ಪರಮ ಪೂಜ್ಯ 108 ಚಿನ್ಮಯಸಾಗರ ಮುನಿಗಳ ವಿರಚಿತ
“ಕರ್ನಾಟಕ ಸಿರಿ”
ಏನದು ಸಾಹಿತ್ಯ ಏನದು ಸ್ನೇಹ ಸಂಬಂಧ, ಕರ್ನಾಟಕದ ಏನದು ಅದ್ಬುತ ಅನುಬಂಧ.
ಕರುನಾಡಿನದು ಅದೆಂತಹ ಅದ್ಬುತ ಸೌಂದರ್ಯ, ಏನದು ಔದರ್ಯ ಜನರಲ್ಲಿ ಏನದು ಧೈರ್ಯ.
ಎಷ್ಟೊಂದು ಸುಂದರ ಸಂಸ್ಕೃತಿ, ಎಷ್ಟೊಂದು ಸುಂದರ ಸಂಸ್ಕಾರ, ಏನದು ಉಚ್ಚ ವಿಚಾರ, ಏನದು ಸದ್ಗುಣಗಳ ಸಂಚಾರ. ಪರಿ ಪರಿ ಪರಿಮಳ ಹರಡಿಸುವ ಏನದು ಸಾಹಿತ್ಯದ ರೀತಿ,
ಎಂತಹ ಕಲೆ, ಎಂತಹ ಕೌಶಲ್ಯ, ಎಂತಹ ಸತ್ಯ, ನೋಡಿದವರ ಜೀವನ ಕ್ರತ ಕ್ರತ್ಯ,
ಸತ್ಯ ಅಹಿಂಸೆ ತ್ಯಾಗದ ಸಂದೇಶ ಸಾರುವ ಏನದು ಭೌವ್ಯ ಬಾಹುಬಲಿ ಮೂರ್ತಿ, ಏನದು ಶಿಕ್ಷಣದ ಸ್ಪೂರ್ತಿ, ಏನದು ಜಗದಗಲ ಹರಡಿದೆ ಕರ್ನಾಟಕದ ಕೀರ್ತಿ.
ಏನದು ಸಮತೆ, ಏನದು ಕ್ಷಮತೆ, ಏನದು ಕರುನಾಡಿನ ಸ್ತ್ರೀಯರ ಶಕ್ತಿ, ಏನದು ಸರಳತೆ, ಏನದು ಸಹಜತೆ, ವ್ಯಕ್ತಿ ವ್ಯಕ್ತಿ ಏನದು ಭಕ್ತಿ.
ಕರುನಾಡಿನದು ಏನದು ಕ್ರಾಂತಿ, ಏನದು ಶಾಂತಿ, ನಾಡು ನಾಡಲ್ಲಿ ಕರುನಾಡು ಎಷ್ಟು ಶ್ರೇಷ್ಟ, ಇಡಿ ವಿಶ್ವದಲ್ಲಿ ಕರ್ನಾಟಕ ಎಷ್ಟು ವಿಶಿಷ್ಟ, ಎಲ್ಲದರಲು ಕರ್ನಾಟಕ ಎಷ್ಟು ಉತ್ಕೃಷ್ಟ.
ಪರಸ್ಪರ ಜನರಲ್ಲಿ ಏನದು ವಿಶ್ವಾಸ, ಸತ್ಯ ಅಹಿಂಸೆ ಏನದು ಅವ್ಯಾಸ, ಏನದು ಇತಿಹಾಸ, ಏನದು ಕರ್ನಾಟಕದ ಸುಖದ ಪ್ರವಾಸ.
ಏನದು ಕರ್ನಾಟಕದ ಉಡುಗೆ, ಏನದು ಸುಂದರ ಸ್ತ್ರೀಯರ ತೊಡುಗೆ, ಸ್ವಾದಿಷ್ಟ ಸಸ್ಯ ಆಹಾರ ಏನದು ಅಡುಗೆ, ಜಗತ್ತಿಗೆ ಏನದು ಕರ್ನಾಟಕದ ಕೊಡುಗೆ.
