/ ಜ್ವಾಲಾಮಾಲಾನ್ಯೂಸ್ / 2022

ಎಲ್ಲರಿಗೂ ಜೈ ಜಿನೇಂದ್ರ, ಇಂದು ನಾವು ಈ ಒಂದು ಕ್ಷೇತ್ರವನ್ನು ದರ್ಶನ ಮಾಡುತ್ತಿದ್ದೀರಿ, ಈ ಒಂದು ಕ್ಷೇತ್ರದಲ್ಲಿ ವಿಶೇಷವಾಗಿ ಜೈನರಗುತ್ತಿ ಎಂದು ಪ್ರಸಿದ್ದವಾಗಿದೆ, ಈ ಒಂದು ಕ್ಷೇತ್ರದಲ್ಲಿ ಪ್ರಾಚೀನ ವಿಶೇಷತೆಗಳನ್ನು ನಾವು ಕಾಣಬಹುದು.

2017ನೇ ಇಸವಿಯಲ್ಲಿ ಪರಮ ಪೂಜ್ಯ 108 ವೀರಸಾಗರ ಮಹಾರಾಜರು ಅಡಗೂರು ಕ್ಷೇತ್ರಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ವಿಹಾರ ಮಾಡುವಂತಹ ಸಮಯದಲ್ಲಿ ಈ ಕ್ಷೇತ್ರ ದರ್ಶನವನ್ನು ಮಾಡುತ್ತಾರೆ. ಈ ಕ್ಷೇತ್ರ ದರ್ಶನವನ್ನು ಮಾಡುವಂತಹ ಸಮಯದಲ್ಲಿ ಈ ಜಾಗದಲ್ಲಿ ಯಾವುದೇ ರೀತಿಯಾದ ಮಂದಿರ ಉಳಿಯುವಂತಹ ವ್ಯವಸ್ಥೆ ಇರಲಿಲ್ಲ, ಖಾಲಿ ಮಂದಿರದಲ್ಲಿ ನೋಡುವಂತಹ ಪಾರ್ಶ್ವನಾಥ ಜಿನ ಬಿಂಬವನ್ನು ನೆಲದ ಮೇಲೆ ಮಲಗಿಸಿದ್ದರು. ಈ ಮೂರ್ತಿ ಪಕ್ಕದ ಹಳ್ಳಿಯಲ್ಲಿ  ಸಿಕ್ಕಿದಂತಹ ಮೂರ್ತಿಯನ್ನು ತೆಗೆದುಕೊಂಡು ಬಂದು ಜೈನರಗುತ್ತಿಯಲ್ಲಿ ಪ್ರತಿಷ್ಠೆಯನ್ನು ಮಾಡಬೇಕು ಎಂಬ ಸಂಕಲ್ಪ ಇತ್ತು. ಎಷ್ಟು ಪ್ರಯತ್ನ ಮಾಡಿದರು ಆ ಒಂದು ಕಾರ್ಯ ಪೂರ್ಣವಾಗಿರಲಿಲ್ಲ, ಈ ಒಂದು ಸಮಯದಲ್ಲಿ ಪೂಜ್ಯ ವೀರಸಾಗರ ಮಹಾರಾಜರು 2017 ನೇ ಇಸವಿಯಲ್ಲಿ ಅವರು ಬಂದಂತ ಸಮಯದಲ್ಲಿ ಆ ಒಂದು ಮೂರ್ತಿಯ ದರ್ಶನವನ್ನು ಮಾಡುತ್ತಾರೆ. ಸಾವಿರ ವರ್ಷದ ಇತಿಹಾಸ ಇರುವಂತಹ ಮೂರ್ತಿಯನ್ನು ನೋಡುತ್ತಿದ ಹಾಗೆ ಅವರಿಗೆ ಒಂದು ಭಾವನೆ ಉಂಟಾಗುತ್ತದೆ ಆಗ ಪೂಜ್ಯ ಮಹಾರಾಜರು ಜಪವನ್ನು ಮಾಡಲು ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ಅವರಿಗೆ ಬಹಳಷ್ಟು ದರ್ಶನಗಳು ಹಾಗುತ್ತದೆ. ಅಂದರೆ ಮಂದಿರ ಇರುವ ಹಾಗೆ, ಅನೇಕ ಜಿನ ಬಿಂಬಗಳು ಇದೆ, ಜಿನ ಪ್ರತಿಮೆಗಳ ದರ್ಶನ ಆಗುತ್ತಿರುವ ಹಾಗೆ ಸಾವಿರಾರು ಜನ ದರ್ಶನ ಮಾಡುತ್ತಿರುವ ದೃಶ್ಯ ಕಾಣಿಸಿತು.

