ಭಾರತಿಯ ಜೈನ್ ಮಿಲನ್ -8/ ಪದಗ್ರಹಣ / ಜ್ವಾಲಾಮಲನ್ಯೂಸ್ / 2023

ಜೈ ಜಿನೇಂದ್ರ ವೀಕ್ಷಕರೆ

ಭಾರತೀಯ ಜೈನ್ ಮಿಲನ್ ವಲಯ 8 ರ ನೂತನ ತಂಡದ ಪದಗ್ರಹಣ ಸಮಾರಂಭ . ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ  ಶ್ರೀ ಡಿ. ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಶ್ರೀ ವಿ. ಪುಷ್ಪರಾಜ್ ಜೈನ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ 16/02/2023 ರಂದು ಮೈಸೂರಿನ

ಎಸ್ ಡಿ ಐ ಎಂ ಡಿ  ಎಂಡಿಪಿ ಹಾಲ್ ನಲ್ಲಿ ನೆರವೇರಿಸಲಾಯಿತು. ಶೀಲಾ ಅನಂತರಾಜುರವರು ಸ್ವಾಗತಿಸಿದ ಕಾರ್ಯಕ್ರಮ ಅತಿಥಿ ಗಣ್ಯರಿಂದ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಪ್ರಾರಂಭವಾಯಿತು. ಶ್ರೀಯುತ ಪುಷ್ಪರಾಜ್ ಜೈನ್ ರವರು ತಮ್ಮ ಅವಧಿಯ ಜೈನ್ ಮಿಲನ್ ಪ್ರಗತಿಯ ಕಾರ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.  ಕಾರ್ಯಗಳು ನಡೆದ ರೀತಿ ನಾನು ಅಲ್ಲದೇ ನಾವುಗಳು ಎಂದು ಈ ಮಿಲನ್ ನಲ್ಲಿ ಕೆಲಸ ಮಾಡಿದ್ದೇವೆ. ಇದು ಹೀಗೆಯೇ ಮುಂದುವರೆದುಕೊಂಡು ಹೋಗುತ್ತದೆ ಎಂದು ತಿಳಿಸದರು. ನಂತರ ಶ್ರೀ ಸುರೇಂದ್ರ ಕುಮಾರ್ ರವರಿಂದ ನೂತನ ಪದಾದಿಕಾರಿಗಳಾದ  ಶೀಲಾ ಅನಂತರಾಜುರವರು  ಗೌರವಧ್ಯಕ್ಷರಾಗಿ , ಕೆ. ಯುವರಾಜ್ ಭಂಡಾರಿ ಅಧ್ಯಕ್ಷರಾಗಿ , ಎಂ. ರತ್ನಾರಾಜ್ ಪ್ರಧಾನ ಕಾರ್ಯಕರ್ಶಿಯಾಗಿ , ಚಂದ್ರಶೇಖರ್ ಅರಿಗ ಖಜಾಂಚಿಯಾಗಿ , ಎಸ್. ವಿ ಪ್ರಶಾಂತ್ , ಮಹಾವೀರ್ ಗೋಗಿ, ವೈಶಾಲಿಚಂದ್ರಪ್ರಭು , ನಂದಿನಿ ಅನಂತರಾಜ್, ಸಹ ಕಾರ್ಯದರ್ಶಿಗಳಾಗಿ ಇವರುಗಳಿಗೆ ಪ್ರಮಾಣ ವಚನ ಬೋದಿಸಿದರು. ಕೆ. ಯುವರಾಜ್  ಭಂಡಾರಿಯವರು ವಿಭಾಗದ ಉಪಾಧ್ಯಕ್ಷರುಗಳು ಹಾಗೂ ಮೈಸೂರು ವಿಭಾಗದ ನಿರ್ದೇಶಕರುಗಳಿಗೆ  ಪ್ರಮಾಣವಚನ ಬೋದಿಸಿದರು. ನೂತನ ಅಧ್ಯಕ್ಷರಾದ ಕೆ. ಯುವರಾಜ್ ಭಂಡಾರಿಯವರು  ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಂತರ ಡಿ. ಸುರೇಂದ್ರ ಕುಮಾರ್ ರವರು ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.  ಸುಂದರ ವಾತಾವರಣದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.