ಪ್ರಭಾವನ ಪ್ರಶಸ್ತಿ ವೈಶಾಲಿ ಚಂದ್ರಪ್ರಭು 2023

ಎಲ್ಲರಿಗೂ ಸ್ವಾಗತ

10 ರಿಂದ 12 ಜನರಿಂದ ಶುರುವಾದ ನಮ್ಮ ಸಂಸ್ಥೆಯು 10 ವರ್ಷ ದಾಟಿರುವುದು ಸಂತೋಷದ ಸಂಗತಿಯಾಗಿದೆ ಅದರಲ್ಲೂ ಈ ಬಾರಿಯ ದಶಮನೋತ್ಸವದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ತುಂಬ ವಿಶೇಷವಾಗಿದೆ.

ವೈಶಾಲಿ ಪ್ರಭು ಜ್ವಾಲ ಮಾಲ ನ್ಯೂಸ್ ಮುಖಾಂತರ ಪ್ರಖ್ಯಾತಿ ಪಡೆದಿರುವ ಇವರು , ಎಲ್ಲರಿಗು ಯುವಶಕ್ತಿಯಾಗಿ ಪ್ರೇರಣೆಯಾಗಿದ್ದಾರೆ,ಇದು ಮಾಧ್ಯಮದ ದೊಡ್ಡ ವಿಶೇಷವಾಗಿದೆ,ದೃಶ್ಯ ಹಾಗೂ ಶ್ರವ್ಯ ಈ ಎರಡು ದೊರೆತಿರುವುದು ಸಂತೋಷದ ಸಂಗತಿಯಾಗಿದೆ, ಈಗ ಎಲ್ಲರೂ ಮನೆಯಲ್ಲೆ ಕುಳಿತು ಕರ್ನಾಟಕದ್ಯಾಂತ ನೆಡೆಯು ಜೈನ ಧರ್ಮದ ಎಲ್ಲಾ ಕಾರ್ಯಕ್ರಮಗಳಾದ ಪಂಚಕಲ್ಯಾಣ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ವಿಕ್ಷೀಸಬಹುದಾಗಿದೆ,

ವೈಶಾಲಿ ಪ್ರಭು ಇವರ ಕಿರು ಪರಿಚಯ ಹೀಗಿದೆ;

ಜ್ವಾಲ ಮಾಲ ನ್ಯೂಸ್ ನ ಶ್ರೀಮತಿ ವೈಶಾಲಿ ಚಂದ್ರ ಪ್ರಭುರವರು ಶ್ರೀ ಕ್ಷೇತ್ರ ಶ್ರವಣಬೆಳಗೂಳದ ಮಗಳಾಗಿ, ಬಾಲ್ಯದಲ್ಲೆ ಶ್ರೀ ಭಟ್ಟಾರಕ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನೆಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೆರೆತು ಭಾಗವಹಿಸುತ್ತ ಬೆಳೆದು, ತಂದೆಯವರ ಪೋಟೊಗ್ರಫಿ ಗರಡಿಯಲ್ಲಿ ತಯರಾಗುತ್ತ ಮುಂದೆ ಬೆಳ್ಳೂರಿನ ಸೊಸೆಯಾಗಿ ಜೈನ ಸಂಸ್ಕೃತಿ ಧರ್ಮ ಕ್ಷೇತ್ರದಲ್ಲಿ ತಮ್ಮದೆ ಆದ ವಿಶಿಷ್ಟ ಸೇವೆ ನೀಡಲು ಆರಿಸಿಕೊಂಡಿದ್ದು ಬಾಲ್ಯದಿಂದಲೂ ಹಂತ ಹಂತವಾಗಿ ಗಮನಿಸುತ್ತ ಬೆಳೆದ ವೀಡಿಯೊ ಹಾಗೂ  ಪೋಟೊಗ್ರಫಿ ಮಾಧ್ಯಮ ಕ್ಷೇತ್ರವನ್ನು,ಕುಗ್ರಮಗಳಲ್ಲೊ ಕಳೆದು ಹೋಗುತ್ತೀರುವ ಬಸದಿಯ ಅವಶೇಷಗಳು, ಜೈನ ಕ್ಷೇತ್ರಗಳ ಪರಿಚಯ,ಕಾರ್ಯಕ್ರಮದ ಮೂಲಕ ಪ್ರಪಂಚದ್ಯಾಂತ ತಲುಪಲು ಸಾಧ್ಯವಾಗಿದೆ.

