ಸಂಚಿಕೆ -70

ಜೈ ಜೀನೇಂದ್ರ ವೀಕ್ಷಕರೇ ರಾಜ್ಯದೆಲ್ಲಡೆ ಜೈನ ಸುದ್ದಿಗಳ ಸಂಜೆ ಜ್ವಾಲಮಾಲ ವಾರದ ಎಲ್ಲಾ ಸುದ್ದಿಗಳಿಗೆ ನಿಮ್ಮನ್ನೆಲ್ಲ ಸ್ವಾಗತಿಸುತ್ತಿದ್ದೇನೆ ಜ್ವಾಲಮಾಲ ವಾಟ್ಸಪ್ ನಂಬರ್ ಗಳಿಗೆ ಅಡ್ರೆಸ್ ಮಾಡಲಾದ ಸುದ್ದಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಇಲ್ಲಿನ ವಿಷೇಶ ಸರಣಿಯನ್ನು ಜಗದ್ಗುರು ಕರ್ಮಯೋಗಿ ಸ್ವಸ್ತಶ್ರೀ  ಶ್ರೀ ಚಾರುಕೀರ್ತಿ ಭಟ್ಟಾರ ಸ್ವಾಮಿಜೀ ಯವರ ವಿನಯಾಂಜಲಿಗೆ ಸಮರ್ಪಿಸಲಾಗಿದೆ.

ಮುಖ್ಯಾಂಶಗಳು:

1.ಸ್ವಸ್ತಿಶ್ರೀ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು

ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಇಹಭವವನ್ನು ತ್ಯಜಿಸಿದ್ದಾರೆ.

  1. ಜೈನ ನೇತರರು ಸೇರಿದಂತೆ ಶೋಕ ಸಾಗರದಲ್ಲಿ ಇಡೀ ಜೈನ ಸಮಾಜ.

3.ದೇಶ ವಿದೇಶಗಳಲ್ಲಿ ಶ್ರೀ ಗಳವರಿಗೆ ಶ್ರದ್ದಾಂಜಲಿ ಸಮರ್ಪಣೆ.

4.ದೇಶದ ಪ್ರಧಾನ ಮಂತ್ರಿಗಳು ಹಾಗು ಕರ್ನಾಟಕದ ಮುಖ್ಯಮಂತ್ರಿಗಳಿಂದ ಸಂತಾಪ ಸೂಚನಪತ್ರ.

5.ವಿವಿಧ ಸಂಘಸಂಸ್ಥೆಗಳಿಂದ ಚಾರುಶ್ರೀಗಳ ಸ್ಮರಣೆ ಹಾಗು ಪ್ರಾರ್ಥನೆ.

6.ಶ್ರೀ ಕ್ಷೇತ್ರಶ್ರವಣಬೆಳಗೊಳದಲ್ಲಿ ನೆಡೆದ 16ನೇ ದಿನದವಿನಯಂಜಲಿ ಕಾರ್ಯಕ್ರಮ.

7.ಶ್ರೀಮಠಗಳೆಲ್ಲಡೆ ಗುರುಗಳ ಆತ್ಮಶಾಂತಿಗಾಗಿ ಅಭಿಷೇಕ ಹಾಗು ಪೂಜೆ.

ಸ್ವಸ್ತಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಇಹಭವವನ್ನು ತ್ಯಜಿಸಿದ್ದಾರೆ ಜೈನೇತರರು ಸೇರಿದಂತೆ ಇಡೀ ಜೈನ ಸಮಾಜವೇ ಶೋಕ ಸಾಗರದಲ್ಲಿ ಮುಳುಗಿದೆ ದಿನಾಂಕ 23-03-2023 ರಂದು ಜೈನ ಸಮಾಜಕ್ಕೆ ಒಂದು ಕರಾಳ ದಿನವಾಗಿತ್ತು.ನಮ್ಮ ಜೈನ ಸಮಾಜದ ದೀಪವೇ ನಂದಿಹೋಗಿತ್ತು. ಜೈನೇತರರು ಸೇರಿದಂತೆ ಇಡೀ ಜೈನ ಸಮಾಜವೇ ಶೋಕ ಸಾಗರದಲ್ಲಿ  ಮುಳುಗಿತ್ತು ಅಂದು ಬೆಳಗ್ಗೆ 6 30ಕ್ಕೆ ಶ್ರವಣಬೆಳಗೊಳದ ಶ್ರೀ ಕೇತ್ರದಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಇಹಭವವನ್ನು ತ್ಯಜಿಸಿದ ಸುಧ್ದಿ ತಿಳಿದೊಡನೆ ದಿಕ್ಕು ತೊಚದೆ ದಿಕ್ಕು ದಿಕ್ಕುಗಳಿಂದ ಶ್ರೀಗಳವರ ಭಕ್ತ ಸಮೂಹ ರಾಜಕಾರಣಿ ಗಣ್ಯಾದಿ ಗಣ್ಯರು ಶ್ರೀ ಕ್ಷೇತ್ರವನ್ನು ತಲುಪಿ ದರ್ಶನಕ್ಕಾಗಿ ಹಾತೊರೆದರು ಅವರಿಗಾಗಿ ಕಣ್ಣೀರಿಟ್ಟ ದೃಶ್ಯ ನಿಜಕ್ಕೂ ನೋವಿನಿಂದ ಹೃದಯ ಮಿಡಿದ ಕ್ಷಣ

