/ ಜ್ವಾಲಾಮಾಲಾನ್ಯೂಸ್ / 2022

ಜೈ ಜಿನೇಂದ್ರ ವೀಕ್ಷಕರೆ, ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂದು ತಿಳಿದಿದ್ದೇವೆ, ಅದಕ್ಕೊಂದು ಉದಾಹರಣೆ ಎಂಬಂತೆ, 70 ನೇ ವಯಸ್ಸಿನಲ್ಲಿ ತಮ್ಮನ್ನು ತಾವು ಚಟುವಟಿಕೆಯಿಂದ ಇಟ್ಟುಕೊಂಡು ಯುವಕರಿಗೆ ಸ್ಪೂರ್ತಿಯಾಗುತ್ತಿರುವ ಒಬ್ಬ ವ್ಯಕ್ತಿಯೊಬ್ಬರ ಬಗ್ಗೆ ತಿಳಿದುಕೊಳ್ಳೊಣ.

ವಟ್ಸಪ್, ಪೆಸ್ಬುಕ್, ರೀಲ್ಸ್, ಹೀಗೆ ಸಾಮಾಜಿಕ ಜಾಲತಾಣಗಳ ನಿಲುವಿಗೆ ಸಿಕ್ಕು ಹೊದ್ದಾಡುತಿರುವ ಇಂದಿನ ಯುವಪೀಳಿಗೆ ಇವರನ್ನೊಮ್ಮೆ ನೋಡಿದರೆ ಜೀವನದಲ್ಲಿ ಹೊಸ ಉತ್ಸಾಹವನ್ನು ಪಡೆದುಕೊಳ್ಳುಬಹುದು.

ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಒಂದು ಗೌರವಾನ್ವಿತ ಕುಟುಂಬದಲ್ಲಿ ಜನಿಸಿದವರು ಪದ್ಮಸೂರಿಯವರು, ತಂದೆ ಧನ್ಯಕುಮಾರ್‌, ತಾಯಿ ಪ್ರಮೀಳ ಕುಮಾರಿ, ದಂಪತಿಗಳಿಗಿದ್ದ 6 ಜನ ಮಕ್ಕಳಲ್ಲಿ 4 ನೇ ಯವರು ಇವರ ಪ್ರೌಢಶಾಲಾ ಶಿಕ್ಷಣ ಕುಣಿಗಲ್‌ ತಾಲ್ಲೂಕ್‌ ನ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ,ನಂತರ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪಿ.ಯು.ಸಿ. ಓದಿದ ಇವರು ಓದಿನ ದಿನಗಳಲ್ಲಿ ರಾಜ್ಯಮಟ್ಟದವರೆಗಿನ ಕ್ರೀಡ ಚಟುವಟಿಕೆಯಲ್ಲಿ ಭಾಗವಹಿಸಿ, ಪ್ರಶಸ್ತಗಳನ್ನು ಗೆಲ್ಲುತಿದ್ದರು, ನಂತರ ಇವರ ಓದು ಅರ್ದಕ್ಕೆ ನಿಂತು 1972 ರಲ್ಲಿ  ಶ್ರೀ ಅರ್.ಜೆ.ಶ್ರೀಪ, ಹಾಗು ಶ್ರೀಮತಿ ಸುಮಂಗಲಮ್ಮ ಇವರ ಹಿರಿಯ ಪುತ್ರ ಬ್ರ್ಮಹಸೂರಿಯವರೊಂದಿಗೆ ಇವರ ವಿವಾಹವಾಯಿತು, ನಂತರ ತಮ್ಮ ಮಗ ಶೀತಲ್‌ ಪ್ರಸಾದ್‌ ರವರ ಪಾಲನೆ,ಪೋಷಣೆಯಲ್ಲಿ ಕೆಲವು ದಿನ ಕಳೆದು 1983 ರಲ್ಲಿ ಬ್ಯಾಂಕ್‌ ಪರೀಕ್ಷೆ ಬರೆದು ಬೆಂಗಳೂರು ಜಿಲ್ಲೆಯ ಕೋಪರೇಟ್‌ ಬ್ಯಾಂಕ್‌ ನಲ್ಲಿ ಕ್ಲರ್ಕ ಆಗಿ ಅವರ ವೃತ್ತಿ ಜೀವನ ಪ್ರಾರಂಭವಾಗುತ್ತದೆ, 30 ವರ್ಷಗಳ ನಂತರ ನಿವೃತ್ತಿ ಹೊಂದಿರುತ್ತಾರೆ, ಪತಿಯೊಡನೆ ಹೊರದೇಶಗಳಾದ ಆಮೇರಿಕ, ಲಂಡನ್‌, ದುಬೈ,ಸ್ವೀಡನ್‌,ಪ್ರವಾಸ ಮಾಡಿದರು, ಅಲ್ಲದೆ ತೀರ್ಥಕ್ಷೇತ್ರ ದರ್ಶನ ಕೂಡ ಮಾಡಿದ್ದಾರೆ, ಜೈನ ತೀರ್ಥ ಕ್ಷೇತ್ರಗಳಿಗೆ ಬೇಟಿ ನೀಡಿದ್ದಾರೆ. ನಿವೃತ್ತ ಜೀವನವನ್ನು ಸದಾ ಚಟುವಟಿಕೆಯೊಂದಿಗೆ ಕಳೆಯುತ್ತ, ಸಾರ್ಥಕ  ಬದುಕನ್ನು ಕಳೆಯಲು ಪಣತೊಟ್ಟಂತೆ ಪದ್ಮಸೂರಿಯವರು ತಮ್ಮ 58 ನೇ ವಯಸ್ಸಿನಿಂದ ಕಾರು,ಹಾಗು ದ್ವಿ ಚಕ್ರ ವಾಹನವನ್ನು ಕಲಿಯುತ್ತಾರೆ, ಆ ಸಮಯದಲ್ಲಿ ಸಾಮನ್ಯವಾಗಿ ಕೆಲವರು ಹೆದರಿ ಓಡಿಸುವುದನ್ನು ನಿಲ್ಲಿಸುತ್ತಾರೆ, ಆದರೆ ಇವರು ಅ ವಯ್ಯಸ್ಸಿನಲ್ಲಿ ಕಲಿಯಲು ಆರಂಭಿಸುತ್ತಾರೆ, ನೋಡಿ ಇದೆಲ್ಲ ಕಾಂನ್ಪಿಡೆಂಟ್‌ ಅಂದ್ರೆ ವೀಣೆ ನುಡಿಸುವುದನ್ನು ಕಲಿಯುತ್ತಾರೆ ಆದರೆ ಒಂದು ಅಪಘಾತದಲ್ಲಿ ಎಡಗೈಗೆ ಪೆಟ್ಟು ಬಿದ್ದು ವೀಣೆ ಈಡಿಯಲು ಆಗದು ಆದರೂ ನೀರಶಾರಾಗದೆ ಕೀ ಬೊರ್ಡ್‌ ಕಲಿಯುತ್ತಾರೆ , ಯೋಗಭ್ಯಾಸ ಕಲಿತು ತರಬೇತಿಯನ್ನು ನೀಡಲು ಪ್ರಾರಂಬಿಸುತ್ತಾರೆ. ಆದರೆ 2020 ರಲ್ಲಿ ಅವರ ಪತಿಯವರನ್ನು ಆನಾರೋಗ್ಯ ಕಾರಣದಿಂದ ಕಳೆದುಕೊಂಡು ಬಹಳ ಕುಗ್ಗಿ ಹೋಗುತ್ತಾರೆ, ಅಂತಹ ಸಮಯಲ್ಲಿ ಆಮೇರಿಕದಲ್ಲಿ ಉತ್ತಮ ಹುದ್ದೆಯಲ್ಲಿ ಇರುವ ಅವರ ಮಗ ಉರಿದುಂಬಿಸುತ್ತಾರೆ,ಮತ್ತು ಮನೆಯಿಂದ ಹೊರಗೆ ಹೋಗಿ ಎನಾದರು  ಸಾಧಿಸಲು ಹೇಳಿದಾಗ ಅವರು ಆರಿಸಿಕೊಂಡಿದ್ದು ಅವರ ಬಾಲ್ಯದ ಕನಸಾದ ಕ್ರೀಡ ಜಗತ್ತನ್ನು.  2020 ರಲ್ಲಿ ಜಗ್ವಾರ್‌ ಎಂಬ ರನ್ನಿಂಗ್‌ ಆಕೆಡಮಿಗೆ ಸೇರಿಕೊಳ್ಳುತ್ತಾರೆ.ಇಲ್ಲಿಯವರೆಗೂ ತಪ್ಪದೆ ಅಭ್ಯಾಸ ಮಾಡುತ್ತಿದ್ದಾರೆ, ಹಾಗು ಅನೇಕ ರಾಷ್ಟ್ರೀಯ ಇವೆಂಟ್‌ ಗಳಲ್ಲಿ ಭಾಗವಹಿಸಿ 30ಕ್ಕು ಹೆಚ್ಚು ಪ್ರಥಮ ಹಾಗು ದ್ವಿತೀಯ, ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಡಿದ್ದಾರೆ.ಅಷ್ಟೇ ಅಲ್ಲದೆ ಸಂಗೀತದಲ್ಲಿ ಆಸಕ್ತಿ ಇದ್ದು ಜೈ ಮಿಲನ್ ವತಿಯಿಂದ ನೆಡಸಲಾಗುವ ಜೀನ ಭಜನ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬರುತ್ತಿದ್ದಾರೆ.ಇಂತಹ ಸ್ಪೂರ್ತಿ ಚಿಲುಮೆ ನಮ್ಮ ಮುಂದಿದ್ದಾರೆ ಬನ್ನಿ ಅವರ ಬಗ್ಗೆ ತಿಳಿಯೋಣ.

