ಕರಾವಳಿ ಮಿಲನೋತ್ಸವ

ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕರಾವಳಿ ಮಿಲನೋತ್ಸವ ಈ ಬಾರಿ ಮೂಡುಬಿದಿರೆಯ ಪದ್ಮಾವತಿ ಕಲಾಮಂದಿರದಲ್ಲಿ ವೈಭವಯುತವಾಗಿ ಜರುಗಿತು. 

ದಿನಾಂಕ : 18/12/2016ನೇ ಭಾನುವಾರ ದಂದು ನಡೆದ ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಭಾರತಿ ದರ್ಶನ ಸ್ವಸ್ತಿಶ್ರೀ ಭಟಾರಕ  ಚಾರುಕೀರ್ತಿ ಪಂಡಿತಾಚಾರ್ಯವರಿಯ ಮಹಾ ಸ್ವಾಮೀಜಿಗಳು ಪಾವನ  ಸಾನಿಧ್ಯಾವಹಿಸಿದು. ಡಿ. ಸುರೇಂದ್ರ ಕುಮಾರ್ ರವರು ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಶಾಸಕರಾದ ಅಭಯಚಂದ್ರ ಜೈನ್ ರವರು ಧ್ವಜಾರೋಹಣ ಮಾಡಿದರು.

ಡಾಕ್ಟರ್ ಎಮ್,ಎನ್ ರಾಜೇಂದ್ರ ಕುಮಾರ್ ರವರು ಹಾಗೂ ಅತಿಥಿ ಗಣ್ಯರಿಂದ ಮಿಲನೋತ್ಸವ ದೀಪ ಪ್ರಜ್ವಲನೆಯಿಂದಯಿಂದ ಉದ್ಘಾಟನೆಮಾಡಲಾಯಿತ್ತು.  ಇ.ವಿ ಅಜ್ಜಪ್ಪನವರು, ಕೆ.ಪ್ರಸನ್ನ ಕುಮಾರ್, ಸುಮತಿಕುಮಾರ್‍ರವರು, ಹೆಚ್.ಧನಕೀರ್ತಿ ಬಲಿಪಾ, ಸುಭಾಷ್‍ ಚಂದ್ರ ಜೈನ್, ಪುಷ್ಪರಾಜ್ ಜೈನ್, ಜೈ ರಾಜ್ ಕಂಬಳಿ, ನಮೀರಾಜ್ ಜೈನ್, ಜಿನೇಂದ್ರ ಹೆಗ್ಗಡೆ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗುಣಪಾಲ ಹೆಗ್ಡೆರವರು ಕಾರ್ಯಕ್ರಮವನ್ನು ನಿರೂಪಿಸಿದರು. ಧನಕೀರ್ತಿ ಬಲಿಪಾರವರು ಸ್ವಾಗತಿಸಿದರು. ಪುಷ್ಪರಾಜ್ ಜೈನ್ ರವರು ಪ್ರಾಸ್ತವಿಕ ನುಡಿಗಳನ್ನಾಡಿ ಮಿಲನೋತ್ಸವದಲ್ಲಿ ನಡೆಯಲ್ಲಿರುವ ಕಾರ್ಯಕ್ರಮಗಳ ಬಗ್ಗೆ ಹೇಳಿದರಲ್ಲದೆ, ಸಂಘಡಿದರಿಗೆ ಪ್ರೋತ್ಸಾಹದ ಮಾತನಾಡಿದರು. ಶಾಸಕ ಅಭಯಚಂದ್ರ ಜೈನ್ ರವರು ಮಾತನಾಡಿ, ಜೈನ್ ಮಿಲನದಿಂದ್ದಾಗಿ ಪ್ರತಿ ಊರಿನಲ್ಲಿ ಜೈನರ ಸಂಘಟನೆ ಬೆಳೆಯುವ ಕಾರ್ಯವಾಗಿದೆ. ವೀರೆಂದ್ರ ಹೆಗ್ಗಡೆರವರ ಹಾಗೂ ಮೂಡುಬಿದಿರೆಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಜೈನ ಧರ್ಮ ಬೆಳಗುತ್ತಿದೆ ಎಂದು ಶ್ಲಾಘಿಸಿದರು.