ಜೈ ಜಿನೇಂದ್ರ, ವೀಕ್ಷಕರೆ, ವಾರದ ಜೈನ ಸುದ್ದಿಗಳಿಗೆ ಸ್ವಾಗತ.
ಮುಖ್ಯಾಂಶಗಳು.
ಶ್ರೀ ಹೊಂಬುಜ ಜೈನ ಮಠದ ಪ್ರಾಯಶಕತ್ವದಲ್ಲಿ ಐತಿಹಾಸಿಕ ಅಂಚೆ ಕಾರ್ಡ್ ಗಳ ಬಿಡುಗಡೆ.
ಅಂತರಾಷ್ಟ್ರೀಯ ಜಿನ ಸಮ್ಮಿಲನದ ಪ್ರಯುಕ್ತ ವೆಬ್ಸೈಟ್ ಅಪ್ಲಿಕೇಶನ್ ಬಿಡುಗಡೆ.
ಮೈಸೂರು ವರ್ಧಮಾನ್ ಜೈನ್ ಮಿಲನ್ ವಿಶೇಷ ಮಾಸಿಕ ಸಭೆ.
ಸುಹಾಸ್ತಿ ಯುವ ಜೈನ್ ಮಿಲನ್ ವತಿಯಿಂದ ದುರ್ಗದ ಹಳ್ಳಿ ಬಸದಿ ಸ್ವಚ್ಛತೆ.
ನವಗ್ರಹ ತೀರ್ಥ ಶ್ರೀಗಳಿಗೆ ಚಾರುಶ್ರೀಗಳಿಂದ ಅಭಿನಂದನಾ ಪತ್ರ.
ಶ್ರೀ ಕ್ಷೇತ್ರ ಹೊಳೆನರಸೀಪುರದ ವಾರ್ಷಿಕ ಪೂಜಾ ಮಹೋತ್ಸವ.
ಮೂರು ವಿಭಾಗಗಳಲ್ಲಿ ನಡೆದ ಜಿನ ಭಜನಾ ಸ್ಪರ್ಧೆ.
ಗೊಮ್ಮಟಗಿರಿಯಲ್ಲಿ ವೈಭವದಿಂದ ನಡೆದ ಮಸ್ತಕಾಭಿಷೇಕ.
ಸುದ್ದಿಗಳ ವಿವರ.
ಭಾರತೀಯ ಅಂಚೆ ಇಲಾಖೆ ಮಂಗಳೂರು, ಪುತ್ತೂರು, ಶಿವಮೊಗ್ಗ ವಿಭಾಗದಿಂದ ಹೊಂಬುಜದ ಶ್ರೀ ಜೈನ ಮಠದ ಪ್ರಾಯೋಜಕತ್ವದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಐತಿಹಾಸಿ ಪುಣ್ಯ ಕ್ಷೇತ್ರಗಳ ಹಾಗೂ ಪುಣ್ಯ ಪುರುಷರನ್ನೊಳಗೊಂಡ ಅಂಚೆ ಕಾರ್ಡ್ ಗಳನ್ನು ಬಿಡುಗಡೆಗೊಳಿಸಲಾಯಿತು.