 

ಸಂರ್ದಶಕ; ಉತ್ತಮ ಕ್ರೀಡಪಟು ಎಂದು ಹೆಸರುವಾಸಿಯಾದ ನಿಮ್ಮ ದೈಂದಿನ ಬದುಕು ಹೇಗೆ ಶುರುವಾಗುತ್ತದೆ?

 

ಪದ್ಮಸೂರಿ; ನಾನು ಚಿಕ್ಕವಯಸ್ಸಿನಿಂದಲೂ ಬೆಳಗ್ಗೆ ಬೇಗ ಏಳುತ್ತೇನೆ, ನಿತ್ಯಕರ್ಮಗಳನ್ನು ಮುಗಿಸಿ, ವಾಕ್‌ ಹೋಗತ್ತೇನೆ,ನಂತರ ಯೋಗಭ್ಯಾಸ ಶುರುಮಾಡುತ್ತಾ, ದಿನ ನಿತ್ಯ ಕೆಲಸ ಶುರವಾಗಿ ಆಪೀಸ್‌ಗೆ ಹೋಗಿ ಬರುತ್ತೇನೆ ಹಾಗು ಇದು ನನ್ನ ನಿವೃತ್ತಿಯ ನಂತವೂ  ಮುಂದುವರೆಯುತ್ತಿದೆ.

 

ಸಂರ್ದಶಕ; ನಿಮ್ಮ ಹವ್ಯಾಸಗಳ ಬಗ್ಗೆ ಆಸಕ್ತಿ ಹೇಗೆ ಶುರುವಾಯಿತು?

ಪದ್ಮಸೂರಿ; ಈ ಹವ್ಯಾಸಗಳು ನನಗೆ ಚಿಕ್ಕ ವಯಸ್ಸಿನಿಂದಲೂ ರೂಢಿಯಲ್ಲಿದೆ, ನಂತರ ನಾನು ಜಾಗ್ವಾರ್‌ ಆಕಡಮಿಗೆ ಸೇರಿ ನನ್ನ ಆಸಕ್ತಿಯನ್ನು ಮುಂದುವರೆಸಿದೆ,ಹಾಗು ಸಂಗೀತದಲ್ಲಿ ಆಸಕ್ತಿ ಮೂಡಿ ವೀಣೆಯನ್ನು ಕಲಿಯಲು ಶುರುಮಾಡಿದೆ, ನಂತರ ಕೀ ಬೋರ್ಡ್‌ ಅನ್ನು ಯುಟುಬ್‌ ನೋಡಿ ಕಲಿತ್ತಿದ್ದೇನೆ, ನಂತರ ನಿರ್ಸಗದೊಮದಿಗೆ ಕಾಲ ಕಳೆಯುತ್ತೇನೆ, ಹಾಗೆ ಮುಂದುವರೆದು ಜೈ ಜೀನೇಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೊದಲ ಬಾರಿ ಸಮಧಾನಕರ ಪ್ರಶಸ್ತಿಯನ್ನು ನಾವು ನಮ್ಮ ತಂಡ ಪಡದೆವು.

