-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಅತಿಶಯ ಶ್ರೀಕ್ಷೇತ್ರ ಹೊಂಬುಜ, ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಶ್ರೀ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಳ ನೇತಾರವಾಗಿ ಕ್ಷೇತ್ರದ ಕೀರ್ತಿ ಬೆಳಗುತ್ತಿರುವುದಲ್ಲದೆ, ಬೃಹತ್ ಕೈಂಕರ್ಯಕ್ಕೆ ಸಂಕಲ್ಪಮಾಡಿ ಕ್ಷೇತ್ರದ ಅದಿ ದೇವತೆ ಶ್ರೀ ಜಗನ್ ಮಾತೆ ಪದ್ಮಾವತಿ ಅಮ್ಮನವರ ಬಸದಿಯನ್ನು ಶಿಲಾಮಯ ಬಸದಿಯನ್ನಾಗಿಸಿ ಜೀರ್ಣೋದ್ಧಾರ ಕೈಗೊಂಡು ಇದೀಗಾ ಸಂಪನ್ನಗೊಳ್ಳಲಿದೆ ನೂತನ ಮಾನಸ್ತಂಭೋಪರಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ.
ದಿನಾಂಕ 22-01-2023 ರಿಂದ 27-01-2023 ವರೆಗೆ ನಡೆಯಲಿರುವ ಮಹೋತ್ಸವಕ್ಕೆ ಸ್ವತಃ ಶ್ರೀಗಳವರಿಂದ ಆತ್ಮಿಯ ಆಹ್ವಾನ.
ಅತಿಶಯ ಶ್ರೀ ಕ್ಷೇತ್ರ ಹೊಂಬುಜದಲ್ಲಿ ಮುಂದಿನ ವಾರ 22 ನೇ ತಾರೀಖಿ ನಿಂದ 27ರ ವರೆಗೆ ಅಮ್ಮನವರ ಬಸದಿ ಜೀರ್ಣೋದ್ಧಾರ ಹಾಗೂ ನೂತನ ಮಾನಸ್ತಂಭ ನಿರ್ಮಾಣವಾಗಿದ್ದು ಅದರಲ್ಲಿ 24 ತೀರ್ಥಂಕರರ ಪ್ರತಿಷ್ಠಾ ನಿಮ್ಮಿತ್ತವಾಗಿ ಪಂಚಕಲ್ಯಾಣ ಪೂರ್ವಕ ಕಾರ್ಯಕ್ರಮಗಳು ನಡೆಯಲಿದೆ. ಪರಮಪೂಜ್ಯ ಆಚಾರ್ಯ ಶ್ರೀ ಗುಣದರ ನಂದಿ ಮುನಿಗಳ ಸಂಘದ ಸಾನಿಧ್ಯ ಹಾಗೂ ಪರಮ ಪೂಜ್ಯ ಮುನಿ ಶ್ರೀ ಪುಣ್ಯಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಸಮಸ್ತ ಭಟ್ಟಾರಕರ ಒಂದು ದಿವ್ಯ ಸಾನಿಧ್ಯದಲ್ಲಿ ಎಲ್ಲಾ ಮಂಗಳ ಕಾರ್ಯಕ್ರಮಗಳು ನಡೆಯಲಿದೆ. ಮಾನಸ್ತಂಭದ ಮೇಲೆ 24 ತೀರ್ಥಂಕರರು ಇರುವುದರಿಂದ ಈ ಒಂದು ಪಂಚಕಲ್ಯಾಣವಾಗ ಬೇಕಾಗಿತ್ತು. ಜೊತೆಗೆ 24 ಕೂಟಗಳ ತೀರ್ಥಂಕರರ ಪಾದಗಳನ್ನು ಇಡುವಂತಹ ಕಾರ್ಯಕ್ರಮವು ಇದೆ. ಕ್ಷೇತ್ರ ಪಾಲ ಬಸದಿಯು ಕೂಡ ನೂತನವಾಗಿ ಶಿಲಾಮಯವಾಗಿದೆ. ಮತ್ತು ಚಂದ್ರ ಶಾಲೆ ನಿರ್ಮಾಣವನ್ನು ಮಾಡಲಾಗಿದೆ. ಎಲ್ಲಾ ಅನೇಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ರಚನೆಯಾಗಿದ್ದು ಕಳೆದ 2 ವರ್ಷದ ಅವಧಿಯಲ್ಲಿ ಈ ಸಂಪೂರ್ಣವಾದಂತಹ ಕಾರ್ಯಗಳು ಜರುಗಿದೆ. ಜೈನ ಸಮಾಜದವರ ಸಹಕಾರದೊಂದಿಗೆ ನಡೆದಿದ್ದು. ಈ ಒಂದು 6 ದಿನದಲ್ಲಿ ನಡೆಯುವಂತಹ ಮಾಂಗಲಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ಮತ್ತು ಈ ದೇಶದಿಂದ ಕಾರ್ಯಕ್ರಮಕ್ಕೆ ಬಂದು ಭಾಗವಹಿಸಲಿದ್ದಾರೆ ಅವರಿಗೆಲ್ಲರಿಗೂ ಸ್ವಾಗತಿಸುತ್ತೇವೆ. ದೇವೇಂದ್ರ ಕೀರ್ತಿ ಸ್ವಾಮೀಜಿಗಳ ಪಾವನ ಸಾನಿಧ್ಯ ನೇತೃತ್ವದಲ್ಲಿ ದೇವಸ್ಥಾನದ ನಿರ್ಮಾಣವನ್ನು ಅಮ್ಮನವರಿಗೆ ಮಾಡಲಾಗಿತ್ತು. 60 ವರ್ಷಗಳ ಸಂದರ್ಭದಲ್ಲಿ ಜೀರ್ಣೋದ್ಧಾರದ ಪರಿಸ್ಥಿತಿ ಬಂದಿದ್ದರಿಂದ 2 ವರ್ಷದ ಹಿಂದೆ ಇದ್ದಂತಹ ರೀತಿಯಲ್ಲಿ ಶಿಲಾಮಯ ಬಸದಿ ನಿರ್ಮಾಣ ಮಾಡಲಾಗಿದೆ. ಆ ಒಂದು ಕಾರ್ಯದ ಜೊತೆಗೆ ಜೀರ್ಣೋದ್ಧಾರದ ಕಾರ್ಯ ಸಮಾಜದ ಸಹಕಾರದಿಂದ ಈ ನಿರ್ಮಾಣ ಕಾರ್ಯಗಳು ನಡೆದಿದೆ. ಹಾಗಾಗಿ ಈ 6 ದಿನಗಳ ಕಾರ್ಯಕ್ರಮಗಳು ಸಹ ನಮ್ಮ ಸಮಾಜ ಬಾಂಧವರು ಎಲ್ಲರೂ ಸಹ ಕಾರ್ಯಕ್ರಮಕ್ಕೆ ಭಾಗವಹಿಸ ಬೇಕು ಎಂದು ಪ್ರೀತಿ ಪೂರ್ವಕವಾಗಿ ಎಲ್ಲರಿಗೂ ಶ್ರೀಗಳು ಆಹ್ವಾನವನ್ನು ಕೊಟ್ಟರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