ಕನ್ನಡ ನಾಡಿನ ಜಿನ ರತ್ನ ಭೂಷಣರು ಪಿಚ್ಚರ್ ಪೋಸ್ಟಲ್ ಕಾರ್ಡ್ ರಿಲೀಸ್. ಕನ್ನಡ ರಾಜ್ಯೋತ್ಸವದ ಶುಭಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯು ಕನ್ನಡ ನಾಡಿನ ಐತಿಹಾಸಿಕ ಮಹಾನೀಯರ ಅಂಚೆ ಕಾರ್ಡ್ ಗಳನ್ನು ಹೊರ ತರುತ್ತಿರುವುದು ತುಂಬ ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಜೈನ ಹೊಂಬುಜ ಮಠದ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದ ಹಾಗೂ ಸೈಯೋಗದಲ್ಲಿ ಜಿನ ರತ್ನ ಭೂಷಣರು ಎಂಬ ಪರಿಕಲ್ಪನೆ ಸಕಾರಗೊಳ್ಳುತ್ತಿರುವ ಐತಿಹಾಸಿಕ ಕ್ಷಣ ಪಂಪ, ರನ್ನ, ಜನ್ನ, ಪೊನ್ನ, ರತ್ನಾಕರ ವರ್ಣಿ, ಚಾವುಂಡರಾಯ, ನಾಟ್ಯರಾಣಿ ಶಾಂತಲಾ, ದಾನ ಚಿಂತಾಮಣಿ ಅತ್ತಿಮಬ್ಬೆ, ಅಬ್ಬಕ್ಕ ದೇವಿ, ಚೆನ್ನಭೈರಾದೇವಿ ಎಂಬ 10 ಮಹನೀಯರ ವಿವರಣೆ ಉಳ್ಳ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಕಾರ್ಡ್ ಮೇಲೆ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಡೆಯಲು ಹೊಸ ತಂತ್ರಜ್ಞಾನವನ್ನು ಅಳವಡಿಸಿರುವ ಈ ವಿಷಯವು ತುಂಬಾ ಅಭಿನಂದನಾರ್ಹವಾಗಿದೆ. ಈ ಹೊಸ ತಂತ್ರಜ್ಞಾನದ ಆವಿಷ್ಕಾರ ಮಾಡಿ ಇಲ್ಲಿ ಅಳವಡಿಸಿದವರು ಜೈನ ಹಿರಿಟೆಜ್ ನ್ನ ಶ್ರೀ ನಿತಿನ್ ಹೆಚ್ ಪಿ ಹಾಗೂ ನೇರಂಕಿ ಪಾರ್ಶ್ವನಾಥ ಅವರು. ಈ ರೀತಿ ಇಂದ ದೇಶ ವಿದೇಶಗಳಲ್ಲಿ ನಮ್ಮ ಕನ್ನಡದ ಕಂಪನ್ನು ಹರಡುವ ಹೆಗ್ಗಳಿಕೆಯನ್ನು ಅಂಚೆ ಇಲಾಖೆ ಮಾಡಿದೆ. ಈ ಕಾರ್ಡ್ ಗಳಲ್ಲಿ ಸಾಂಕೇತಿಕವಾಗಿ ಸಾಂದರ್ಭಿಕವಾಗಿ ಚಿತ್ತುಗಳನ್ನು ಬಳಸಲಾಗಿದೆ. ಹತ್ತು ಕಾರ್ಡುಗಳನ್ನು ಹಿಡಿದಿಟ್ಟುಕೊಳ್ಳುವ ಬಾರಿಸು ಕನ್ನಡ ಡಿಂಡಿಮವಾ ಹೊದಿಕೆಯ ಲಕೋಟೆ ತುಂಬ ಸುಂದರವಾಗಿ ಮುಡಿಬಂದಿದೆ. ಒಟ್ಟಿನಲ್ಲಿ ಸಂಗ್ರಹಕ್ಕೆ ಕನ್ನಡ ನಾಡಿನ ಹೆಮ್ಮೆಗಾಗಿ ಹಮ್ಮಿಕೊಂಡ ಈ ಮಹಾನ್ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಹುಬ್ಬಳಿಯ ಮಹಾವೀರ್ ಕುಂದೂರ್ ರವರಿಗೂ ನಮ್ಮ ಅನಂತ ವಂದನೆಗಳು ಹಾಗೂ ಅಭಿನಂದನೆಗಳು ವಿಶೇಷವಾಗಿ ತಮ್ಮ ಜ್ಞಾನ ಭಂಡಾರದಿಂದ ಈ ಮಹನೀಯರ ಬಗ್ಗೆ ಲೇಖನ ಸಿದ್ದ ಪಡಿಸಿದ ಖ್ಯಾತ ವಾಗ್ಮಿ ಮೂಡುಬಿದ್ರೆ ಕಾಲೇಜಿನ ನಿವೃತ್ತ ಉಪ–ಪ್ರಾಂಶುಪಾಲರಾದ ಪ್ರೋಪೆಸರ್ ಅಜಿತ್ ಪ್ರಸಾದ್ ಸರ್, ಮಾಡೊವಿ ಮೋಟಾರ್ಸ್ ನ ಉಪಾಧ್ಯಕ್ಷರಾದ ಶ್ರೀ ನೇರಂಕಿ ಪಾರ್ಶ್ವನಾಥ್, ಜೈನ್ ಹೆರಿಟೆಜ್ ನ ಶ್ರೀ ನಿತಿನ್ ಹೆಚ್ ಪಿ. ಇನ್ನೊಬ್ಬ ಮೇಧಾವಿ ಖ್ಯಾತ ವಾಗ್ಮಿ ಶ್ರೀ ಮುನಿರಾಜ ರಂಜಾಳ್, ಶ್ರೀಮತಿ ವಿಧ್ಯಾ ಬಾಗೋಡಿ, ಶ್ರೀ ಶಾಂತಿನಾಥ ಹೊತಪೇಟೆ, ಶ್ರೀ ಸಂತೋಷ್ ಮುರುಗಿ ಪಾಟೀಲಾ, ಶ್ರೀ ವಿಮಲ್ ತಾಳಿಕೋಟೆ ಮತ್ತು ಮಂಗಳೂರು ಹಿರಿಯ ನಿರೀಕ್ಷಕರ ಕಛೇರಿಯ ಮತ್ತು ಮಂಗಳೂರು ಅಂಚೆ ವಿಭಾಗದವರೇಲ್ಲರ ಪರಿಶ್ರಮದ ಫಲವೆ ಇಂದಿನ ಸ್ಮರಣೆಯ ಅಂಚೆ ಕಾರ್ಡ್ ಗಳ ಯಶಸ್ವಿಗೆ ಕಾರಣ.
ಇದೇ ಡಿಸೆಂಬರ್ 3,4 ರಂದು ಅಂತರಾಷ್ಟ್ರೀಯ ಜಿನ ಸಮ್ಮಿಲನಾ ದುಬೈನಲ್ಲಿ ಜರುಗಲಿದ್ದು ಇದರ ಪ್ರಯುಕ್ತ ವೆಬ್ ಸೈಟ್ ಹಾಗೂ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಯಿತು.
ಜೈ ಜಿನೇಂದ್ರ ವೀಕ್ಷಕರೆ ಹಲವಾರು ವರ್ಷಗಳಿಂದ ಸುಹಾಸ್ತಿ ಯುವ ಜೈನ್ ಮಿಲನ್ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳತ್ತಾ ಬಂದಿದ್ದು ಅದರಲ್ಲಿ ಎಲ್ಲರ ಮನೆ ಮಾತಾದಂತಹ ಜಿನ ಸಮ್ಮಿಲನವು ಕೂಡ ಒಂದು ಪ್ರತಿವರ್ಷದಂತೆ ಈ ವರ್ಷವು ಜಿನ ಸಮ್ಮಿಲನ ವಿಭಿನ್ನ ರೀತಿಯಲ್ಲಿ ನಡೆಯಲ್ಲಿದ್ದು ಇದರ ಪ್ರಥಮ ಹಂತವಾಗಿ ಅಂತರಾಷ್ಟ್ರೀಯ ಜಿನ ಸಮ್ಮಿಲನದ ಪ್ರಯುಕ್ತ ಇತ್ತೀಚೆಗೆ ವೆಬ್ಸೈಟ್ ಮತ್ತು ಅಪ್ಲಿಕೇಶನ್ ಬಿಡುಗಡೆ ಕಾರ್ಯಕ್ರಮ ಹೊಂಬುಜ ಕ್ಷೇತ್ರದಲ್ಲಿ ನಡೆಯಿತು. ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ವೆಬ್ಸೈಟ್ ಹಾಗೂ ಅಪ್ಲಿಕೇಶನ್ ಗೆ ಚಾಲನೆ ನೀಡಿ ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ಪುಟ್ಟಸ್ವಾಮಿ ಜೈನ್, ಮಾಳ ಹರ್ಷೇಂದ್ರ ಜೈನ್, ಚಿತ್ತ ಜಿನೇಂದ್ರ, ವಜ್ರ ಕುಮಾರ್ ಜೈನ್, ವಿಮಲ್ ಕುಮಾರ್ ತಾಳಿಕೋಟೆ ಇವರುಗಳು ಉಪಸ್ಥಿತರಿದ್ದರು.