ಸಂರ್ದಶಕ; ನಿಮ್ಮ ದೈನಂದಿನ ಚಟುವಟಿಕೆಗೆ ಸ್ಪೂರ್ತಿ ಯಾರು?

ಪದ್ಮಸೂರಿ; ಹಾಗೇನು ಇಲ್ಲ ನಾನು ಮೊದಲಿನಿಂದಲೂ ನನ್ನ ಹವ್ಯಾಸಗಳು ಇರುವುದೇ ಹೀಗೆ, ಹಾಗೆ ನನ್ನ ಅಕ್ಕನ ಮಗ ರನ್ನಿಂಗ್‌ ಅಲ್ಲಿ ಆಸಕ್ತಿ ಇದ್ದು ಸಾಕಷ್ಟು ಬಾರಿ ಸ್ಪರ್ದಿಸಿದ್ದನು, ಅವನನ್ನು ನೋಡಿ ನಾನು ಹೀಗೆ ಸಾಧಿಸಬೇಕು ಎಂಬ ಆಸಕ್ತಿ ಮೂಡಿತು.ಇದಕ್ಕೆ ನನಗೆ ನನ್ನ ಮಗನು ಸಾತ್‌ ನೀಡಿದನು, ಅದು ಹೀಗೆ ಮುಂದುವರೆಯಿತ್ತಾ ಬಂದಿದೆ.

ಸಂರ್ದಶಕ; ನಿಮ್ಮ ಸಾಧನೆಗೆ ನಿಮ್ಮ ಸಂಬಧಿಕರು,ಸ್ನೇಹಿತರು, ಹಾಗು ನಿಮ್ಮ ಮಗ ಅವರು ಹೇಗೆ ಜೋತೆಯಾದರು

ಪದ್ಮಸೂರಿ; ನಾನು ಮೊದಲು ಭಾಗವಹಿಸಿದ್ದು ದೆಹಲಿಯಲ್ಲಿ ನಂತರ ಅಲ್ಲಿ ಮೊದಲ ಬಹುಮಾನ ಪಡೆದ ಸಂತಸವನ್ನು ಎಲ್ಲರೊಂದಿಗೆ ಹಂಚಿಕೊಂಡೆ, ನಂತರ ಪ್ರತಿಯೊಬ್ಬರು ಸಂತಸದಿಂದ ಪ್ರೊತ್ಸಾಹಿಸಿದರು. ಇದು ಹೀಗೆ ಮುಂದುವರೆದು ನನಗೆ ಸುಮಾರು 30 ಮೆಡಲ್‌ ಬಂದಿದೆ ಇದರ ಬಗ್ಗೆ ನನಗೆ ಸಂತೋಷವಿದೆ.

 

ಸಂರ್ದಶಕ; ಇಂದಿನ ಯುವ ಪೀಳಿಗೆಗೆ ನಿಮ್ಮ ಸಂದೇಶವೇನು?

ಪದ್ಮಸೂರಿ; ದಿನ ನಿತ್ಯ ಪ್ರತಿಯೊಬ್ಬರೂ ದೇಹವನ್ನು ದಂಡಿಸಿ ವ್ಯಾಯಮ ಮಾಡಬೇಕು,ಯೋಗಸನ ಮಾಡಿ, ಏಕಗ್ರತೆ ವಹಿಸಬೇಕು, ನಿತ್ಯ ಪರಿಶುದ್ಧ ಗಾಳಿಯನ್ನು ಬೆಳಗ್ಗೆ ವಾಕ್‌ ಮಾಡುವ ಮೂಲಕ ಹಾಗು ರನ್‌ ಮಾಡುವ ಮೂಲಕ ಪಡೆದುಕೊಳ್ಳಬೇಕು, ಯೋಗ, ಪ್ರಾಣಯಾಮ, ಧ್ಯಾನ,ವ್ಯಾಯಮದಿಂದ ಪ್ರತಿಯೊಂದು ಸಾಧ್ಯ.