ಪೂಜ್ಯ ಆಚಾರ್ಯ ಚಂದ್ರಪ್ರಭುಸಾಗರರ ಆಶೀರ್ವಾದ ಮಾರ್ಗದರ್ಶನ ಮತ್ತು ಎಲ್ಲಾ ಆಚಾರ್ಯ ಮುನಿಮಹಾರಾಜರ ದರ್ಶನ ಮತ್ತು ಅವರ ಆಶೀರ್ವಾದ ಹಾಗೂ ಅಪ್ಪಣೆಯನ್ನು ಪಡೆದುಕೊಂಡು ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡ ಬೇಕು ಎಂದು ಸಂಕಲ್ಪವನ್ನು ಮಾಡುತ್ತಾರೆ.

ಇಲ್ಲಿಂದ ವೀರಸಾಗರ ಮಹಾರಾಜರು ಮಹಾರಾಷ್ಟ್ರದಲ್ಲಿ ಒಂದು ಚಾತುರ್ಮಾಸವನ್ನು ಮಾಡಿ ಅಲ್ಲಿಂದ ಮಹಾರಾಜರು ಸಮೇದ ಶಿಖರ್ಜಿಗೆ ಯಾತ್ರೆಯನ್ನು ಕೈಗೊಳುತ್ತಾರೆ. ಸಮೇದ ಶಿಖರ್ಜಿ ಯಾತ್ರೆಯನ್ನು ಮುಗಿಸಿ  ಅಲ್ಲಿಂದ ಆ ಕ್ಷೇತ್ರದಲ್ಲಿ ಒಂದು ದೃಢವಾದಂತಹ ಒಂದು ಸಂಕಲ್ಪವನ್ನು ಮಾಡಿ ಈ ಒಂದು ಜೈನರ ಗುತ್ತಿಯಲ್ಲಿ ಒಂದು ಮಂದಿರವನ್ನು ನಿರ್ಮಾಣ ಮಾಡಬೇಕು ಎಂಬ ಮನೋಭಾವನೆಯನ್ನು ಮಾಡುತ್ತಾರೆ.

ಸಮೇದ ಶಿಖರದಿಂದ ಜೈನರ ಗುತ್ತಿಗೆ ಬಂದು ಮೊದಲಿಗೆ ಒಂದು ಪಂಚಕಲ್ಯಾಣ ಪ್ರತಿಷ್ಠ ಮಹೋತ್ಸವವನ್ನು ಮಾಡುತ್ತಾರೆ. ಪಂಚಕಲ್ಯಾಣ ಪ್ರತಿಷ್ಠ ಮಹೋತ್ಸವದಲ್ಲಿ 24 ಜಿನ ಬಿಂಬಗಳನ್ನು ಪ್ರತಿಷ್ಠೆಯನ್ನು ಮಾಡಿ  ಆ ಮಂದಿರದಲ್ಲಿ ವಿರಾಜಮಾನ ಮಾಡುತ್ತಾರೆ. 

