ಮಂದಾರಗಿರಿ ಪ್ರೋಮೋ

ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಜೈ ಜಿನೇಂದ್ರ ವೀಕ್ಷಕರೇ,

ಅತಿಶಯ ಶ್ರೀ ಕ್ಷೇತ್ರ ಮಂದಾರಗಿರಿಯಲ್ಲಿ ಪರಮಪೂಜ್ಯ 108 ಅಮೋಘಕೀರ್ತಿ ಮುನಿಮಹರಾಜರ ಹಾಗೂ 108 ಅಮರಕೀರ್ತಿ ಮುನಿಮಹಾರಾಜರ  ನೇತೃತ್ವದಲ್ಲಿ ಶ್ರೀ 1008  ಮಹಾವೀರರ ಬೃಹತ್ ಸುಂದರ ದಿವ್ಯಕಾಶ ಸಮವಸರಣ  ಭಾರತದಲ್ಲೇ ಪ್ರಥಮಬಾರಿಗೆ ನಿರ್ಮಾಣಗೊಂಡು ಪಂಚಕಲ್ಯಾಣಕ್ಕೆ ಸಜ್ಜಾಗಿದ್ದು ಈ ಅಪೂರ್ವ ಕ್ಷಣಗಣನೆಗೆ ಸಾಕ್ಷಿಯಾಗ ಬನ್ನಿ ನಿಮ್ಮ ಅಮೋಘವಾದ ಕ್ಷಣಗಳನ್ನು ಇಲ್ಲಿ ವಿನಿಯೋಗಿಸಿ. ದಿನಾಂಕ 08/03/2023 ರಿಂದ 13/03/2023 ರವರೆಗೆ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ  ಆಶೀರ್ವಾದದೊಂದಿಗೆ . ಶ್ರೀ ಕ್ಷೇತ್ರ ಬಸ್ತಿಮಠದ ನರಸಿಂಹರಾಜಪುರದ ಪೀಠಾಧ್ಯಕ್ಷರಾದ ಸ್ವಸ್ತಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಹಾಗೂ ಸಮಸ್ತ ಭಟ್ಟಾರಕರುಗಳು, ರಾಜಶ್ರೀ ಡಾ|| ಡಿ.ವೀರೇಂದ್ರಹೆಗ್ಗಡೆಯವರ ಉಪಸ್ಥತಿಯಲ್ಲಿ ಹಾಗೂ ಶ್ರೀ ಬಿ.ವೈ ವಿಜಯೇಂದ್ರ ರವರು, ಶ್ರೀ ಡೊ. ಸುರೇಂದ್ರಕುಮಾರ್ ರವರು, ಮುಂಬಯಿಯ ರಾಕೇಶ್ ಜೈನ್ , ಶ್ರೀ ಎಸ್. ಜೆ ನಾಗರಾಜ್ ಇವರುಗಳ ುಪಸ್ಥತಿಯಲ್ಲಿ ಕಾರ್ಯಕ್ರಮ ಅಮೋಘವಾಗಿ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮವು ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ನಡೆಸಲು ಎಲ್ಲಾ ಸಿದ್ದತೆಗಳನ್ನು ಸಮಿತಿಯವರು ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು  ಜ್ವಾಲಾಮಾಲಾ ಡಾಟ್ ನ್ಯೂಸ್ ನಲ್ಲಿ ನೇರವಾಗಿ ವೀಕ್ಷಿಸಬಹುದು