ಜಿನಭಜನಾ ಫಿನಾಲೆಯಲ್ಲಿ ವಿ.ನಾಗೇಂದ್ರ ಪ್ರಸಾದ್ (ಅಪ್ಪಾ ಐ ಲವ್ ಯು ಪಾ ಸಾಂಗ್).

ಜಿನೇಂದ್ರ ಜ್ವಾಲಮಾಲಾ ಡಾಟ್ ನ್ಯೂಸ್

4000ಕ್ಕೂ ಹೆಚ್ಚು ಹಾಡುಗಳಿಗೆ ಗೀತ ರಚನೆಯನ್ನು ಮಾಡುವುದರ ಮೂಲಕ ನಟನೆ , ನಿರ್ದೇಶನ, ಸಂಭಾಷಣೆ, ಎಲ್ಲಾ ರಂಗದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಡಾ|| ವಿ. ರಾಜೇಂದ್ರ ಪ್ರಸಾದ್  ಅವರು ರಚಿಸಿರುವ ಹಾಡುಗಳು ಎಲ್ಲವೂ ಚೆನ್ನಾಗಿ ಮೂಡುಬರುತ್ತವೆ ಕಾರಣ ಏನು ಎಂದು ಗೊತ್ತಾಗುತ್ತಿಲ್ಲ ಎಂದು ನಿರೂಪಣೆ ಮಾಡುತ್ತಿದ್ದವರು ಅವರನ್ನು ವೇದಿಕೆಗೆ ಸ್ವಾಗತಿಸಿದರು.  ಅವರು ಮಹಾಸ್ವಾಮೀಜಿಗಳನ್ನು ಕುರಿತು  ಮಾತನಾಡಿ ಅವರಿಗೆ ಧನ್ಯತಾ ಭಾವನೆಯ ನಮನಗಳನ್ನು ಸಮರ್ಪಿಸಿದರು. ಮತ್ತು ಅಲ್ಲಿ ಬಂದಿರುವಂತಹ ಗಣ್ಯರು ಗಳಿಗೂ  ಸಹ ಅವರು ತಮ್ಮ ಗೌರವವನ್ನು ಸಮರ್ಪಣೆ ಮಾಡಿದರು. ಇವರುಗಳು ಮಾಡುತ್ತಿರುವ ಜಿನಭಜನಾ ಸ್ಪರ್ಧೆಯನ್ನು ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ಸಂಸ್ಕೃತಿ , ನಡೆ, ನುಡಿ ಗಳನ್ನೆಲ್ಲಾ ಮರೆಯುವ ಹಂತಕ್ಕೆ ಬಂದಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ತುಂಬಾ ಹೆಮ್ಮೆಯ ವಿಷಯ. ಹಾಗೆಯೇ ಭಜನೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಹ ನನ್ನ ನಮನಗಳನ್ನು ತಿಳಿಸುತ್ತೇನೆ. ಎಂದು ಮಾತನಾಡಿದರು. ಹಾಗೆಯೆ ಅವರಿಗೆ ವಿದ್ಯೆ ಬುದ್ದಿಯನ್ನು ಕಲಿಸಿದ ಶಿಕ್ಷಕಿಯನ್ನು ಸಹ ವೇದಿಕೆಯಲ್ಲಿ ಪರಿಚಯಮಾಡಿಸಿದರು. ಹಾಗೆಯೇ ಅವರು ಬೆಳೆದು ಬಂದ ಹಾದಿ ಪಟ್ಟ ಕಷ್ಟಗಳನ್ನೆಲ್ಲಾ ವೇದಿಕೆಯಲ್ಲಿ ಹಂಚಿಕೊಂಡು ತುಂಬಾ ಬಾವುಕರಾದರು. ನಂತರ ಅವರಿಗೆ ಗೌರವವನ್ನು ಸಮರ್ಪಣೆಯನ್ನು ಮಾಡಿದರು.