ಪ್ರಸ್ತುತ ರಾಜ್ಯದ ವಿವಿಧ ಭಾಗಳಲ್ಲಿ ನೆಡೆಯುವ ಜೈನ ಧರ್ಮಿಕ ಕಾರ್ಯಕ್ರಮಗಳನ್ನು ಕ್ಷಣಮಾತ್ರದಲ್ಲಿ ತಲುಪುವಂತೆ ಮಾಡಿದೆ ಜ್ವಾಲ ಮಾಲ ನ್ಯೂಸ್ ಮುಖಾಂತರ,ಹಾಗೂ ಎಲೆ ಮರೆ ಕಾಯಿಯಂತಿದ್ದ ಹಲವಾರು ಸಾಧಕರನ್ನು ಪರಿಚಹಯಿಸಿರುವುದು ವೈಶಾಲಿಯವರ ಹೆಮ್ಮೆಯ ವಿಷಯವಾಗಿದೆ, ಈಗ ಜೈನ ಭಾಂದವರಿಗೆ ಕಾರ್ಯಕ್ರಮ ನೋಡಿಲ್ಲ ಎಂದು ಚಡಪಡಿಸುವ ಹಾಗೆ ಇಲ್ಲ ಎಲ್ಲವು ಕ್ಷಣ ಮಾತ್ರದಲ್ಲಿ ದೊರೆಯುತ್ತದೆ,ಈ ಮಾಧ್ಯಮವು ಪ್ರತಿಯೊಬ್ಬರಿಗೂ ಅಚ್ಚು ಮೆಚ್ಚಿನ ಚಾನಲ್ ಆಗಿದೆ.ಈ ಎಲ್ಲ ಕೆಲಗಳ ಹಿಂದೆ ವೈಶಾಲಿ ಮತ್ತು ಸಂಗಡಿಗರ ಪರಿಶ್ರಮ ಬಹಳ ದೊಡ್ಡದು.ವೈಶಾಲಿಯವರಿಗೆ ಸಂದ ಪ್ರಶಸ್ತಿ,ಪುರಸ್ಕರಗಳು ಅನೇಕ, ಜೈನ ಧರ್ಮದ ಸಂಸ್ಕೃತಿ, ಸಮಾಜದ ಅಧ್ಯಯನ ಹಾಗೂ ಅಭಿವೃದ್ಧಿಗೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತುಸಿ ಜೈನ್ ಪೌಂಡೇಶನ್ ಬೆಂಗಳೂರು ತನ್ನ ದಶಮಾನೋತ್ಸವದ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಪ್ರಶಂಸೆ ಪತ್ರವನ್ನು ನೀಡಿ ಗೌರವಿಸಲಾಯಿತು. ಪ್ರಶಂಸೆ ಪತ್ರದ ವಾಚನ ಹೀಗಿದೆ,ಶ್ರೀಮತಿ ವೈಶಾಲಿ ಚಂದ್ರಪ್ರಭು ಮೈಸೂರು ಇವರಿಗೆ ಧರ್ಮಪ್ರಭಾವನ ಪ್ರಶಸ್ತಿ ತಾವು ಜ್ವಾಲ ಮಾಲ ನ್ಯೂಸ್ ಚಾನಲ್ ನ ನೀರ್ದೆಶಕಿಯಾಗಿ ಜೈನ ಧರ್ಮದ ಪ್ರಸರಣದಲ್ಲಿ ವಿಶಿಷ್ಟ ಸಾಧನೆಗೈದಿದ್ದಿರಿ, ತಮ್ಮ ವಾಹಿನಿಯ ಮೂಲಕ ಜೈನ ಧರ್ಮದ ಧಾರ್ಮಿಕ ಕ್ಷೇತ್ರಗಳ ಪರಿಚಯವನ್ನ, ಧರ್ಮದ ಕುಡಿ, ಜೈನ ಸಾಧಕರು, ಚಿಂತಕರು, ಪುಸ್ತಕ ಬೆಡುಗಡೆ, ಜೈನ ಸುದ್ಧಿಗಳು, ಚಿಂತನ ಮಂತನ,ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ, ನಾಡಿನ ವಿವಿದೆಡೆ ನೆಡೆಯುವ ಗೋಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕ, ಪಂಚಕಲ್ಯಾಣಗಳು, ಕಾರ್ಯಕ್ರಮಗಳನ್ನು ನೇರಪ್ರಸರಮಾಡುತ್ತ ದೇಶ ವಿದೇಶಗಳಲ್ಲೂ ತಲುಪಿಸುತ್ತಿದ್ದಿರಿ, ನಿಮ್ಮ ಈ ಸಾಧನೆಯನ್ನು ಶ್ಲಾಘಿಸುತ್ತ ನಮ್ಮ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ 10000/- ರೂ ಗಳ ನಗದು ಪುರಸ್ಕಾರವನ್ನು ನೀಡಿ ಗೌರವಿಸಿದರು.ಅಧ್ಯಕ್ಷರು ಹಾಗು ಟ್ರಸ್ಟಿಗಳು ಸುಮೇರಿ ಜೈನ್ ಫೌಂಡೆಷನ್ ಬೆಂಗಳೂರು ಇವರು ಗೌರವಿಸಿದರು.

ವೈಶಾಲಿ ಚಂದ್ರ ಪ್ರಭು ನುಡಿಗಳು ಹೀಗಿವೆ;

ನನ್ನ ಮನಸಾರೆ ಹೇಳುತ್ತಿದ್ದೇನೆ ನನಗೆ ಈ ಕೆಲಸ ಬಹಳ ಆತ್ಮತೃಪ್ತಿಯನ್ನು ತಂದುಕೊಟ್ಟಿದೆ,ಇಂತಹ ದೊಡ್ಡ ವೇದಿಕಯಲ್ಲಿ ನನ್ನ ಗೌರವಿಸಿರುವು ಅತ್ಯಂತ ಸಂತೋಷ ತಂದುಕೊಟ್ಟಿದೆ ನಿಮ್ಮೆಲ್ಲರಿಗು ಅನಂತಾಂನಂತ ಧನ್ಯವಾದಗಳು