯಾಣ ಪೂರ್ವಕ ಕಳಸ ಸ್ಥಾಪನೆ ಮಹೋತ್ಸವ ದಿನಾಂಕ 27-05-2023 ಹಾಗೂ 28-05-2023 ರಂದು ಪರಮ ಪೂಜ್ಯ ಸ್ವಸ್ತಿಶ್ರೀ ಭವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ಪರಮ ಪೂಜ್ಯ ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಹಾಗೂ ಪೂಜ್ಯ ರಾಜಶ್ರೀ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಪಾವನ ಸಾನಿಧ್ಯ ಹಾಗೂ ಆಶೀರ್ವಾದದೊಂದಿಗೆ ನಡೆಯಲಿದೆ.
ದಿನಾಂಕ 28-5-2023 ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಸಭೆ, ಪರಮ ಪೂಜ್ಯ ಭಟ್ಟಾರಕರುಗಳ ಪಾವನ ಸಾನಿಧ್ಯ ಹಾಗೂ ಆಶೀರ್ವದದೊಂದಿಗೆ, ಶ್ರೀಮತಿ ಶುಭ ನಾಗರಾಜುರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಡಿ ಸುರೇಂದ್ರ ಕುಮಾರ್ ರವರ ಉಪಸ್ಥಿತಿಯೊಂದಿಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪಿರಿಯಾಪಟ್ಟಣದ ವಿಧಾನ ಸಭಾ ಕ್ಷೇತ್ರದ ವಿಧಾನ ಸಭಾ ಸದಸ್ಯರಾದ ಶ್ರೀ ಕೆ ವೆಂಕಟೇಶ್ ರವರು ನಡೆಸಿಕೊಡಲಿದ್ದಾರೆ. ಈ ಒಂದು ಮಹೋತ್ಸವದಲ್ಲಿ ಸರ್ವರು ಆಗಮಿಸಿ ಪುಣ್ಯ ಲಾಭ ಪಡೆಯ ಬೇಕಾಗಿ ಮಾಕೋಡು ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಜೈನ ಸೇವಾ ಟ್ರಸ್ಟ್ ವತಿಯಿಂದ ವಿನಂತಿಸಲಾಗಿದೆ. ಕಾರ್ಯಕ್ರಮವು ಜ್ವಾಲಮಾಲ ನ್ಯೂಸ್ ನಲ್ಲಿ ಪ್ರಸಾರಗೊಳ್ಳಲಿದೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














