ಜೈ ಜಿನೇಂದ್ರ ವೀಕ್ಷಕರೆ,
ವಾರದ ಸುದ್ದಿಗಳ ಮುಖ್ಯಾಂಶಗಳು:
ಜಿನ ಭಜನಾ ಸ್ಪರ್ಧೆಯ ಸೆಮಿಫೈನಲ್ ಹಾಗೂ ಫೈನಲ್ ಕಾರ್ಯಕ್ರಮದ ಸುದ್ದಿ ವಿವರ
ಬಜೆಗೋಳಿ ಭಗವಾನ್ ಶ್ರೀ ಶ್ರೀ ಶ್ರೀ ಸಾವಿರದ ಎಂಟು ಮುನಿಸುವ್ರತ ತೀರ್ಥಂಕರರ ನೂತನ ಜಿನಮಂದಿರದ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಹಾಗೂ ಭಗವಾನ್ ಶ್ರೀ ಶ್ರೀ ಶ್ರೀ 1008 ಬಾಹುಬಲಿ ಸ್ವಾಮಿ ಪ್ರತಿಷ್ಠ ಮಹಾಮಸ್ತಕಾಭಿಷೇಕ.
ಮೈಸೂರಿನ ವರ್ಧಮಾನ್ ಜೈನ್ ಮಿಲನ್ ವತಿಯಿಂದ ನಡೆದ ಅಖಂಡ ನಮೋಕಾರ ಮಂತ್ರ ಪಠಣ
ಭಾರತೀಯ ಜೈನ್ ಮಿಲನ್ ಕರ್ನಾಟಕ ವಿಭಾಗದ ನೂತನ ತಂಡದ ಪದಗ್ರಹಣ ಸಮಾರಂಭ
ಡಾ|| ಹೇಮಾವತಿ ವಿ ಹೆಗ್ಗಡೆಯವರಿಗೆ ಪ್ರತಿಷ್ಠಿತ ಸಾಧನ ರಾಜ್ಯ ಪ್ರಶಸ್ತಿ.
ಅಭಿನಂದನೆ ಹಾಗೂ ಜಾತ್ರಾ ಮಹೋತ್ಸವಗಳ ಮತ್ತು ಪಂಚ ಕಲ್ಯಾಣಗಳ ಸುದ್ದಿ.
ಹಲವೆಡೆ ನಡೆದ ನಮ್ಮ ನೆಚ್ಚಿನ ಭಟ್ಟಾರಕರು ಪಟ್ಟಾಭಿಷೇಕ ದಿನದ ಆಚರಣೆ
ಸುದ್ದಿಗಳ ವಿವರ:
ದಿನಾಂಕ 7 ಮತ್ತು 8 ಜನವರಿ 2023 ರ ಎರಡು ದಿನಗಳಲ್ಲಿ ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿರುವ ಜ್ನಾನಜ್ಯೋತಿ ಸಭಾಂಗಣದಲ್ಲಿ ಸೆಮಿಫೈನಲ್ ಮತ್ತು ಫೈನಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ದಿನಾಂಕ 07/01/20223ರ ಸೆಮಿಫೈನಲ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಯುಗಳ ಮುನಿಗಳಾದ ಮುನಿಶ್ರೀ 108 ಅಮೋಘ ಕೀರ್ತಿ ಮುನಿಮಹಾರಾಜರು ಮತ್ತು ಮುನಿಶ್ರೀ 108 ಅಮರ ಕೀರ್ತಿ ಮುನಿಮಹಾರಾಜರು ಪಾಲ್ಗೊಂಡಿದ್ದರು. ದೇವಾ ಗುರುಶಾಸನದ ಪರಿಕಲ್ಪನೆಯಲ್ಲಿ 9 ಜನ ಪುರುಹಿತರನ್ನೊಳಗೊಂಡು ವಿಶೇಷ ಪೂಜೆಗಳೊಂದಿಗೆ ಅತ್ಯದ್ಘುತವಾಗಿ ನೆರವೇರಿಸಲಾಯಿತು. ಸ್ಪರ್ಧೆಯ ವಿಜೇತರಾಗಿ ಕ್ರಮವಾಗಿ ಮಂಗಳೂರು ವಿಭಾಗದ ಉಜಿರೆಯ ವಿದೂಷ ಭಜನಾ ತಂಡ ಪ್ರಥಮ ಸ್ಥಾನ ಗಳಿಸಿದರೆ ದ್ವಿತೀಯ ಸ್ಥಾನ ಮಲ್ನಾಡು ವಿಭಾಗದ ಸುಸ್ವರ ಭಜನಾ ತಂಡ ಹಾಗೂ ತೃತೀಯ ಸ್ಥಾನ ಕುಂತುನಾಥ ಭಜನಾ ತಂಡ ಕುರ್ಚನೂರು ಜಮಖಂಡಿ ಪಡೆದವು. ಹಿರಿಯರ ವಿಭಾಗದಲ್ಲಿ ಕೀರ್ತಿಶೇಷ ಮಾರ್ನಾಡು ವರ್ಧಮಾನ್ ಇವರ ಸ್ಮರಣಾರ್ಥ














