ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಅಂಧಕಾರದಿಂದ ಬೆಳಕಿನೆಡೆಗೆ , ಅಜ್ನಾನದಿಂದ ಸುಜ್ನಾನದೆಡೆಗೆ ಸನ್ಮಾರ್ಗದೆಡೆಗೆ ದಾರಿ ತೋರುವ ಅಂತಹ ಗುರುಗಳ ಸಾಲಿನಲ್ಲಿ ನಿಲ್ಲುವ ನಮ್ಮೆಲ್ಲರ ಪ್ರೀತಿಯ ಸ್ವಸ್ತಿಶ್ರೀ ಧವಳಕೀರ್ತಿ ಭಟ್ಠಾರಕ ಮಹಾಸ್ವಾಮೀಜಿಯವರ ಚರಣಾರಾವಿಂದಕ್ಕೆ ಅರ್ಪಣೆ .
ಕಾಲನ ಅಬ್ಬರದಲ್ಲಿ ಎಲ್ಲೋ ಕಳೆದುಹೋಗುತ್ತಿದ್ದ ತಮಿಳುನಾಡಿನ ಅರಹಂತಗಿರಿಗೆ ಪುನರ್ಜನ್ಮ ದೊರೆತಿದ್ದು ಶ್ರವಣಬೆಳಗೊಳದ ಕರ್ಮಯೋಗಿಗಳು ತಮ್ಮ ಜೊತೆ 1979ರಲ್ಲಿ ಕರೆತಂದ 13 ರ ಬಾಲಕ ಧರಣೇಂದ್ರರಿಂದ . ಇಂತಹ ಪವಾಡಗಳು ಸಾಧ್ಯವಾಗುವುದು ದೂರದೃಷ್ಠಿ ಹೊಂದಿದ ಇತ್ತೀಚೆಗಷ್ಟೇ ನಮ್ಮನ್ನೆಲ್ಲಾ ಅಗಲಿದ ಸ್ವಸ್ತಿಶ್ರೀ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕರಂತಹ ಮಹಾನ್ ವ್ಯಕ್ತಿಗಳಿಂದ ಅನ್ನುವುದು ಅತಿಶಯೋಕ್ತಿ ಅಲ್ಲ. 1979 ರಲ್ಲಿ ತಮಿಳುನಾಡಿನ ಆಳ್ವಿಕೆಯಲ್ಲಿ ಪಂಚಕಲ್ಯಾಣಕ್ಕೆ ಆಗಮಿಸಿದ ಕರ್ಮಯೋಗಿಗಳ ಮನದಲ್ಲಿ ತಮಿಳುನಾಡಿನಲ್ಲಿ ಕಾಣಸಿಗುತ್ತಿದ್ದ ಶ್ರೀಮಂತ ಜೈನ ಐತಿಹಾಸಿಕ ಕುರುಹು ಬಸದಿಗಳ ಪುನಹ್ ಚೇತನ ಸಾಧ್ಯವಾಗಿಸಲು ಮಠದ ಸ್ಥಾಪನೆ ಅವಶ್ಯ ವೆಂದು ಎನಿಸಿರಲೇಬೇಕು. ಅಂತೆಯೇ ಅವರ ಕನಸಿನ ಯೋಜನೆಗೆ ಇಂಬು ದೊರೆತಿದ್ದು ಆಳವೀಯ ಬಾಲಕ ಧರಣೇಂದ್ರ ರಿಂದ ಪೂರ್ವಾಶ್ರಮದಲ್ಲಿ ಧರಣೇಂದ್ರ ಪಾರ್ಶ್ವನಾಥ ಶಾಸ್ತ್ರಿಗಳಾಗಿದ್ದ ಧವಳಕೀರ್ತಿ ಭಟ್ಟಾರಕರು ಜನಿಸಿದ್ದು 1967 ರಲ್ಲಿ ತಮಿಳುನಾಡಿನ ಉಪವೇಲೂರು ಗ್ರಾಮದಲ್ಲಿ . ತಂದೆ ಶ್ರೀ ಪಾರ್ಶ್ವನಾಥ ಹಾಗೂ ತಾಯಿ ಸುಗುಣಮ್ಮನವರು . ಮುಂದೆ ಕರ್ಮಯೋಗಿಗಳ ಆಶ್ರಯದಲ್ಲಿ ಶ್ರವಣಬೆಳಗೊಳ, ಕಾಶಿ ಮುಂತಾದೆಡೆ ಅಧ್ಯಯನ ಮಾಡಿದ ಧರಣೇಂದ್ರರು ಹೆಚ್ಚಿನ ಜ್ನಾನಾರ್ಜನೆಗೆ ಆಚಾರ್ಯ ಶ್ರಿ 108 ವಿದ್ಯಾಸಾಗರ ಮುನಿಮಹಾರಾಜರು ಹಾಗೂ ಆರ್ಯಂಕ ಗಣನಿ 105 ಜ್ನಾನಮತಿ ಮಾತಾಜಿಯವರ ಬಳಿ ತರಬೇತಿ ಪಡೆದರು.
