-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, “ಧರ್ಮೋ ರಕ್ಷತಿ ರಕ್ಷಿತಃ ಎನ್ನುವ” ಹಾಗೆ ನಾವು ಧರ್ಮವನ್ನು ಎಷ್ಟು ರಕ್ಷಿಸುತ್ತೇವೆಯೋ ಅಷ್ಟು ಧರ್ಮ ನಮ್ಮನ್ನು ರಕ್ಷಿಸುತ್ತದೆ. ಇಂತಹ ಧರ್ಮ ರಕ್ಷಣೆ ಹಾಗೂ ಬೆಳವಣಿಗೆಯ ಬೆಳಗನ್ನು ಗಡಿನಾಡಿನ ಆಚೆ ಬೆಳಗಲು ಸುಹಾಸ್ತಿ ಯುವ ಜೈನ್ ಮಿಲನ್ ರವರು ಜಿನ ಸಮ್ಮಿಲನ ಕಾರ್ಯಕ್ರಮವನ್ನು ದುಬೈನಲ್ಲಿ ಡಿಸೆಂಬರ್ 03 ಮತ್ತು 04 ರಂದು ನಡೆಸಿಕೊಡುತ್ತಿದ್ದಾರೆ.
ತಾಲ್ಲೂಕು ಜಿಲ್ಲೆ ರಾಜ್ಯ ಮಟ್ಟದ ಕಾರ್ಯಕ್ರಮಗಳ ಸಂಘಟಿಸಿ ಯಶಸ್ವಿಗೊಳಿಸಲು ಕಷ್ಟವೆನಿಸುವಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಕಾರ್ಯಕ್ರಮವನ್ನು ಸಂಘಟಿಸು ಸುಲಭ ಸಾಧ್ಯವಲ್ಲಿ, ಇಂತಹ ಒಂದು ಬೃಹತ್ ಯೋಜನೆಯನ್ನು ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಮತ್ತು ಜೈನ್ ಮಿಲನ್ ದುಬೈ ಇವರ ಸಹಭಾಗಿತ್ವದಲ್ಲಿ ನೆರವೇರಲಿದೆ ಪ್ರಪ್ರಥಮವಾಗಿ ವಿದೇಶದಲ್ಲಿ ನಡೆಯುತ್ತಿರುವ ಜೈನ ಸಮುದಾಯದ ಹೆಮ್ಮೆಯ ಕಾರ್ಯಕ್ರಮದ ರೂಪುರೇಶೆ ಹೇಗಿರಬಹುದು, ತಿಳಿಯುವ ಕಾತರಿಕೆಯಂತು ಎಲ್ಲರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ಕಾರ್ಯಕ್ರಮದ ಒಂದು ಸಣ್ಣ ಜಲಕ್ ನೋಡೊಣ್ಣ ಬನ್ನಿ.
03-12-2022 ರ ಶನಿವಾರ ಸಂಜೆ ಸ್ವಸ್ತಿಶ್ರೀ ಪರಮಪೂಜ್ಯ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಶ್ರೀಕ್ಷೇತ್ರ ನರಸಿಂಹರಾಜಪುರ ಇವರಿಂದ ಆಶೀರ್ವಚನ. ಉದ್ಘಾಟನೆ ಸುರೇಂದ್ರ ಕುಮಾರ್ ಧರ್ಮಸ್ಥಳ, ಅಧ್ಯಕ್ಷತೆ ನಾಡೋಜ ಹಂಪನ ನಾಗರಾಜಯ್ಯ, ಮುಖ್ಯ ಅತಿಥಿಗಳು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್, ಪುಷ್ಪರಾಜ್ ಜೈನ್, ಪುಟ್ಟಸ್ವಾಮಿ ಜೈನ್, ಸಂದೇಶ್ ಜೈನ್ ಅಂಗಡಿಬೆಟ್ಟು, ಪ್ರಸನ್ನ ಕುಮಾರ್ ಮೈಸೂರು, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಇವರುಗಳು. ಪುಸ್ತಕ ಬಿಡುಗಡೆ ಮಾಡಲಿರುವವರು, ಜಯಲಕ್ಷ್ಮಿ ಅಭಯ ಕುಮಾರ್, ಡಾ|| ಪದ್ಮ ಪ್ರಸಾದ್, ನೇರಂಕಿ ಪಾರ್ಶ್ವನಾಥ್ ವೆಬ್ ಸೈಟ್ ಬಿಡುಗಡೆ. ದುಬೈ ಜೈನ್ ಮಿಲನ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
04-12-2022 ರ ಭಾನುವಾರ ಬೆಳಿಗ್ಗೆ 8:30ರಿಂದ ಡಾ|| ಸ್ನೇಹ ಶ್ರೀ ನಿರ್ಮಲ್ ಕುಮಾರ್ ರವರಿಂದ ಭಜನೆ, ನಿವಾಗ್ತೀರಾ ಸಮ್ಯಗ್ ಜ್ಞಾನಿ ಕಾರ್ಯಕ್ರಮ, ಸಾಂಗ್, ಗೇಮ್, ಸಂವಾದ, ಅವಾರ್ಡ್ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಓತ್ತುಕೊಡು, ಬೇರೆ ಬೇರೆ ನಾಡುಗಳ ಸಂಸ್ಕೃತಿ ಆಚಾರ ವಿಚಾರಗಳು ದುಬೈ ಜಿನ ಸಮ್ಮಿಲನದಲ್ಲಿ ವೇಳೈಸುತ್ತಿದೆ, ಡಿಸೆಂಬರ್ 3,4 – 2022ರಂದು ನಡೆಯಲಿರುವ ಈ ಸಂಪೂರ್ಣ ಕಾರ್ಯಕ್ರಮದ ನೇರ ಪ್ರಸಾರವನ್ನು ಕರ್ನಾಟಕ ಜೈನ ಧರ್ಮ ಫೇಸ್ ಬುಕ್ ಪುಟದಲ್ಲಿ ವೀಕ್ಷಿಸಬಹುದು. ಇಂತಹ ಒಂದು ಅಭೂತ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಾಗೂ ಸಹಕರಿಸುತ್ತಿರುವ ಕಾರ್ಯೋನ್ಮುಖರಾಗಿರುವ ಎಲ್ಲರಿಗೂ ಹೃದಯಾಂತರಾಳದ ಶುಭಾಷಯಗಳನ್ನು ತಿಳಿಸುವುದರೊಂದಿಗೆ ಈ ಕಾರ್ಯಕ್ರಮವನ್ನಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಯಶಸ್ವಿಗೊಳಿಸಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














