ಶ್ರೀ ಹಿರೇ ಅಮ್ಮನವರ ಬಸದಿ ಮೂಡುಬಿದಿರೆ . ಈ ಬಸದಿ ಮೂಡುಬಿದಿರೆಯ ಪ್ರಾಚೀನ ಬಸದಿಗಳಲ್ಲಿ ಇದೂ ಕೂಡ ಒಂದು ಬಸದಿಯಾಗಿದೆ. ಇಲ್ಲಿ ಗುರು ಬಸದಿ ಇದೆ. ಜೊತೆಗೆ ಪಡು ಬಸದಿ ಇದೆ. ಸಾವಿರ ಕಂಬದ ಬಸದಿ ಇದೆ. ಇಲ್ಲಿ ವಿಶೇಷವಾಗಿ ಭಗವಾನ್ ಶಾಂತಿನಾಥ ಸ್ವಾಮಿ ಖಡ್ಗಾಸನ ಭಂಗಿಯಲ್ಲಿ ಇರುವಂತಹ ಮೂರ್ತಿ ಮತ್ತು ಆ ಬಿಂಬವನ್ನು ನೋಡಿದರೆ ಬಹಳ ಪ್ರಾಚೀನವಾದ ಬಿಂಬವಾಗಿದೆ. ಈ ಬಸದಿಯ ವಿಶೇಷತೆ ಏನೆಂದರೆ ಮೃಣ್ಮಯವಾದಂತಹ 24 ಜಿನಬಿಂಬಗಳು ಇಡೀ ನಾಡಿನಲ್ಲೇ ಅಪೂರ್ವವಾದ ಬಿಂಬಗಳಾಗಿವೆ. ಪ್ರತಿಯೊಂದು ಬಿಂಬಕ್ಕೂ ಅದರ ಮೂಲ ಬಣ್ಣಗಳನ್ನೇ ಬಿಂಬಿಸಿ ಮಾಡಲಾಗಿದೆ. ಇಲ್ಲಿ ಇನ್ನೊಂದು ವಿಶೇಷತೆ ಏನೆಂದರೆ ಬಹುಶಃ ಕರ್ನಾಟಕದಲ್ಲೇ ಎಲ್ಲೂ ಕಾಣದ ಬಹಳ ದೊಡ್ಡ ಸರಸ್ವತಿ ಮಾತೆ ಹಾಗೂ ಮಾತೆ ಪದ್ಮಾವತಿ ಅಮ್ಮನವರ ಮೂರ್ತಿಗಳೂ ಸಹ ಇಲ್ಲಿ ಎದುರು ಬದುರಾಗಿ ನಿಲ್ಲಿಸಲಾಗಿದೆ. ಕಾಲಕಾಲಕ್ಕೆ ಈ ಬಸದಿಯನ್ನು ಜೀರ್ಣೋದ್ದಾರ ಸಹ ಮಾಡಲಾಗುತ್ತದೆ. ಬಹಳ ಹಿಂದಿನಿಂದಲೂ ಬಂದಿರುವಂತಹ ಜೀರ್ಣೋದ್ದಾರ ಕಾರ್ಯಕ್ಕೆ ಈ ಸಲವೂ ಸಹ ನಾವುಗಳೆಲ್ಲರೂ ಹಾಗೂ ಇಲ್ಲಿನ ಆಡಳಿತ ಮಂಡಲಿಗಳು ಸೇರಿ ಈ ಕಾರ್ಯವನ್ನು ಕೈಗೊಂಡಿದ್ದೇವೆ.
.