ನಂತರ ಜೈನ ಸಿದ್ದಾಂತದ ವಿಷಯದಲ್ಲಿ ಎಂ.ಇ ಶಿಕ್ಷಣ ಪೂರೈಸಿ ಅಂದಿನ ರಾಷ್ಟ್ರಪತಿ ಶ್ರೀ ಕೆ.ಆರ್ ನಾರಾಯಣನ್ ರವರಿಂದ ಚಿನ್ನದ ಪದಕ ಪಡೆದು ಮುಂದೆ ಜ್ಯೋತಿಷ್ಯ ಶಿಕ್ಷಣದಲ್ಲೂ ಎಂ. ಎ ಪದವಿ ಹೊಂದಿ 1997ರಲ್ಲಿ ಶ್ರವಣಬೆಳಗೊಳಕ್ಕೆ ಹಿಂತಿರುಗಿದರು. ಹೀಗೆ ಶ್ರವಣಬೆಳಗೊಳದ ಪ್ರೋತ್ಸಾಹ ಸ್ಪೂರ್ತಿಯೊಂದಿಗೆ ಕಳೆದ ಅವರು ಪೂಜ್ಯರಿಂದ ಶ್ರವಣಬೆಳಗೊಳ ಸಾಂಸ್ಕೃತಿಕ , ಐತಿಹಾಸಿಕ ,ಸಾಹಿತ್ಯ ಶಿಕ್ಷಣ ಕ್ಷೇತ್ರ ಎಲ್ಲದರಲ್ಲೂ ಅಭಿವೃದ್ದಿ ಹೊಂದುತ್ತಾ ಮಾರ್ಪಾಡುಗಳನ್ನು ಗಮನಿಸುತ್ತಲೇ ಬಂದರು. ಹೀಗೆ ಬೆಳೆದು ಅರ್ಹನಾದ ಶಿಷ್ಯನನ್ನು ಹಿರಿಯ ಶ್ರೀಗಳು 1998ರಲ್ಲಿ ತಮಿಳುನಾಡಿನ ಹರಹಂತಗಿರಿಗೆ ಶ್ರೀ ಧವಳಕೀರ್ತಿ ಭಟ್ಟಾರಕರೆಂದು ನಾಮಾಂಕಿತಗೊಳಿಸಿ ಮಠಾದೀಶರನ್ನಾಗಿ ಮಾಡಿ ಕ್ಷೇತ್ರದ ಅಭಿವೃದ್ದಿ ಮಾಡಲು ಶಿಷ್ಯನಿಗೆ ನೆಲುವಾಗಿ ನಿಂತರು. ಹಿಂದೆ ಎಲ್ಲಾ ಇದ್ದು ಈಗ ಎಲ್ಲಾ ಕಳೆದುಕೊಂಡು ಕೇವಲ ಐತಿಹಾಸಿಕ ಕುರುಹನ್ನು ಉಳಿಸಿ ನಿಂತ ಕ್ಷೇತ್ರವಾದ ಅರಹಂತಗಿರಿಯಲ್ಲಿ ಮಹಾದಾಮಿಗಳಾದ ಶ್ರೀಮಾನ್ ಎಂ.ಕೆ ಜೈನ್ ಶ್ರೀಮತಿ ಸರಿತಾ ಎಂ.ಕೆ ಜೈನ್ ರವರ ಸಹಯೋಗದೊಂದಿಗೆ