ದೇಶ ವಿದೇಶಗಳಲ್ಲಿಯೂ ಕೂಡ ಶ್ರೀಗಳಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಗಿದೆ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಚಾರುಕೀರ್ತಿಭಟ್ಟಾರಕ ಮಹಾಸ್ವಾಮೀಜಿಯವರಿಗೆ ಶೀಲಂಕಾದ ಭಾರತೀಯ ರಾಯಭಾರಿ ಕಛೇರಿಯಲ್ಲಿ ಶುಕ್ರವಾರ ಭಾವಪೂರ್ಣ ಶ್ರದ್ದಾಂಜಲಿ ಹಾಗು ಪುಷ್ಪನಮನ ಸಲ್ಲಿಸಲಾಯಿತು ಶ್ರೀಲಂಕಾದ ಶ್ರೀ ಸ್ವಾಮಿ ವಿವೇಕಾನಂದ  ಕಲ್ಚರಲ್ ಸೆಂಟರ್ ನಲ್ಲಿ ಭಾರತೀಯ ರಾಯಭಾರಿ ಕಛೇರಿಯ ಇಂಡಿಯನ್ ಕಲ್ಚರಲ್ ಸೆಂಟರ್ ಡೈರೆಕ್ಟರ್ ಜನರಲ್ ಪ್ರೋಫೆಸರ್ ಅನು ಕುರನ್ ದತ್ತ ಅವರ ಉಪಸ್ಥಿತಿಯಲ್ಲಿ ನೆಡೆದ ಶ್ರಧ್ದಾಂಜಲಿ ಸಭೆಯಲ್ಲಿ ಮೊದಲು ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ 2 ನಿಮಿಷ ಮೌನ ಆಚರಿಸಲಾಯಿತು.ನಂತರ ಮಾತನಾಡಿದ ದತ್ತ ಅವರು ಸುಮಾರು 4 ದಶಕಗಳಿಗೂ ಹೆಚ್ಚುಕಾಲ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕರ್ನಾಟಕದ ಜೈನಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರವಣಬೆಳಗೊಳಮಠದ ಪೀಠದ್ಯಕ್ಷರಾಗಿ ಹತ್ತು ಹಲವು ಮಾದರಿಯಾದ ಕಾರ್ಯಗಳನ್ನು ಮಾಡಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ಜೈನ ತೀರ್ಥಂಕರರು ಸಾರಿದ ಅಹಿಂಸಾ ಪರಮೋಧರ್ಮಹ ಎಂಬ ತತ್ವವನ್ನು ವಿಶ್ವಮಟ್ಟಕ್ಕೆ ಸಾರುವಲ್ಲಿ ಸ್ವಾಮೀಜಿಯವರ ಪಾತ್ರ ದೊಡ್ಡದಿದೆ ಎಂದು ಗುಣಗಾನ ಮಾಡಿದರು ಹಾಗೆಯೇ ಶ್ರವಣಬೆಳಗೊಳ ಭಗವಾನ್ ಬಾಹುಬಲಿ ಜೊತೆಗೆ ಪರಮಪೂಜ್ಯರಿಂದಲೂ ವಿಶ್ವವಿಖ್ಯಾತಿ ಪಡೆದಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು ಇದರ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ  ಆಧ್ಯಾತ್ಮಿಕ ಧಾರ್ಮಿಕ ಹಾಗು ಸಾಮಾಜಿಕವಾಗಿ ಮಹತ್ತರವಾದ ದೊಡ್ಡ ಕೊಡುಗೆ ನೀಡಿದ್ದಾರೆ.