ಮೈಸೂರು-ವರ್ಧಮಾನ್ ಜೈನ್ ಮಿಲನ್…/ jwalamalanews / 2022

ಜೈ ಜಿನೇಂದ್ರ ವೀಕ್ಷಕರೆ, ಮೈಸೂರು ವರ್ಧಮಾನ ಜೈನ್ ಮಿಲನ್ ವತಿಯಿಂದ ಭಗವಾನ್ ಆದಿನಾಥರ ಮೋಕ್ಷ ಕಲ್ಯಾಣ ದಿನದಂದು ಜಿನ ರಾತ್ರಿ ಪ್ರಯುಕ್ತ ದಿನಾಂಕ 18, 19 ಫೆಬ್ರವರಿ 2023 ರಂದು ಕೋಟೆ ಶ್ರೀ ಶಾಂತಿನಾಥ ಬಸದಿಯಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ಅಖಂಡ ಣಮೋಕಾರ ಮಂತ್ರ ಪಠಣೆ ಧಾರ್ಮಿಕ ಕಾರ್ಯಕ್ರಮವನ್ನು ಅಧ್ಯಕ್ಷರಾದ ವೀರ್ ಪ್ರಶಾಂತ್ ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ದಿನಾಂಕ 18-2-2023ರ ಬೆಳಗ್ಗೆ ಮಿಲನ್ ಸದಸ್ಯರುಗಳು ಶ್ವೇತ ವಸ್ತ್ರದಾರಿಗಳಾಗಿ ಕೋಟೆ ಬಸದಿಯ ಶಾಂತಿನಾಥ ಸ್ವಾಮಿ ಪೂಜೆ ಅಭಿಷೇಕದ ನಂತರ ದೇವಗುರು ಶಾಸ್ತ್ರದೊಂದಿಗೆ ಮೆರವಣಿಗೆ ಮೂಲಕ ಬಿಂಬವನ್ನು ಹೊತ್ತು ಪ್ರದಕ್ಷಿಣೆ ನಂತರ ಸ್ಥಾಪನೆ ಮಾಡಿ ನಂತರ ಪೂಜ್ಯ ಮುನಿ ಮಹಾರಾಜರ ಣಮೋಕಾರ ಮಂತ್ರ ಪಠಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ವಲಯ 8ರ ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು ರವರು, ಅಧ್ಯಕ್ಷರಾದ ಬಿ ಯುವರಾಜ್ ಭಂಡಾರಿ, ಕಾರ್ಯದರ್ಶಿ ಎಂ ರತ್ನರಾಜು ಹಾಗೂ ಪದಾಧಿಕಾರಿಗಳು. ದಿಗಂಬರ ಜೈನ ಸಮಾಜ ಹಾಗೂ ಜೈನ ಮಹಿಳಾ ಸಮಾಜದ ಅಧ್ಯಕ್ಷರು, ಕಲಾವಿದ ಶ್ರೀಧರ್ ಜೈನ್ ದಂಪತಿಗಳು ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಿಲನ್ ಸದಸ್ಯರೊಂದಿಗೆ ಸಮಾಜ ಬಾಂಧವರು ತಂಡ ತಂಡವಾಗಿ ಸರದಿ ಪ್ರಕಾರ ಣಮೋಕಾರ ಮಂತ್ರ ಪಠಣೆ ಮಾಡಿ ನಿರಂತರವಾಗಿ ಅಖಂಡ ನಮೋಕಾರ ಮಂತ್ರ ಪಠಣೆ ನಡೆಯಿತು.

ದಿನಾಂಕ 18ರ ಶನಿವಾರ ಬೆಳಗ್ಗೆ ಪ್ರಾರಂಭವಾದ ಣಮೋಕಾರ ಮಂತ್ರ ಪಠಣೆ ದಿನಾಂಕ 19 ಭಾನುವಾರ 8:30ಕ್ಕೆ ನಿರಂತರವಾಗಿ ಜರುಗಿ ಕೋಟೆ ಬಸದಿಯ ಶಾಂತಿನಾಥ ಸ್ವಾಮಿಯ ಪೂಜೆ ಅಭಿಷೇಕದೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಮೂಲಕ 24 ಗಂಟೆಗಳ ಕಾಲ ನಿರಂತರವಾಗಿ ಜಿನ ರಾತ್ರಿ ಪ್ರಯುಕ್ತ ಣಮೋಕಾರ ಮಂತ್ರ ಪಠಣೆ ಮಾಡುವ ಕಾರ್ಯಕ್ರಮ ಯೋಜನೆಯಲ್ಲಿ ವರ್ಧಮಾನ ಜೈನ್ ಮಿಲನ್ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಕಾರ್ಯಕ್ರಮದ ಮುಖ್ಯ ಕಾರಣ ಕರ್ತೃಗಳಾದ ಧಾರ್ಮಿಕ ಕಾರ್ಯದರ್ಶಿಗಳಾದ ಚಾರಿತ್ರ ಮಹಾವೀರ್ ರವರು ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

            ಜ್ವಾಲಮಾಲ ಡಾಟ್ ನ್ಯೂಸ್