ಜೈ ಜಿನೇಂದ್ರ ವೀಕ್ಷಕರೆ ಸಾಳ್ವ ಅರಸರ ರಾಜಧಾನಿ ರಾಣೀ ಚೆನ್ನಬೈರಾದೇವಿ ರಾಜಧಾನಿಯನ್ನಾಗಿಸಿ ರಾಜ್ಯಬಾರ ಮಾಡಿದ ನಾಡು, ಸಂಗೀತ ಪುರವೆಂದು ಶಾಸನದಲ್ಲಿ ಉಲ್ಲೇಖಿತಗೊಂಡ ಪುರಾತನ ಐತಿಹಾಸಿಕ ಸುಂದರ ಸ್ಥಳ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹಾಡುವಳ್ಳಿ.
ಇಲ್ಲಿ ಪ್ರಾಚೀನ ಕಾಲದಲ್ಲಿ 18 ಬಸದಿಗಳು ಇಲ್ಲಿದ್ದು ಉಳಿದೆಲ್ಲವು ಅವಶೇಷಗಳಾಗಿ ಪ್ರಸ್ತುತ ಶ್ರೀ ಪಾರ್ಶ್ವನಾಥ ಸ್ವಾಮಿ ಶಿಲಾಮಯ ಬಸದಿ ಶಿಥಿಲವಾಗಿದ್ದ ಕಾರಣ ಸ್ವಸ್ತಿಶ್ರೀ ಭುವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಕ್ಷೇತ್ರ ಕನಕಗಿರಿ ಇವರು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಯ ಯೋಜನೆಯಡಿಯಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿ ಕೊಟ್ಟಿರುತ್ತಾರೆ. ಶ್ರೀ ಚಂದ್ರನಾಥ ಬಸದಿ ಶಿಥಿಲವಾಗಿದ್ದ ಕಾರಣ ದಿನಾಂಕ 26-02-2018ರಂದು ಜೀರ್ಣೋದ್ಧಾರ ಮಾಡಬೇಕೆಂದು ತೀರ್ಮಾನ ಮಾಡಲಾಗಿ ಆ ಪ್ರಕಾರ 20-09-2019 ರಂದು ಸಮಸ್ತ ಮುನಿ ಸಂಘದ ಆಶೀರ್ವಾದದಿಂದ ಹಾಗೂ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಇವರ ಆಶೀರ್ವಾದದಿಂದ ಮತ್ತು ಪರಮಪೂಜ್ಯ ಜಗದ್ಗುರು ಅಕಲಂಕ ಕೇಸರಿ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಶ್ರೀ ಕ್ಷೇತ್ರ ಸ್ವಾದಿ ಇವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಪ್ರಸ್ತುತ ಶ್ರೀ ಚಂದ್ರನಾಥ ಸ್ವಾಮಿ ಶ್ರೀ 24 ತೀರ್ಥಂಕರರು ಶ್ರೀ ಪದ್ಮಾವತಿ ದೇವಿ ಬಸದಿ ಜೀರ್ಣೋದ್ಧಾರ ಕಾರ್ಯಗಳು ಸಮಸ್ತ ಭಕ್ತರ ಸೈಯೋಗದಲ್ಲಿ ಹಾಗೂ ಘನವೆತ್ತ ಕರ್ನಾಟಕ ಸರ್ಕಾರದ ವಿಶೇಷ ಸೈಯೋಗದಲ್ಲಿ ಬಸದಿಯ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿರುತ್ತವೆ. ಈ ನಿಮಿತ್ತ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ, ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಪಂಚಕಲ್ಯಾಣ, ಶ್ರೀ 24 ತೀರ್ಥಂಕರರು, ಶ್ರೀ ಪದ್ಮಾವತಿ ದೇವಿ ಬಸದಿಯ ಧಾಮಸಂಪ್ರೋಕ್ಷಣೆ, ಕಳಸ ಸ್ಥಾಪನೆ ಹಾಗೂ ಶ್ರೀ ಪದ್ಮಾವತಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಶ್ಯಾಮ ಯಕ್ಷ, ಶ್ರೀ ಜ್ವಾಲಮಾಲಿನಿ ಯಕ್ಷಿ ಪ್ರತಿಷ್ಠಾಪನೆ ಮಹೋತ್ಸವ ಪರಮ ಪೂಜ್ಯ 108 ಶ್ರೀ ಅಮೀತಂಜನ ಕೀರ್ತಿ ಮಹಾರಾಜರ ಪಾವನ ಸಾನಿಧ್ಯದಲ್ಲಿ, ಪರಮ ಪೂಜ್ಯ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು, ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಸಂಸ್ಥಾನ ಮಠ ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸಮಸ್ತ ಜೈನ ಮಠಗಳ ಸ್ವಸ್ತಿಶ್ರೀ ಭಟ್ಟಾರಕ ಮಹಾಸ್ವಾಮೀಜಿಗಳವರ ದಿವ್ಯ ಉಪಸ್ಥಿತಿ ಹಾಗೂ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯು ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ. ದಿನಾಂಕ 22-03-2023 ರಿಂದ 24-03-2023ರ ವರೆಗೆ ವಿಜೃಂಭಣೆಯಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪ್ರೀತಿ ಪೂರ್ವಕ ಆಮಂತ್ರಣವನ್ನು ಸಮಿತಿವತಿಯಿಂದ ತಮ್ಮೆಲ್ಲರಿಗೆ ನೀಡಲಾಗಿದೆ. ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾಗಬೇಕಾಗಿ ವಿನಂತಿ.
ಸ್ಥಳೀಯರು ಜ್ವಾಲಮಾಲ ನ್ಯೂಸ್ ಗೆ ಮಾತನಾಡಿ ಹಾಡುವಳ್ಳಿ ಕ್ಷೇತ್ರದ ವಿಶೇಷತೆಯನ್ನು ವಿವರಿಸಿ ಶ್ರೀಕ್ಷೇತ್ರಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾಗಬೇಕಾಗಿ ವಿನಂತಿಸಿ ಕೊಂಡರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