ಏನದು ಕನ್ನಡ ನುಡಿ ಏನದು ಕನ್ನಡ ನಾಡು ಏನದು ಕನ್ನಡಿಗರ ಸಡಗರ ಸನ್ನಡತೆ. ಏನದು ಸಜ್ಜನತೆ, ಏನದು ಮಾನವೀಯತೆ, ಏನದು ಕನ್ನಡಿಗರ ಸಾಮರ್ಥ್ಯದ ಧೃಡತೆ.
ಏನದು ಚಂದನ ವೃಕ್ಷ, ಏನದು ಪ್ರೀತಿಯ ಪಕ್ಷ, ಕರ್ನಾಟಕದ ಜನರು ಎಷ್ಟೊಂದು ದಕ್ಷ.
ಶರಣಾಗತರಾದವರಿಗೆ ಏನದು ಸುರಕ್ಷೆ, ಕರ್ನಾಟಕದಲ್ಲಿ ಏನದು ಸುಖ ಏನದು ಸುಭಿಕ್ಷೆ,
ಕರ್ನಾಟಕದಲ್ಲಿ ಏನದು ಮಳೆ, ಕರ್ನಾಟಕದಲ್ಲಿ ಏನದು ಬೆಳೆ, ಕನ್ನಡಿಗರಲ್ಲಿ ಏನದು ಕರುಣೆಯ ಹೊಳೆ. ಜನರ ಮುಖದಲ್ಲಿ ಏನದು ಕಳೆ.
ಏನದು ಕೃಷ್ಣ ಕಾವೇರಿಯ ಕಲಕಲ ದ್ವನಿ, ಕರ್ನಾಟಕದಲ್ಲಿ ಏನದು ಚಿನ್ನದ ಗಣಿ.
ಕರುನಾಡದಿ ಎಷ್ಟೊಂದು ಸಾಧು ಸಂತ ಮುನಿ ಏನದು ಜನುವಾರಿಯ ಜೆಂಕರಿಸುವ ಪ್ರತಿದ್ವನಿ.
ಎಂದು ಯಾರು ಹೆದರದಿರಲಿ ಕರ್ನಾಟಕದ ಹೆಸರು ಕೆಡಸದಿರಲಿ, ಕರ್ನಾಟಕದವರ ಯುಕ್ತಿ ಶಕ್ತಿ ಮತ್ತು ಭಾವ ಭಕ್ತಿ ಎಮದು ಬಾಡದಿರಲಿ.
ಬರಗಾಲ ಬಾರದಿರಲಿ ಬಡತನ ಕಾಡದಿರಲಿ ಯಾರು ಹಿಂಸೆ ಮಾಡದಿರಲಿ ಯಾರಿಗೂ ರೋಗದ ಕಾಟ ಕಾಡದಿರಲಿ.
ಕರ್ನಾಟಕದ ಕಳೆ ಕಡಿಮೆಯಾಗದಿರಲಿ, ಕರ್ನಾಟಕ ಕೀರ್ತಿ ಕಳಂಕವಾಗದಿರಲಿ.
ಕರ್ನಾಟಕದ ಶಾಂತಿ ಕುಂದದಿರಲಿ, ಕರ್ನಾಟಕದವರ ಮನ ಎಂದು ಗಂಧದಿರಲಿ.
ಕರ್ನಾಟಕದಲ್ಲಿ ಜಾತಿ ಬೇಡ ಪ್ರೀತಿ ಬೆಳೆಯಲಿ, ಅಹಿಂಸೆಯ ಆನಂದದ ರೀತಿ ಬೆಳೆಯಲಿ,
ಆಧುನಿಕತೆ ಬೇಡ ಆದ್ಯಾತ್ಮ ಬೆಳೆಯಲಿ, ಆಡಂಬರ ಬೇಡ ಆತ್ಮಿಯತೆ ಬೆಳೆಯಲಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














