ಅರಿಹಂತಗಿರಿ ಪ್ರೋಮೋ / ಜ್ವಾಲಾಮಾಲಾ ನ್ಯೂಸ್ / 2023

 -: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ತಮಿಳುನಾಡು ರಾಜ್ಯದ ತಿರುವಣ್ಣಮಲೈ ಜಿಲ್ಲೆಯಲ್ಲಿರುವ ಐತಿಹಾಸಿಕ ಪುಣ್ಯ ಕ್ಷೇತ್ರವಾದ ಅರಹಂತ ಗಿರಿ ಕ್ಷೇತ್ರದಲ್ಲಿ ನೂತನವಾದ ಜಿನ ಮಂದಿರ ಸ್ಥಾಪನೆಯಾಗುತ್ತಿದೆ. ಈ ಮಂದಿರ ಶ್ರವಣಬೆಳಗೊಳದ ಜಗದ್ಗುರು ಕರ್ಮಯೋಗಿ ಯುಗಪುರುಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಶ್ರೀ ಸರ್ವಾರ್ಥ ಸಿದ್ದಿ ಜಿನ ಮಂದಿರ ಎಂದು ನಾಮಕರಣ ಮಾಡಿದ್ದಾರೆ. ಈ ಜಿನ ಮಂದಿರದ ಒಳಗೆ 5 ಭರತ ಕ್ಷೇತ್ರ, 5 ವಿದೇಹ ಕ್ಷೇತ್ರ, 5 ಐರಾವತ ಕ್ಷೇತ್ರಗಳಲ್ಲಿ ಇರುವಂತಹ 740 ಜಿನ ಬಿಂಬಗಳ ಸ್ಥಾಪನೆ ಮತ್ತು ನಂದಿಶ್ವರ ಪಂಚಮೇರು ಮುಂತಾದ ಮಧ್ಯಲೋಕದಲ್ಲಿ ಇರುವ ಅತ್ಯುತ್ತಮ ಜಿನ ಚೈತ್ಯಾಲಯ ಅದರೆ 458 ಜಿನ ಮಂದಿರ ಬಿಂಬಗಳ ಸ್ಥಾಪನೆ ಮಾಡಲಾಗುತ್ತದೆ. ಒಟ್ಟು ಮಧ್ಯಮ ಲೋಕದ ಎಲ್ಲ ತೀರ್ಥಂಕರರು ಮತ್ತು ಅಪ್ರತಿಮ ಜಿನ ಚೈತ್ಯಾಲಯಗಳ ಜಿನ ಬಿಂಬಗಳ ಸ್ಥಾಪನೆ ಇಲ್ಲಿ ಹಾಗುತ್ತಿದೆ. ಮತ್ತು ನವಗ್ರಹ ಬಿಂಬವು ಕೂಡ ಸ್ಥಾಪನೆಯಾಗುತ್ತಿದೆ. ಬರುವ ಏಪ್ರಿಲ್ 29 ನೇ ತಾರೀಖಿ ನಿಂದ ಮೇ 3ನೇ ತಾರೀಖಿನ ವರೆಗೆ ನಡೆಯಲಿರುವ ಈ ಪ್ರತಿಷ್ಠಾ ಮಹೋತ್ಸವದಲ್ಲಿ ಅಕಲಂಕ ಪರಂಪರೆ ಚತುರ್ಥ ಪಟ್ಟಾಧೀಶರಾದ ವಿದ್ಯಾವಾಚಸ್ಪತಿ ತಪಶ್ಯಚಾರ್ಯ ಚಕ್ರವರ್ತಿ ಚತುರ್ಥ ಪಟ್ಟಾಧೀಶ ಪರಮಪೂಜ್ಯ ಆಚಾರ್ಯ ಶ್ರೀ ಸುವಿಧಿಸಾಗರ ಮುನಿ ಮಹಾರಾಜರ ಸತ್ಸಂಘ,ಆಚಾರ್ಯ ಶ್ರೀ ದೇವನಂದಿ ಮಹಾರಾಜರವರ ಪರಮ ಶಿಷ್ಯರಾದ ಯುಗಳ ಮುನಿ ಮಹಾರಾಜರು ಇವರುಗಳ ದಿವ್ಯ ಉಪಸ್ಥತಿ ಮತ್ತು ನೇತೃತ್ವದಲ್ಲಿ ಹಾಗೂ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಯುಗಪುರುಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭ ಆಶೀರ್ವಾದದೊಂದಿಗೆ ಅವರ ಪರಮ ಶಿಷ್ಯರಾದ ಭಟ್ಟಾರಕ ಚಿಂತಾಮಣಿ ವಾತ್ಸಲ್ಯ ಮೂರ್ತಿ ಜ್ಞಾನವಿತ್, ಜ್ಯೋತಿಷ್ಯ ವಿತ್, ಜ್ಞಾನ ಮೂರ್ತಿ ಪ್ರತಿಷ್ಠಾ ಸಿದ್ದಾಂತ ಚಕ್ರವರ್ತಿ ಧರ್ಮ ರತ್ನಾಕರ ಸಂಸ್ಕೃತಿ ಸಮ್ರಾಟ ಸಾಧನ ರತ್ನ ಸ್ವಸ್ತಿಶ್ರೀ ಡಾ|| ಧವಲಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮತ್ತು ಎಲ್ಲ ಮಠದ ಪರಮ ಪೂಜ್ಯ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗ ದರ್ಶನ  ಮತ್ತು ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆರಿಕ ಮಾತಾಜೀಯವರ ಉಪಸ್ಥತಿ ಹೆಗ್ಗಡೆ ಪರಿವಾರದವರ ಉಪಸ್ಥಿತಿಯಲ್ಲಿ ದಿನಾಂಕ 30-04-2023 ರಂದು ಸ್ವಸ್ತೀಶ್ರೀ ಡಾ|| ಧವಲ ಕೀರ್ತಿ ಸ್ವಾಮೀಜಿಯವರ 25 ನೇ ವರ್ಷದ ರಜತ ಮಹೋತ್ಸವ ಪಟ್ಟಾಭಿಷೇಕದ ವಿಶೇಷ ಕಾರ್ಯಕ್ರಮ ಜರುಗುವುದು. ಶ್ರೀ ಸುವಿಧಿ ಸಾಗರ ಮುನಿಮಹಾರಾಜ ರಿಂದ ರಚಿತವಾದ ಮತ್ತು ಅನುವಾದ ಮಾಡಲ್ಪಟ್ಟ 150 ಗ್ರಂಥಗಳ ಬಿಡುಗಡೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು ಈ ಎಲ್ಲ ಕಾರ್ಯಕ್ರಮಗಳಲ್ಲಿ ತಾವುಗಳು ಪಾಲ್ಗೊಂಡು ಪುಣ್ಯಲಾಭವನ್ನು ಪಡೆಯಬೇಕೆಂದು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯಕ್ರಮವು ಜ್ವಾಲಮಾಲ ನ್ಯೂಸ್ ನಲ್ಲಿ ಕೂಡ ನೇರಪ್ರಸಾರಗೊಳ್ಳಲಿದೆ. ಬನ್ನಿ ಭಾಗವಹಿಸಿ ಧರ್ಮ ನಗರಿ ಅರಹಂತ ಗಿರಿಯಲ್ಲಿ ಭಗವಾನ್ ನೇಮಿನಾಥ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ.

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್