ಪರಮಪೂಜ್ಯ ಮುನಿಶ್ರೀ 108 ಹೆಗಲಮುನಿ ಮಹಾರಾಜರ ಚರಣಾರವಿಂದಗಳಿಗೆ ನಮಿಸುತ್ತಾ, ಹಾಗೆಯೇ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದಂತಹ ಶ್ರೀ ರಾಜಶ್‍ಜ್ಯೋತಿದೋಷಿ ವಾಲ್ಚಂದ್ ರೂಪ್ ಶ್ರೀ ಕೀರ್ತಿರೂಪಿ ದಾವಡ ಅಧ್ಯಕ್ಷರು ವೀರ ಶಾಸನ ಟ್ರಸ್ಟ್ ಮುಂಬಯಿ ಹಾಗೂ ಮುನಿಗಳ ಎಲ್ಲಾ ಕಾರ್ಯಕ್ರಮಗಳಿಗೂ ಉತ್ತೇಜನನೀಡುತ್ತಿರುವ ದಾನ ಮಾಡಿದ ಅವರು ಅವರ ಪರಮ ಭಕ್ತರಾಗಿರುವ ಅವರು ಮುಂಬಯಿಯಲ್ಲಿ 8 ಚಾತುರ್ಮಾಸಗಳನ್ನು ಮಾಡಿಸಿದ್ದಾರೆ. ಒಳ್ಳೆ ಧೈವ ಭಕ್ತರು ಉದಯಪುರದಲ್ಲಿ ಅವರ ತಂದೆ ಬಹಳ ಸುಂದರ ಸಮವಸರಣಗಳನ್ನು ನಿರ್ಮಿಸಿದ್ದಾರೆ ಹಾಗೂ ಶ್ರೀ ನವೀನ್ ಜೈನ್ ಇವರು ಉದ್ಯಮಿಯಾಗಿದ್ದು ಚೆನ್ನೈನಲ್ಲಿ ನಡೆದ ಇಂದ್ರಧ್ವಜ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸ್ತಿ ಹೊಸಕೋಟೆಯಲ್ಲಿ ಜೀರ್ಣೋದ್ದಾರಕ್ಕೆ ಕೈಜೋಡಿಸಿದ್ದಾರೆ. ಇಂದು ನಮ್ಮ ಉದ್ಘಾಟನಾ ಸಮಾರಂಭಕ್ಕೆ ಬಂದು ಕಾರ್ಯಕ್ರಮಕ್ಕೆ ಬಹಳ ಮೆರುಗನ್ನು ತಂದಿದ್ದಾರೆ. ಹಾಗೂ ಅನೀಲ್ ಸೇಠಿ ದಂಪತಿಗಳು ಸಹ ಬಂದಿದ್ದಾರೆ ಅವರಿಗೂ ಸಹ ಎಲ್ಲರಿಗೂ ಸಹ ಸ್ವಾಗತವನ್ನು ಕೋರುತ್ತೇನೆ. ಮುನಿಗಳ ಒಂದು ಕಾರ್ಯಕ್ರಮಕ್ಕೆ ಜಿನಭಜನೆಯನ್ನು ನೋಡಬಂದಂತಹ ಎಲ್ಲ ಮಿಲನ್ ಪದಾದಿಕಾರಿಗಳಿಗೆ ಸದಸ್ಯರಿಗೆ ಶ್ರಾವಕ ಶ್ರಾವಕಿಯರಿಗೆ ಜೈ ಜಿನೇಂದ್ರ ಹಾಗೂ ಹೊಸವರ್ಷದ ಶುಭಾಶಯಗಳು. ನಿನ್ನೆಯಿಂದ ನಡೆಯುತ್ತಿರುವ ಭಜನಾ ಕಾರ್ಯಕ್ರಮಗಳು ಎಲ್ಲರೂ ಚೆನ್ನಾಗಿ ವೀಕ್ಷೀಸುತ್ತಿದ್ದೀರಿ ಹಾಗೂ ನಮ್ಮ ಜೈನ್ ಮಿಲನ್ ವಲಯ 8ರ ವಿಭಾಗದಲ್ಲಿ ನಡೆಯುವ ಪ್ರತಿಯೊಂದು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದೆ. ಇದಕ್ಕೆ ಪ್ರತಿಯೊಬ್ಬರೂ ಸಹ ಸಹಕಾರಗಳನ್ನು ನೀಡುತ್ತಾ ಬಂದಿದ್ದಾರೆ. ಹಾಗೂ ನಮ್ಮ ಸಂಸ್ಥೆಗಳಿಂದ ಇನ್ನೂ ಹತ್ತು ಹಲವಾರು ಕಾರ್ಯಗಳು ನಡೆಯುತ್ತಾ ಬಂದಿದೆ ಹಾಗೆಯೇ ಮುಂದೆಯೂ ಸಹ ಮುಂದುವರೆಸಿಕೊಂಡು ಬರುತ್ತೇವೆ.
ಹಾಗೂ ಇಂದಿನ ನೃತ್ಯ ಭಜನೆಯನ್ನು ನೀಡಿದ ಎಲ್ಲರಿಗೂ ತುಂಬುಹೃದಯದ ಅಭಿನಂದನೆಗಳನ್ನು ಕೋರುತ್ತೇನೆ. ಈ ಕಾರ್ಯಕ್ರಮದ ಆಯೋಜನೆಯನ್ನು ಮಾಡಿದ ಸೋನಿಯವರಿಗೂ ಧನ್ಯವಾದಗಳನ್ನು ಮಾಡುತ್ತಿದ್ದೇನೆ. ಏಕೆಂದರೆ 3 ಪದ್ಯಗಳಿಗೆ ನೃತ್ಯ ಸಂಯೋಜನೆಯನ್ನು ಉಜಿರೆಯ ತಂಡದೊಂದಿಗೆ ತುಂಬಾ ಅದ್ಘುತವಾಗಿ ನಡೆಸಿಕೊಟ್ಟರು. ಭಜನೆಯನ್ನು ಹಾಡಿದ ಶಂಕರ್ ಶಾನಭೋಗ್ ತುಂಬಾ ಸುಂದರವಾಗಿ ಹಾಡಿದ್ದಾರೆ. ಈ ಭಜನೆಯನ್ನು ಕರ್ನಾಟಕದಲ್ಲಿ ಎಲ್ಲಾದರೂ ಕಾರ್ಯಕ್ರಮವಿದ್ದರೆ ಈ ಭಜನೆಯನ್ನು ಹಾಡುತ್ತಿದ್ದಾರೆ. ನಮ್ಮ ಜೈನ ಧರ್ಮದ ಕಾರ್ಯಕ್ರಮದಲ್ಲಿ ಅಲ್ಲದೇ ಹಿಂದುಗಳ ಕಾರ್ಯಕ್ರಮಗಳಲ್ಲೂ ಈ ಭಜನೆಯನ್ನು ಕೇಳಿ ಆನಂದಿಸುತ್ತಿದ್ದಾರೆ.
ಈ ಕಾರ್ಯಕ್ರಮವು ಇಷ್ಟು ಸುಂದರವಾಗಿ ಮೂಡಿಬರಲು ಸಹಕರಿಸಿದ ಪ್ರತಿಯೊಬ್ಬರಿಗೂ ತಮ್ಮ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ಭಾರತೀಯ ಜೈನ್ ಮಿಲನ್ ನ ಅಧ್ಯಕ್ಷರಾದ ಶ್ರೀಮತಿ ಡಿ. ಸುರೇಂದ್ರ ಕುಮಾರ್ ರವರು ಎಲ್ಲರನ್ನೂ ಕುರಿತ ಸ್ವಾಗತ ಹಾಗೂ ಅಭಿನಂದನಾ ಭಾಷಣವನ್ನು ಮಾಡಿದರು.














