ಮೊದಲನೇ ದಿನದ ಸಮ್ಮೇಳನ~ 01-09-2022
ಆಯೋಜಕರು: ತ್ಯಾಗಿ ಸೇವಾ ಸಮಿತಿ, ಬೆಂಗಳೂರು
ಈ ಸಮ್ಮೇಳನದಲ್ಲಿ ಸ್ವಾಮೀಜಿಯವರು ಹಿರಿಯರನ್ನು ಗೌರವಿಸಿ ಹಾಗೂ ಅವರನ್ನು ಹೇಗೆ ಸತ್ಕರಿಸಿಬೇಕು ಎಂದು ತಿಳಿಸಿಕೊಟ್ಟರು. 60 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರುಗಳನ್ನು ಸೀನಿಯರ್ ಸಿಟಿಜನ್ ಎಂದು ನಾವು ಕರೆಯುತ್ತೇವೆ. ಅವರನ್ನು ಈಗಿನ ಕಾಲದಲ್ಲಿ ಮನೆಯಲ್ಲಿ ಯಾರೂ ನೋಡಿಕೊಳ್ಳುವವರು ಯಾರೂ ಇಲ್ಲ ಇವರ ಹಾರೈಕೆ ಹಾಗೂ ಅವರ ಸೇವೆಯನ್ನು ಹೇಗೆ ಮಾಡಬೇಕು ಎಂದರೆ ಅವರ ಊಟದ ಬಗ್ಗೆ , ಧರ್ಮದ ಬಗ್ಗೆ , ಚರ್ಚೆಗಳು ಸ್ವಲ್ಪ ಮಧ್ಯವಯಸ್ಕರಲ್ಲದೇ ಅವರ ಸಮ ವಯಸ್ಕರುಗಳು ಕೂಡ ಅವರನ್ನು ಭೇಟಿ ಮಾಡಿ ಚರ್ಚೆಯ ಮೂಲಕ ಅವರ ಕಷ್ಟಸುಖಗಳನ್ನು ವಿಚಾರಿಸುವುದು ಹಾಗೂ ಅವರ ಅವಶ್ಯಕತೆಗಳ ಕುರಿತು ಚರ್ಚೆ ಮಾಡುವುದರ ಮೂಲಕ ಅವರಿಗೂ ಮನಸ್ಸಿಗೆ ಸಮಾಧಾನವಾಗುತ್ತದೆ. ಈ ದಿನಗಳಲ್ಲಿ ಅವರ ಮಕ್ಕಳುಗಳು ಕುಳಿತು ಮಾತನಾಡಲು ಅವರಿಗೆ ಸಮಯವಿಲ್ಲ ಇದರಿಂದ ಅವರುಗಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಹೋಗುತ್ತಿದ್ದಾರೆ. ಇದರಿಂದ ಅವರಿಗೆ ನೂರಾರು ಖಾಯಿಲೆಗಳು ಅವರೊಂದಿಗೆ ಬರುವುದಲ್ಲದೇ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ ಇದಕ್ಕೆ ಅವರ ಸಮಸ್ಯೆಗಳನ್ನು ಪರಿಹರಿಸಲು ಜೈನ ಸನ್ಯಾಸ ಆಶ್ರಮವನ್ನು ಪ್ರಾರಂಭಿಸೋಣ ಎಂದು ಕೊಂಡಿದ್ದೇವೆ. ಈ ಆಶ್ರಮದಲ್ಲಿ ಎಲ್ಲಾ ರೀತಿಯ ಸದುಪಯೋಗವಾಗುವ ವ್ಯವಸ್ಥೆಯನ್ನು ನಾವುಗಳು ತುಂಬಾ ಕಟ್ಟುನಿಟ್ಟಾಗಿ ಮಾಡೋಣವೆಂದು ಕೊಂಡಿದ್ದೇವೆ. ಇದಕ್ಕೆಲ್ಲಾ ತಮ್ಮೆಲ್ಲರ ಸಹಾಯ ಸಹಕಾರ ಬೇಕು . ನಿಮ್ಮ ಸಹಕಾರದಿಂದ ಈ ಜೈನ ಸನ್ಯಾಸ ಆಶ್ರಮವು ದೇಶಾದ್ಯಂತ ಹೆಸರಾಗುವಂತೆ ನಾವು ಸೇವೆಯನ್ನು ಕೊಟ್ಟು ಒಂದು ನಿದರ್ಶನ ವಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಸ್ವಾಮೀಜಿಯವರು ತಿಳಿಸಿದರು. ಇದಲ್ಲದೇ ಇನ್ನೂ ಮುಂದೆಯೂ ಸಹ ಹತ್ತು ಹಲವಾರು ಸಮಾಜಕ್ಕೆ ಉಪಯೋಗವಾಗುವ ಹಾಗೂ ನಮ್ಮ ಸಮಾಜ ಬಾಂದವರ ಆರೋಗ್ಯದ ದೃಷ್ಠಿಯ ಬಗ್ಗೆ ಗಮನ ಹರಿಸಿ ಇಡೀ ವಿಶ್ವವೇ ತಿರುಗಿ ನೋಡುವ ರೀತಿಯಲ್ಲಿ ನಾವು ನಡೆಸುತ್ತೇವೆ ಎಂದು ನಾನು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅತೀ ಹಳೆಯ ಹಿರಿಯ ನಾಗರೀಕರನ್ನು ಗೌರವ ನಮನಗಳನ್ನು ಅರ್ಪಿಸಿದರು.














