ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್
ನೂತನ ಮಾನಸ್ತಂಭೋಪರಿ ಚತುರ್ವಂಶಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಗೂ ಇನ್ನೂ ಪ್ರಮುಖ ಮುನಿಮಹಾರಾಜರುಗಳು ಪಾಲ್ಗೊಂಡಿದ್ದರು. ಹಾಗೂ ಅಲ್ಲಿಗೆ ನೆರೆದಿದ್ದ ಗಣ್ಯರುಗಳಿಗೆ ಗೌರವ ಸಮರ್ಪಣೆಯನ್ನು ಮಾಡಿ ಪುಷ್ಪಗಳಿಂದ ಅಭಿಷೇಕ ಮಾಡಲಾಯಿತು. ನಂತರ ಶ್ರೀ ವೀರೇಂದ್ರ ಹೆಗ್ಗಡೆಯವರು ಹೊಂಬುಜ ಕ್ಷೇತ್ರದ ಬಗ್ಗೆ ಮಾತನಾಡುತ್ತಾ ಹಿಂದೆ ಈ ಕ್ಷೇತ್ರವು ಸಂಪೂರ್ಣ ಕಾಡಾಗಿತ್ತು ಹಲವಾರು ಕಾಡುಪ್ರಾಣಿಗಳು ಸಹ ಇಲ್ಲಿ ನಾವು ಕಂಡಿದ್ದೇನೆ. ಆದರೆ ಈಗ ಇಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ನೋಡಿದರೆ ತುಂಬಾ ಸಂತೋಷವಾಗುತ್ತದೆ. ನಾನು ಚಿಕ್ಕವಯಸ್ಸಿನಿಂದಲೂ ಹಲವಾರು ಮುನಿಸ್ವಾಮಿಗಳನ್ನು ನೋಡುತ್ತಾ ಬಂದಿದ್ದೇನೆ ಹಾಗೆಯೆ ಈಗಿರುವ ಸ್ವಾಮೀಜಿಗಳ ಕಾರ್ಯವೈಖರಿಗಳನ್ನು ವಿಮರ್ಶಿಸುತ್ತಾ ಅವರ ಬಗ್ಗೆ ಮಾತನಾಡಿದರು. ನಂತರ ಜಿನಬಿಂಬಕ್ಕೆ ಅಭಿಷೇಕವನ್ನು ಮಾಡಲಾಯಿತು.














