ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ಶ್ರೀ ಹೊಂಬುಜ ಕ್ಷೇತ್ರದಲ್ಲಿ ನೂತನ ಮಾನಸ್ತಂಭೋಪರಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ದ 5 ನೇ ದಿನದ ವೀಕ್ಷಕ ವಿವರಣೆ:
ಈ ಕ್ಷೇತ್ರದ ಕಾರ್ಯಕ್ರಮ ನಾವುಗಳೆಲ್ಲರೂ ನೋಡುಬಂತಹ ಸೌಭಾಗ್ಯ ಸಿಕ್ಕಿದ್ದು ನಮ್ಮೆಲ್ಲರ ಪುಣ್ಯ . ಬಸದಿಗಳ ಜೀರ್ಣೋದ್ದಾರದ ಜೊತೆಗೆ ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಿರುವಂತಹ ಕ್ಷೇತ್ರದ ವ್ಯಾಪ್ತಿಗೆ ಬಂದಿರುವಂತಹ ಅಟ್ಡಿಹಂಗಡಿ , ಕುಂದಾದ್ರಿ, ವಿಜಯನಗರ ,ಮಲಖೇಡ ಈ ಎಲ್ಲಾ ಕ್ಷೇತ್ರದ ಶಾಖಾ ಮಠಗಳಲ್ಲಿ ಇರುವಂತಹ ತೀರ್ಥಗಳನ್ನು ಕೂಡ ಅಭಿವೃದ್ದಿ ಮಾಡಿ ಇವತ್ತು ಅವರು 12 ವರ್ಷಕ್ಕೆ ತಮ್ಮ ಜೀವನದ ಒಂದು ಯುಗವನ್ನು ಕೂಡ ಬಹಳ ಯಶಸ್ವಿಯಾಗಿ ಪರಿಸಮಾಪ್ತಿಯಾಗಿದ್ದರಿಂದ ಹೊಂಬುಜ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಗಳ ಪರಿಶ್ರಮ ನಮಗೆ ಕಂಡು ಬರುತ್ತದೆ. ಎಂದು ಬಂದಿರುವಂತಹ ಪ್ರತಿಯೊಬ್ಬ ಮಹಾಸ್ವಾಮೀಜಿಗಳವರು ಹೊಂಬುಜ ಕ್ಷೇತ್ರದ ಬಗ್ಗೆ ತುಂಬಾ ಶ್ಲಾಘಿಸಿ ಮಾತನಾಡಿದರು.