ಮೈಸೂರು ವರ್ಧಮಾನ್ ಜೈನ್ ಮಿಲನ್ ಮಾಸಿಕ ಸಭೆಯ ವರದಿ ಇಲ್ಲಿದೆ.
ಮೈಸೂರು ವರ್ಧಮಾನ್ ಜೈನ್ ಮಿಲನ್ ವಿಶೇಷ ಮಾಸಿಕ ಸಭೆ ಅತಿಥೇಯರಾದ ವೀರ್ ಪಾರ್ಶ್ವನಾಥ್ ರವರ ಸ್ವಗೃಹದಲ್ಲಿ ಅಕ್ಟೋಬರ್ 30ನೇ ತಾರೀಖು ವೀರ ರತ್ನವರ್ಮರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಮಿಲನ್ ಸದಸ್ಯರು ಶಿಖರ್ಜಿ ಯಾತ್ರೆಗೆ ತೆರಳಿದ ಬಗ್ಗೆ ಹಾಗೂ ಅದರ ಅನುಭವವನ್ನು ಮಹಾವೀರ್ ರವರು ಎಲ್ಲರೊಡನೆ ಹಂಚಿಕೊಂಡು. ನಂತರ ಶಿಖರ್ಜಿಯ ಪ್ರಸಾದವನ್ನು ವಿರಾಂಗನ ಚಾರಿತ್ರ ಮಹಾವೀರ್ ರವರು ಎಲ್ಲಾ ವೀರ ವಿರಾಂಗನೆಯರಿಗೆ ವಿತರಿಸಿದರು. ಇದರೊಂದಿಗೆ ಡಿಸೆಂಬರ್ ತಿಂಗಳಲ್ಲಿ ನಡೆಯುವ ಜಿನ ಭಜನಾ ಕಾರ್ಯಕ್ರಮಕ್ಕೆ ಮಿಲನ್ ವತಿಯಿಂದ ಎರಡು ತಂಡಗಳ ರಚನೆ ಬಗ್ಗೆ ಚರ್ಚಿಸಲಾಯಿತು.
ಸದಾ ಚಟುವಟಿಕೆಯಲ್ಲಿರುವ ಸಮುದಾಯಪರ ಕಾರ್ಯಗಳನ್ನು ನಡೆಸುತ್ತ ಇರುವ ಸುಹಾಸ್ತಿ ಯುವ ಜೈನ್ ಮಿಲನ್ ವತಿಯಿಂದ ಈ ಬಾರಿ ದುರ್ಗದಹಳ್ಳಿ ಬಸದಿ ಸ್ವಚ್ಛತಾ ಕಾರ್ಯ ನಡೆದಿದೆ.
ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಸಮೀಪದಲ್ಲಿರುವ ದುರ್ಗಹಳ್ಳಿಯಲ್ಲಿ ಸುಮಾರು 14ನೇಯ ಶತಮಾನಕ್ಕೆ ಸೇರಿದ ಪ್ರಾಚೀನ ಜೈನ ಬಸದಿಯನ್ನು ಚಿತ್ತ ಜಿನೇಂದ್ರ ರವರು ಕಳೆದ ವರ್ಷ ಹುಡುಕಿದರು. ಪ್ರತಿವರ್ಷ ಸುಹಾಸ್ತಿ ಯುವ ಜೈನ್ ಮಿಲನ್ ರವರು ಯಾವುದಾದರು ಒಂದು ಬಸದಿಯ ಸ್ವಚ್ಛತಾ ಕಾರ್ಯಕ್ರಮವನ್ನ ಮಾಡುತ್ತಿರುತ್ತಾರೆ. ಈ ವರ್ಷ ದುರ್ಗದ ಹಳ್ಳಿಯ ಬಸದಿಯ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 6-11-2022ರಂದು ನಡೆಸಲಾಗಿದ್ದು ಸುಮಾರು 60 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟು ಈ ಬಸದಿ ಸ್ವಚ್ಛಮಾಡುವಾಗ ನಮಗೆ ಒಂದು ನಿಶದಿ ಕಲ್ಲು ದೊರೆತಿದ್ದು ಅದನ್ನು ಬಸದಿಯೊಳಗೆ ಇಟ್ಟು ಸಂರಕ್ಷಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸನ್ಮತಿ ಟ್ರೆಡರ್ಸ್ ನ ಅಜಿತ್ ಜೈನ್, ಬನಶಂಕರಿ ಜೈನ್ ಮಿಲನ್ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಸುಕಾನಂದ, ಪದ್ಮಾವತಿ ಬಸದಿ, ಮಾಳ ಹರ್ಷೇಂದ್ರ ಜೈನ್, ಚಿತ್ತ ಜಿನೇಂದ್ರ, ನಿರಂಜನ್ ಜೈನ್, ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷರಾದಂತಹ ಪುಟ್ಟಸ್ವಾಮಿ ಜೈನ್, ಶೃತ ಮಹಿಳಾ ಸಮಾಜದ ಅಧ್ಯಕ್ಷರು ತುಮಕೂರು ಸುಹಾಸ್ತಿ ಜೈನ್ ಮಿಲನ್ ಸದಸ್ಯರುಗಳು ಇನ್ನೂ ಅನೇಕ ಜೈನ ಬಂಧುಗಳು ಸೇರಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೇರಿಸಿದ್ದಾರೆ. ಇಂತಹ ಪುಣ್ಯ ಕಾರ್ಯಕ್ರಮಕ್ಕೆ ತಮ್ಮ ಅಮೂಲ್ಯ ಸಮಯವನ್ನು ನೀಡಿದ ಎಲ್ಲರಿಗೂ ಧನ್ಯವಾದಗಳು
ನವಗ್ರಹ ತೀರ್ಥದ ಶ್ರೀಗಳಿಗೆ ಶ್ರವಣ ಬೆಳಗೊಳದ ಚಾರು ಶ್ರೀಗಳಿಂದ ಅಭಿನಂದನಾ ಪತ್ರ, ಬನ್ನಿ ಪತ್ರದ ಒಕ್ಕಣೆಯಲ್ಲಿ ಏನಿದೆ ನೋಡೋಣ.
ನವಗ್ರಹ ತೀರ್ಥ ಕ್ಷೇತ್ರದ ಪರಮಪೂಜ್ಯ ಧರ್ಮ ರತ್ನಾಕರ ಸ್ವಸ್ತಿಶ್ರೀ ಧರ್ಮ ಸೇನಾ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಜಗ್ದುರು ಕರ್ಮ ಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಅಭಿನಂದನಾ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹೊಂಬುಜ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹಾಗೂ ಸೋಂಧಾ ಮಠದ ಸ್ವಸ್ತಿ ಶ್ರೀ ಭಟ್ಟಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರು ಉಪಸ್ಥಿತರಿದ್ದು ಅಭಿನಂದನಾ ಪತ್ರದ ಒಕ್ಕಣೆ ಈ ರೀತಿ ಇದೆ. ಪತ್ರದಲ್ಲಿ ಶ್ರೀಗಳವರಿಗೆ ವಿದ್ಯಾ ವಾತ್ಸಲ್ಯ ವಾರಿಧಿ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.
ಪ್ರತಿ ವರ್ಷದಂತೆ ರಾಜ್ಯದೆಲ್ಲೆಡೆ ಮನೆ ಮಾತಾದ ಜಿನ ಭಜನಾ ಸ್ಪರ್ಧೆ ಈಗಾ ಊರು ವಿಭಾಗಗಳಲ್ಲಿ ನಡೆದಿದ್ದು ಇದರ ಸುದ್ದಿ ವಿವಿರ ನಿಮ್ಮೊಂದಿಗೆ.