ಎಂದು ಸ್ಮರಿಸಿದ್ದಾರೆ ವಿಷೇಶ ಎಂದರೆ ಭಾರತ ಅದರಲ್ಲೂ ಕರ್ನಾಟಕ ಸ್ವಾಮೀಜಿಯೊಬ್ಬರು ವಿಧಿವಶರಾಗಿದಕ್ಕೆ ಶ್ರೀಲಂಕಾದಲ್ಲಿ ಶ್ರಧ್ದಾಂಜಲಿ ಸಭೆ ಅವರನ್ನು ನೆನಪು ಮಾಡಿಕೊಂಡಿರುವುದು ಇದೇ ಮೊದಲಾಗಿದೆ ಶ್ರೀಲಂಕಾದ ಕೆನಿಲಿಯಾ ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಇತ್ತೀಚ್ಛೆಗಷ್ಟೆ ಸ್ವರ್ಗಸ್ಥರಾದ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಸ್ಮರಣೆ ನಿಮಿತ್ತ ಜೈನ್ ಸೀಜ್ ಮತ್ತು ಎಥಿಕ್ಸ್ ಮತ್ತು ಜೈನ್ ನಾನ್ ವೈಲೆನ್ಸ್ ಹಾಗು ಥೇಯರಿ ಎಂಬ 2 ವಿಷಯಗಳ ಕುರಿತು ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿತ್ತು.ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನ ಸಭಾಂಗಣದಲ್ಲಿ ನೆಡೆದ ಸಮಾರಂಭದಲ್ಲಿ  ಶ್ರೀಲಂಕಾ ಭಾರತೀಯ ರಾಯಭಾರ ಕಛೇರಿಯ ಉನ್ನತ ಶ್ರೇಣಿ ಅಧಿಕಾರಿ ಫ್ರೋಫೆಸರ್ ಅಂಕುರನ್ ದತ್ತ ಅವರು ಮೊದಲು ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಸಮಾರಂಭವನ್ನು ಉದ್ಘಾಟಿಸಿದ್ದಾರೆ.ನೆರೆದಿದ್ದ ಗಣ್ಯರೆಲ್ಲರೂ ಕೂಡ ಪುಷ್ಪನಮನ ಸಲ್ಲಿಸಿ 2ನಿಮಿಷ ಮೌನ ಆಚರಿಸಿದ್ದಾರೆ.ಕೊಲ್ಕತ್ತಾದ ದಿಗಂಬರ ಜೈನ ಸಮಾಜದ ವತಿಯಿಂದಲೂ ಕೂಡ ಶ್ರೀಗಳಿಗೆ ಶ್ರಧ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಂತಾಪ ಸೂಚನ ಪತ್ರ ಶ್ರೀ ಮಠವನ್ನು ತಲುಪಿದೆ ಶ್ರೇಷ್ಟವಿಚಾರದ ಒಕ್ಕಣೆ ಏನಿದೆ ಎಂದು ನೋಡೋಣ ಭಾರತದ ಮಾನ್ಯಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಪರಮಪೂಜ್ಯ ಸ್ವಾಮೀಜಿಯವರ ಸಮಾಧಿ ಮರಣದ ಹಿನ್ನಲೆ ತಿಳಿದು ಭಾವಪೂರ್ಣ ಶ್ರಧ್ದಾಂಜಲಿಯನ್ನು ಸಲ್ಲಿಸಿ ಸಂದೇಶವನ್ನು ಕಳಿಸಿರುತ್ತಾರೆ.