(ಕಾಡಿಗೆ ಹೋದಾಗ ಹಳ್ಳವನ್ನು ದಾಟಿದಾಗ ಅವರಿಗೆ ನಡುಗಿದ ಹಾಗೆ ಆಗುತ್ತದೆ ಆ ಹಳ್ಳದಲ್ಲಿರುವ ಗುಂಡಿ ಒಳಗಡೆ ಮುಸುರಥನಾಥ ತೀರ್ಥಂಕರರ ಬಿಂಬದ ಮೇಲ್ಭಾಗ ಕಾಣಿಸುತ್ತದೆ. ಅದನ್ನು ತೆಗೆದು ನೋಡಿದಾಗ ಮೂರ್ತಿ ಇರುವುದು ಗೊತ್ತಾಗುತ್ತದೆ. ನಂತರ ಅವರು ಇಲ್ಲಿ ಕುಳಿತು ಜಪಮಾಡುತ್ತಾರೆ ಆಗ ಅಲ್ಲಿಗೆ ಒಂದು ಹಾವು ಬರುತ್ತದೆ. ಅ ಹಾವನ್ನು ನೋಡಿ ನಮೋಕಾರ ಮಂತ್ರವನ್ನು ಹೇಳುತ್ತಾರೆ. ನಂತರ ಅ ಹಾವನ್ನು ಹಿಂಬಾಲಿಸಿಕೊಂಡು ಹೋದಾಗ ಮೂರ್ತಿಗಳು ಇರುವಂತಹ ಜಾಗದಲ್ಲಿ ನಡುಗಿದ ಹಾಗೆ ಆಗುತ್ತದೆ. ಆ ಜಾಗವನ್ನು ಅವರು ಗುರುತು ಮಾಡುತ್ತಾರೆ. ನಂತರ ಬಂದಂತಹ ಶ್ರಾವಕರಿಗೆ ಈ ರೀತಿ ಆಗಿದೆ ಎಂದು ಹೇಳುತ್ತಾರೆ. ಜಿನ ರಾತ್ರಿ ದಿನ ಬೆಳಿಗ್ಗೆ 3 ಗಂಟೆಯಲ್ಲಿ  ಅವರು ಗುರುತು ಮಾಡಿದಂತಹ ಜಾಗದಲ್ಲಿ ತೆಗೆದು ನೋಡಿದಾಗ ಬಿಂಬಗಳು ದೊರೆಯುತ್ತವೆ. ಆದಿನಾಥ ತೀರ್ತಂಕರರು, ಪಾರ್ಶ್ವನಾಥ ತೀರ್ಥಂಕರರು ಮುನಿಸೂರನಾಥ ತೀರ್ಥಂಕರರು, ಮಹಾವೀರಸ್ವಾಮಿ, ಈ ತರಹದ ಮೂರ್ತಿಗಳು ದೊರೆತವು. ಜೊತೆಗೆ ಪದ್ಮಾವತಿ ದೇವಿ ಮೂರ್ತಿಯು ಕೂಡ ದೊರೆತವು. ಪಕ್ಕದಲ್ಲಿ ಇರುವ ಬೊವಿ ಜನಾಂಗದ ತೋಟದಲ್ಲಿ ಒಂದು ಮಾವಿನ ಮರ ಇದೆ ಮುಕುಟ ಸಪ್ತಮಿದಿನ ಅ ಮರವನ್ನು ತೆರವು ಮಾಡಿ ನೋಡಿದಾಗ ಪಾರ್ಶ್ವನಾಥ ಸ್ವಾಮಿ ವಿಗ್ರಹ ದೊರೆತಿದೆ.  ಈ ತೋಟದಲ್ಲಿ ಇನ್ನೂ ಹಲವಾರು ವಿಗ್ರಹಗಳು ಇರಬಹುದು ಎಂದು ಹೇಳಲಾಗಿದೆ.)

ಆದಿನಾಥ ಸ್ವಾಮಿ ಭೂಗರ್ಭದಲ್ಲಿ ಸಿಕ್ಕಂತಹ ಸಂದರ್ಭದಲ್ಲಿ ನಾಲ್ಕು ತುಂಡಾಗಿರುತ್ತದೆ, ಆ ಒಂದು ಮೂರ್ತಿಯನ್ನು ಪೂಜ್ಯ ಮಹಾರಾಜರ ಸಂಕಲ್ಪದಂತೆ ಸಕ್ಕರೆ ಮತ್ತು ತುಪ್ಪ ಮಿಶ್ರಿತವಾದಂತಹ ಸಕ್ಕರೆ ಪಾಕದಲ್ಲಿ ಬಿಂಬವನ್ನು ಒಂದು ಡಬ್ಬಿಯಲ್ಲಿ ಇಟ್ಟು 48 ದಿನಗಳ ಕಾಲ ನಮೋಕಾರ ಮಹಾಮಂತ್ರ ಹಾಗೂ ಭಕ್ತಾಂಬರ ಆರಾಧನೆ ಮಾಡಿದ ನಂತರ 48 ದಿನಗಳು ಕಳೆದ ಮೇಲೆ ಆ ಬಿಂಬ ಪೂರ್ಣವಾಗಿ ಕೂಡಿಕೊಂಡಿರುತ್ತದೆ.

ಈಗಾ ನಾವು ಕೇಳಿಕೊಳ್ಳುವುದೇನೆಂದರೆ ಬರುವಂತಹ ಭಕ್ತರಿಗೆ, ಬರುವಂತಹ ಮುನಿ ಮಹಾರಾಜರಿಗೆ ಆರಿಕ ಮತ್ತು ಶ್ರಾವಕ ಶ್ರಾವಕಿಯರಿಗೆ ಈ ಒಂದು ಕ್ಷೇತ್ರದಲ್ಲಿ ಬಂದು ಉಳಿಯಲು ಬಹಳ ಸುಂದರವಾದಂತಹ ವ್ಯವಸ್ತೆಯನ್ನು ಮಾಡಲಾಗಿದೆ, ತಾವು ಬಂದು ಒಮ್ಮೆ ಈ ಕ್ಷೇತ್ರವನ್ನ ದರ್ಶನ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ ಜೈ ಜಿನೇಂದ್ರ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

                                                  ಜ್ವಾಲಮಾಲ ಡಾಟ್ ನ್ಯೂಸ್