ಪ್ರಭಾವನ ಪ್ರಶಸ್ತಿ 2023

ಜೈ ಜಿನೇಂದ್ರ ವೀಕ್ಷಕರೆ, ಇತ್ತೀಚೆಗೆ ನಡೆದ ಬೆಂಗಳೂರಿನ ಸುಮೇರು ಜೈನ್ ಫೌಂಡೇಶನ್ ದಶಮಾನೋತ್ಸವದ ಸಮಾರೋಪದ ಸುದ್ದಿಯೊಂದಿಗೆ ನಾವು ನಿಮ್ಮೊಂದಿಗಿದ್ದೇವೆ. ದಿನಾಂಕ 16-4-2023 ರಂದು ಬೆಂಗಳೂರಿನ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು. ಮೊದಲಿಗೆ ಶ್ರವಣ ಬೆಳಗೊಳದ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ವಿನಯಾಂಜಲಿ ಸಮರ್ಪಿಸಲಾಯಿತು ದೀಪ ಪ್ರಜ್ವಲನೆಯ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಬ್ರಹ್ಮಿಲಾ ಮಧನ್ ರವರು ಸ್ವಾಗತಿಸಿದರು. ನಂತರದ ಕಾರ್ಯಕ್ರಮಗಳಲ್ಲಿ ಡಾ|| ಭರತೇಶ್ ಜಗಶೆಟ್ಟಿ ಅವರಿಂದ ಶ್ರೀಮತಿ ವೀಣಾ ಇಂದ್ರ ಕುಮಾರ್ ರವರ ಸಾಗರದಿಂದಾಚೆಗೆ ಎನ್ನುವ ಪುಸ್ತಕ ಪ್ರಧ್ಯಾಪಕರಾದ ಡಾ|| ಎಸ್ ವಿ ಸುಜಾತ ರವರ ಕನ್ನಡ ಜೈನ ಶಾಸನವನ್ನರಿ ಎನ್ನುವ ಪುಸ್ತಕ ಡಾ|| ಎಲ್ ಆರ್ ಲಲಿತಾಂಬ ರವರಿಂದ ಹಾಗೂ ಶ್ರೀ ರಮೇಶ್ ಶಾಸ್ತ್ರಿಯವರ ಪಾಗದ ಸುಹಾಸಿದ ರಯಣಾಗಾರು ಎಂಬ ಪ್ರಕೃತ  ಭಾಷೆ ಪುಸ್ತಕ ಬೆಂಗಳೂರಿನ ಶ್ರೀಮತಿ ಸುನಿತಾ ರವರಿಂದ ಬಿಡುಗಡೆಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ವಿದ್ವಾಂಸರು ಹಾಗೂ ಜನಪದ ತಜ್ಞರು ಆದ ಡಾ|| ಎಂ ಎ ಜಯಚಂದ್ರ ಅವರಿಂದ ದಶಮಾನೋತ್ಸವದ ಸಮಾರಂಭದ ಅಂಗವಾಗಿ ನಡೆದ ವಿಶೇಷ ಧರ್ಮಪ್ರಭಾವನ ಪ್ರಶಸ್ತಿಯನ್ನು ರತ್ನತ್ರಯ ಕ್ರಿಯೇಷನ್ಸ್ ನ ಡಾ|| ನಿರಜಾ ನಾಗೇಂದ್ರ ಕುಮಾರ್ ಹಾಗೂ ಜ್ವಾಲಮಾಲ ನ್ಯೂಸ್ ನ ನಿರ್ದೆಶಕಿಯಾದ ಶ್ರೀಮತಿ ವೈಶಾಲಿ ಚಂದ್ರಪ್ರಭುರವರಿಗೆ 10,000/- ರೂಗಳ ನಗದು ನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಸಂಸ್ಥೆಯಿಂದ ನಡೆದ ಅನೇಕ ಪರೀಕ್ಷೆಗಳಲ್ಲಿ ಭಾಗಿಯಾದವರಿಗೆ ಪ್ರಮಾಣ ಪತ್ರವನ್ನು ಡಾ|| ಎಂ ಎ ಜಯಚಂದ್ರ ರವರಿಂದ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪ್ರೋಫೆಸರ್ ಉಷಾರಾಣಿಯವರು ತಮ್ಮ ಅಧ್ಯಕ್ಷತೆಯ ಭಾಷಣದಲ್ಲಿ ಸಂಸ್ಥೆಯ ಮುಂದಿನ ಯೋಜನೆಗಳನ್ನು ತಿಳಿಸಿದರು. ನಂತರ ಉತ್ತಮ ವಾಘ್ಮಿ ಹಾಗೂ ಲೇಖಕ ಎಸ್ ವಿ ವಸಂತಯ್ಯ ವಿಡಿಯೋ ಪ್ರದರ್ಶನ ನಡೆದು ಅದರ ಪ್ರಸ್ಥಾವನೆಯನ್ನು ಶ್ರೀಮತಿ ಎಸ್ ವಿ ಸುಜಾತರವರು ನಡೆಸಿಕೊಟ್ಟರು. ಶ್ರೀಮತಿ ಕಾವೇರಿ ಸುನೀಲ್ ರವರ ಸುಂದರ ನಿರೂಪಣೆಯಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮ ಬಹಳ ಸುಂದರವಾಗಿ ಮೂಡಿಬಂತು.

                                                                                            

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್