ನೂತನ ಮಾನಸ್ತಂಭೋಪರಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವದ ದ್ವಿತೀಯ ದಿನದ ಕಾರ್ಯಕ್ರಮಗಳು.
ಜಿನಮಂದಿರದಲ್ಲಿ 27 ಕಳಸ ಅಭಿಷೇಕ, ಪಂಚಕಲ್ಯಾಣ ಮಂಟಪದಲ್ಲಿ ಪಂಚಾಮೃತ ಅಭಿಷೇಕ ಮತ್ತು ಯಾಗಶಾಲೆಯಲ್ಲಿ ಬೃಹತ್ ಯಾಗ ಮಂಡಲ ಆರಾಧನೆ.
ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು, ಮತ್ತು ಶ್ರೀಕ್ಷೇತ್ರವನ್ನು ಕುರಿತು ವರ್ಣಿಸಿ ಬಸದಿಯ ಜೀರ್ಣೋದ್ಧಾರ, ಬಸದಿಯ ಕೆತ್ತನೆ, ಮಾನಸ್ತಂಭ ನಿರ್ಮಾಣದ ಸೊಭಗನ್ನು ಕುರಿತು ಮಾತನಾಡಿದರು.
ಶ್ರೀ ಸುರೇಂದ್ರ ಕುಮಾರ್ ರವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು ಶ್ರೀ ಕ್ಷೇತ್ರ ಹೊಂಬುಜದ ಅಭಿವೃದ್ಧಿ ಕುರಿತು ವಿವರಿಸಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