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಕಲ್ಪನೆಯ ಜಿನ ಭಜನಾ ಸ್ಪರ್ಧೆ 6ನೇ ಆವೃತ್ತಿ ಪ್ರತಿ ವಿಭಾಗ ಮಟ್ಟದಲು ಅಮೋಘವಾಗಿ ನಡೆದಿದ್ದು ಎಲ್ಲೇಡೆ ಜಿನ ಭಜನೆಯ ಗುಂಗು ಮತ್ತು ಭಕ್ತಿ ಮನೆ ಮಾಡಿದೆ. ಬೆಂಗಳೂರು ವಿಭಾಗ ಮಟ್ಟದಲ್ಲಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಹಾಗೂ ಶ್ರೀ ಡಿ ಸುರೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಉದ್ಘಾಟನೆಗೊಂಡು, ಮಂಗಳೂರು ವಿಭಾಗದಲ್ಲಿ ದಂಪತಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡು ಹಾವೇರಿ ಹಾಗೂ ಜಮಖಂಡಿ ವಿಭಾಗದಲ್ಲಿ ವಿಜೃಂಭಣೆಯಿಂದ ಜರುಗಿದೆ. ಧಾರವಾಡ ಶಿವಮೊಗ್ಗ ಹಾಗೂ ಮೈಸೂರು ವಿಭಾಗದ ಜಿನ ಭಜನೆಯೂ ಮುಂದಿನ ದಿನಗಳಲ್ಲಿ ನಡೆಯಲ್ಲಿದ್ದು ಜನವರಿಯಲ್ಲಿ ಸೆಮಿಫೈನಲ್ ಮತ್ತು ಫಿನಾಲೆ ವೈಭವದಿಂದ ಜರುಗಲಿದೆ.
ಶ್ರೀ ಕ್ಷೇತ್ರ ಹೊಳೆನರಸೀಪುರದಲ್ಲಿ ವಿಜೃಂಭಣೆಯಿಂದ ವಾರ್ಷಿಕ ಪೂಜಾ ಮಹೋತ್ಸವ ನಡೆಯಲಿದ್ದು, ಇಲ್ಲಿದೆ ಒಂದು ಸಂಕ್ಷಿಪ್ತ ಮಾಹಿತಿ.
ಸಧರ್ಮ ಬಂಧುಗಳೆ ದಿನಾಂಕ 27-11-2022ರ ಭಾನುವಾರದಂದು ಹಾಸನ ಜಿಲ್ಲೆಯ ಅತಿಶಯ ಕ್ಷೇತ್ರ ಹೊಳೆನರಸೀಪುರದಲ್ಲಿ ಇರುವ ಭಗವಾನ್ ಶ್ರೀ 1008 ನೇಮಿನಾಥ ದಿಗಂಬರ ಜೈನ ಬಸದಿಯ ವಾರ್ಷಿಕ ಪೂಜಾ ಕಾರ್ಯಕ್ರಮವು ನಿರ್ವಿಘ್ನವಾಗಿ ಸಂಪನ್ನಗೊಂಡಿತು. ಅಂದು ಬೆಳಿಗ್ಗೆ 11 ಗಂಟೆಗೆ ಶ್ರೀ 1008 ನೇಮಿನಾಥ ತೀರ್ಥಂಕರರಿಗೆ 108 ಕಳಶಾಭಿಷೇಕ ಸಹಿತ ಪಂಚಾಮೃತ ಅಭಿಷೇಕ ಹಾಗೂ ಸಪರಿವಾರ ಸಮೇತ ಬ್ರಹ್ಮ ಯಕ್ಷ ಮಹಾಮಾತೆ ಪದ್ಮಾವತಿ ದೇವಿ ಹಾಗೂ ಮಹಾಮಾತೆ ಖುಷ್ಮಾಂಡಿನಿ ದೇವಿ ಅವರಿಗೆ ಷೋಡಶೋಪಚಾರ ನೆರವೇರಿಸಲಾಗಿತು. ಅಭಿಷೇಕದ ನಂತರ ಸಭಾ ಕಾರ್ಯಕ್ರಮ ಜರುಗಿತು ಹೆಚ್ಚಿನ ಸಂಖ್ಯೆಯಲ್ಲಿ ಸಧರ್ಮ ಬಂಧುಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
ಮುಂಬರುವ ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಠದ ಪಂಚಕಲ್ಯಾಣ ಮಹೋತ್ಸವ ಹಾಗೂ ಜಿನ ಸಮ್ಮಿಲನದ ಪ್ರಕಟಣೆಯನ್ನೊಮ್ಮೆ ಆಲಿಸಿ.
ಅತಿಶಯ ಶ್ರೀ ಕ್ಷೇತ್ರ ಹೊಂಬುಜದಲ್ಲಿ 24 ತೀರ್ಥಂಕರರ ಕೂಟಗಳ ನಿರ್ಮಾಣ ಕಾರ್ಯಗಳು ಭರದಿಂದ ನಡೆಯುತ್ತಿದ್ದು ಈ ನಿಮ್ಮಿತ್ತ ದಿನಾಂಕ 27ನೇ ಜವನರಿ 2023ರ ಶುಕ್ರವಾರದ ವರೆಗೆ 24 ತೀರ್ಥಂಕರರ ಪಂಚ ಕಲ್ಯಾಣ ಪ್ರತಿಷ್ಠಾ ಪೂಜಾ ಮಹೋತ್ಸವ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಧರ್ಮ ಬಾಂಧವರು ತನು ಮನ ಧನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಣ್ಯ ಭಾಗಿಗಳಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಹಾಗೂ ದುಬೈ ಜೈನ್ ಮಿಲನ್ ಇವರ ಜಂಟಿ ಆಯೋಜನೆಯ ಜಿನ ಸಮ್ಮಿಲನ ದುಬೈ 2022 ವೈಶಿಷ್ಟ ಪೂರ್ಣವಾಗಿ ದುಬೈನಲ್ಲಿ ಡಿಸೆಂಬರ್ ತಿಂಗಳ 3 ಮತ್ತು 4ರಂದು ವೈಭವವಾಗಿ ನೆರವೇರಲಿದೆ. ಭಾರತದಿಂದ ಸುಮಾರು 250ರಿಂದ 300 ಜನ ಜಿನ ಸಮ್ಮಿಲನದಲ್ಲಿ ಭಾಗವಹಿಸಲಿದ್ದಾರೆ. ಜಿನ ಸಮ್ಮಿಲನ ಕಾರ್ಯಕ್ರಮ ಪೂರ್ಣ ಆಯೋಜನೆಯನ್ನು ವಹಿಸಿಕೊಂಡು ದುಬೈ ಜೈನ್ ಮಿಲನ್ ಬಹಳ ಉತ್ಸಹದಿಂದ ಸಂಪೂರ್ಣವಾಗಿ ಸಜ್ಜಾಗಿದೆ. ಬೇರೆ ಬೇರೆ ದೇಶದಿಂದ ಅನೇಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಇಡಿ ವಿಶ್ವದ ಜೈನ ಬಾಂಧವರು ಕಾತುರದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮವು ಕರ್ನಾಟಕದಲ್ಲಿ ಜೈನ ಧರ್ಮ ಫೆಸ್ ಬುಕ್ ಪೇಜ್ ನಲ್ಲಿ ನೇರ ಪ್ರಸಾರವಾಗಲಿದೆ.
ಶ್ರೀ ಕ್ಷೇತ್ರ ಗೊಮ್ಮಟಗಿರಿಯಲ್ಲಿ ನಡೆದ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಒಂದು ಸಣ್ಣ ಜಲಕ್ ನಿಮ್ಮ ಮುಂದೆ, ಇದರ ಸಂಪೂರ್ಣ ವೀಡಿಯೋ ಚಿತ್ರವನ್ನು ಇನ್ನೂ ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ.
ಇಲ್ಲಿಯ ವರೆಗೆ ವಾರದ ಜೈನ ಸುದ್ದಿಗಳನ್ನು ವೀಕ್ಷಿಸಿದ ತಮ್ಮೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತ, ಹೀಗೆ ಪ್ರತಿವಾರವು ವೀಕ್ಷಿಸುತ್ತಿರಿ ವಾರದ ಜೈನ ಸುದ್ದಿಗಳು ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ ಮಾತ್ರ.
ವಂದನೆಗಳೊಂದಿಗೆ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್














