ಜಿನಭಜನಾ ಕಾರ್ಯಕ್ರಮದಲ್ಲಿ ಶಮಿತಾ ಮಲ್ನಾಡ್

ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

ಕನ್ನಡ ಚಿತ್ರರಂಗದಲ್ಲಿ 850 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವಂತಹ , ವೃತ್ತಿಯಲ್ಲಿ ದಂತ ವೈದ್ಯೆಯಾಗಿರುವ  ಎಲ್ಲರನ್ನೂ ತಮ್ಮ ಕಂಠಸಿರಿಯಿಂದ ಹಾಡಿ ಜನರ ಮನೆಮನಗಳನ್ನು ಗೆದ್ದಿರುವ ಡಾ|| ಶಮಿತಾ ಮಲ್ನಾಡ್ ರವರು ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರಿಗೂ ತಮ್ಮ ತುಂಬು ಹೃದಯದ ನಮನಗಳನ್ನು ಸಲ್ಲಿಸುತ್ತಾ ಅವರು ಇದೇ ರೀತಿಯ ಕಾರ್ಯಕ್ರಮಗಳು ಇನ್ನೂ ಇನ್ನೂ ಯಶಸ್ವಿಯಾಗಿ  ನಡೆಯಲಿ ಎಂದು ಹಾರೈಸಿದರು. ಹಾಗೆಯೇ ಎಲ್ಲರೂ ತಮ್ಮ ದಿನನಿತ್ಯದ ಜೀವನದಲ್ಲಿ ಮುಳುಗಿರುತ್ತಾರೆ. ಹಾಗೆಯೇ ಸಂಗೀತದಿಂದ ಸಿಗುವ  ಆನಂದವನ್ನು ನಾವು ಪ್ರತಿಯೊಬ್ಬರು ಸಹ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.  ನಂತರ ರಾಷ್ಟ್ರಕವಿ ಕುವೆಂಪುರವರ ರಚಿತ ಕಾವ್ಯದ ಸಾಲುಗಳನ್ನು ಹಾಡಿ ಅಲ್ಲಿಗೆ ಬಂದಿದ್ದ ಎಲ್ಲರನ್ನೂ ರಂಜಿಸಿದರು. ನಂತರ ಅವರಿಗೆ ಗೌರವ ಸಮರ್ಪಣೆಯನ್ನು ನೆರವೇರಿಸಿದರು.