 ವಿವಿಧ ಸಂಘಸಂಸ್ಥೆಗಳಿಂದಲೂ ಕೂಡ ಚಾರುಶ್ರೀರವರ ಸ್ಮರಣೆಯನ್ನು ಮಾಡಿ ಅವರ ಆತ್ಮಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು ದಿನಾಂಕ 23-03-2023ರಂದು ನಿಧನರಾದ ಶ್ರವಣಬೆಳಗೊಳದ ಜೈನ ಮಠದ ನಮ್ಮ ಪೂಜ್ಯ ಗುರುಗಳಾದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ಕಾರ್ಕಳ ಜೈನ್ ಬ್ರಿಗೆಡ್ವತಿಯಿಂದ ವಿಜೇತ ವಿಷೇಶ ಶಾಲೆಯ ಮಕ್ಕಳೊಂದಿಗೆ ಪ್ರಾರ್ಥನೆ  ಮಕ್ಕಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಪೂಜ್ಯ ಸ್ವಾಮೀಜಿಯವರಿಗೆ ದಿನಾಂಕ 03-04-2023ರಂದು ಶ್ರಧ್ದಾಂಜಲಿಯನ್ನು ಸಮರ್ಪಿಸಲಾಯಿತು.ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಪೂಜ್ಯ ಶ್ರೀಗಳವರಿಗೆ ಗೌರವ ನಮನ ಸಲ್ಲಿಸಲಾಯಿತು. ಬೆಳ್ತಂಗಡಿಯ ಅಧ್ಯಕ್ಷರಾದ ವೀರ್ ಡಾಕ್ಟರ್ ನವೀನ್ ಕುಮಾರ್ ಜೈನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆಡೆಯಿತು.ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಇಹಲೋಕ ತ್ಯಜಿಸಿದ ಹಿನ್ನಲೆಯಲ್ಲಿ ಪೂಜ್ಯರ ಸ್ಮರಣಾರ್ಥ ಶ್ರಧ್ದಾಂಜಲಿ ಕಾರ್ಯಕ್ರಮ ಶ್ರೀಕ್ಷೇತ್ರ ಕನಕಗಿರಿ ಶ್ರೀಗಳಾದ ಸ್ವಸ್ತಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಉಪಸ್ಥಿತಿಯಲ್ಲಿ ದಿನಾಂಕ 26-03-2023ರ  ಭಾನುವಾರದಂದು ಸಂಜೆ 4 ಗಂಟೆಗೆ ಮೈಸೂರು ನಗರದಲ್ಲಿರುವ ಕೋಟೆ ಶ್ರೀ ಶಾಂತಿನಾಥ ಬಸದಿಯಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ನೆಡೆಯಿತು ಈ ಸಂಧರ್ಭದಲ್ಲಿ ಮೈಸೂರು ನಗರದ ದಿಗಂಬರ ಸಮಾಜದ ಅಧ್ಯಕ್ಷರಾದ ಶ್ರೀ ಮಹೇಶ್ ಪ್ರಸಾದ್ ಅವರು ನೆಡೆಸಿದರು ಹಾಗು ಕಾರ್ಯದರ್ಶಿಗಳು ಹಾಗೂ ಪಧಾಧಿಕಾರಿಗಳು ಸದಸ್ಯರು ಹಾಗೂ ಭಾರತೀಯ ಜೈನ್ ಮಿಲನ್ ವಲಯ 8ನೇ ಗೌರವ ಅಧ್ಯಕ್ಷರು ವಲಯ ಅಧ್ಯಕ್ಷರು ಪಧಾಧಿಕಾರಿಗಳು ಹಾಗೂ ಮೈಸೂರುವಿಭಾಗದ ಉಪಾಧ್ಯಕ್ಷರು ಕಾರ್ಯದರ್ಶಿಗಳು ಮಿಲನಿನ ಅಧ್ಯಕ್ಷರು ಮತ್ತು ಸದಸ್ಯರೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಕಾಳಿಹುಂಡಿಯಲ್ಲೂ ಕೂಡ ಜೈನ್ ಮಿಲನ್ ವತಿಯಿಂದ ಶ್ರೀಗಳವರಿಗೆ ಶ್ರಧ್ದಾಂಜಲಿ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಜೈನ ಮಠದ ಪೀಠಾಧಿಪತಿಗಳಾದ ಸ್ವಸ್ತಶ್ರೀ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸ್ವರ್ಗಸ್ಥರಾದ ಹಿನ್ನಲೆಯಲ್ಲಿ ಅವರಿಗೆ ಗೌರವ ಸೂಚಕವಾಗಿ ಚಿಕ್ಕಪೇಟೆಯ ಜಿನಮಂದಿರದಲ್ಲಿ ತುಮಕೂರು ಜೈನ ಸಮಾಜದ ವತಿಯಿಂದ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಮಪೂಜ್ಯ 108 ಪಾವನ ಕೀರ್ತಿ ಮುನಿ ಮಹಾರಾಜರು ದಿವ್ಯಸಾನಿಧ್ಯವನ್ನು ವಹಿಸಿದ್ದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಎಸ್ ಜೆ ನಾಗರಾಜ್ ರವರು ವಹಿಸಿದ್ದರು ಈ ಸಂಧರ್ಭದಲ್ಲಿ ಖ್ಯಾತ ಸಾಹಿತಿಗಳಾದ  ಎಸ್ ಬಿ  ಪದ್ಮಪ್ರಸಾದ್ ಹಾಗೂ ಜೈನ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರು  ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. ಸ್ವಸ್ತಶ್ರೀ ಚಾರುಕೀರ್ತಿ ಭಟ್ಟಾರಕ  ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿರವರ ಆತ್ಮ ಶಾಂತಿಗಾಗಿ ದಿನಾಂಕ  ದಿನಾಂಕ 08-04-2023ರಂದು ಶ್ರೀಕ್ಷೇತ್ರ ಶ್ರವಣಬೆಳಗೊಳದ ಭಗವಾನ್ ಶ್ರೀ ಶ್ರೀ ಶ್ರೀ ಜಗನ್ನಾತ ಸ್ವಾಮಿ ಬಸದಿಯಲ್ಲಿ 504 ಕಳಸಗಳ ಅಭಿಷೇಕ ವಿನಯಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸಮಸ್ತ ಭಟ್ಟಾರಕರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ  ಡಾಕ್ಟರ್ ವೀರೇಂದ್ರ ಹೆಗಡೆಯವರು ಶಿರಡಿ ಸುರೇಂದ್ರ ಕುಮಾರ್ ರವರು ಕಮಲಹಂಪನರವರು ಭಾಗವಹಿಸಿ ದೀಪ ಪ್ರಜ್ವಲಿಸಿ ಪುಷ್ಪನಮನ ಸಲ್ಲಿಸುವ ಮೂಲಕ ವಿನಯಾಂಜಲಿಯನ್ನು ಸಮರ್ಪಿಸಿದರು. ನಂತರ ಶ್ರವಣಬೆಳಗೊಳದ ಮಹಿಳಾ ಸಮಾಜದ ವತಿಯಿಂದ ದೀಪಾರತಿ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶ್ರೀಯುತ ಹೆಗಡೆಯವರಿಂದ ಸ್ವಾಮೀಜಿಯವರೊಂದಗಿನ ಸುಂದರ ಕ್ಷಣಗಳನ್ನು ಸೆರೆಹಿಡಿದ ಸುಂದರ ಗುಚ್ಛದಂತಿದ್ದ ಕರ್ಮಯೋಗಿ ಎನ್ನುವ ಪುಸ್ತಕ ಹಾಗು ನೂತನ ಶ್ರೀಗಳಾದ ಅಭಿನವಚಾರುಕೀರ್ತಿ ಸುರಚಿತ ನಮೋಕರ ಮಂತ್ರದ ಮಹತ್ವವನ್ನು ಸಾರುವ ಧರ್ಮಗ್ರಂಥವನ್ನು ಶಾಸ್ತದಾನ ಮಾಡಲಾಯಿತು.ಮರುದಿನವು ಕೂಡ ಎಲ್ಲಾ ಶ್ರೀಮಠಗಳಲ್ಲಿ ಭಟ್ಟಾರಕರುಗಳು ತಮ್ಮ ಗುರುಗಳ ಆತ್ಮಶಾಂತಿಗಾಗಿ ಅಭಿಷೇಕ ಪೂಜಾಧಿಗಳನ್ನು ನೆರೆವೇರಿಸಿದ್ದಾರೆ.ಈ ಸರಣಿಯನ್ನು ಶ್ರೀಗಳವರ ವಿನಯಾಂಜಲಿಗೆ ಸಮರ್ಪಿಸಲಾಗಿದೆ,ಮುಂದಿನ ಸಂಚಿಕೆಯಲ್ಲಿ ವೀಕ್ಷೀಸಲಿದ್ದೀರಿ ಜ್ವಾಲಾಮಾಲಾ ಡಾಟ್ ನ್ಯೂಸ್ .