ಹೊಸದುರ್ಗ ಭಗವಾನ್ ಶ್ರೀ 1008 ವೈಭವ ಶ್ರೀ ಪಾರ್ಶ್ವನಾಥ ಸ್ವಾಮಿಯವರ ತ್ರಿಕೂಟ ಚೂಡಾಮಣಿ ಜಿನಮಂದಿರದ ಸುವರ್ಣ ಮಹೋತ್ಸವ ಮತ್ತು ಧರ್ಮಚಕ್ರ ಆರಾಧನಾ ಕಾರ್ಯಕ್ರಮ. ಸುಂದರ ದರ್ಪಣ ಜಿನಮಂದಿರವಾಗಿ ಸಜ್ಜಾಗಿರುವ ಜಿನಮಂದಿರದ 50 ವರ್ಷಗಳ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು ದಿನಾಂಕ: 20/05/2023, 21/05/2023, ಮತ್ತು 22/05/2023 ರಂದು ಮಹೋತ್ಸವ ಹೊಸದುರ್ಗದ ಶ್ರೀ ಗಣೇಶ ಸದನ ದಲ್ಲಿ ನಡೆಯಲಿದೆ. ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಸ್ವಾಮೀಜಿಯವರು ಶ್ರೀ ಕ್ಷೇತ್ರ ಹೊಂಬುಜ. ಪರಮಪೂಜ್ಯ ಸ್ವಸ್ತಿ ಶ್ರೀ ಅಕಲಂಕ ಕೇಸರಿ ಭಟ್ಟಾಕಲಂಕ ಸ್ವಾಮೀಜಿಯವರು ಶ್ರೀ ಕ್ಷೇತ್ರ ಸೋಂದಾ. ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಸ್ವಾಮೀಜಿಗಳು ಶ್ರೀ ಕ್ಷೇತ್ರ ಸಿಂಹನಗದ್ದೆ ಎನ್. ಆರ್ .ಪುರ ಪೂಜ್ಯ ಶ್ರೀಗಳವರ ಆಶೀರ್ವಚನ ಹಾಗೂ ಮಾರ್ಗದರ್ಶನದಲ್ಲಿ ಹಾಗೂ ಡಾ|| ವೀರೇಂದ್ರ ಹೆಗ್ಗಡೆಯವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಮಾರ್ಗದರ್ಶನ ಹಾಗೂ ಶುಭಾಶೀರ್ವಾದೊಂದಿಗೆ ಮಹೋತ್ಸವದ ಉದ್ಘಾಟನೆಯನ್ನು ಶ್ರೀ ಡಿ. ಸುರೇಂದ್ರ ಕುಮಾರ್ ಹಾಗೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ನೆರವೇರಿಸಲಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವ್ಯವಸ್ಥಿತವಾಗಿ ಆಯೋಜನೆಗೊಡ ಮಹೋತ್ಸವಕ್ಕೆ ತಾವೆಲ್ಲರೂ ಅತಿ ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾಗಿರಿ. ಕಾರ್ಯಕ್ರಮವು ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿ ನೇರಪ್ರಸಾರವಾಗಲಿದೆ.














