-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-
ಜೈ ಜಿನೇಂದ್ರ ವೀಕ್ಷಕರೆ, ಭಗವಾನ್ ಮಹಾವೀರ ಜಿನ ಮಂದಿರ ಹೆಚ್ ಎ ಎಲ್ ವಿಮಾನ ಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಾಂಪ್ರದಾಯಕವಾಗಿ ನಮ್ಮ ಜೈನ ಪುರಾಣಕ್ಕೆ ಸಂಬಂಧಪಟ್ಟ ಕಥೆಗಳನ್ನು ಗೊಂಬೆಗಳ ಮುಖಾಂತರ ಪ್ರದರ್ಶಿಸಲಾಗಿದೆ.
ದಿನಾಂಕ 26-09-2022ರಂದು ಶ್ರೀ ದಿಗಂಬರ ಮಹಾವೀರ ಸಂಘ ಹೆಚ್ ಎ ಎಲ್ ಬೆಂಗಳೂರು, ಇದರ ಅಧ್ಯಕ್ಷರಾದ ಶ್ರೀ ಕೆ ಎನ್ ವಿಜಯ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷರಾರ ಶ್ರೀಮತಿ ಎಲ್ ವೈಜಯಂತಿ ಜ್ವಾಲಕುಮಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವೈಶಿಷ್ಟ್ಯ ಪೂರ್ಣವಾಗಿ ಆಯೋಜಿಸಲಾಗಿತ್ತು.
ನವರಾತ್ರಿಯಂದು ಎಲ್ಲಾ 10 ದಿನಗಳಂದು ಸಂಜೆ 4 ಗಂಟೆ ಯಿಂದ 6 ಗಂಟೆಯವರೆಗೆ ಅಮ್ಮನವರಿಗೆ ವಿಶೇಷ ಉಯ್ಯಾಲೆ ಪೂಜೆ, ಅಷ್ಟಾವಧಾನ, ಷೋಡಶೋಪಚಾರ ಪೂಜೆ ಹಾಗೂ ಮಹಾಮಂಗಳಾರತಿ ಏರ್ಪಡಿಸಲಾಗಿದ್ದು ಎಲ್ಲಾ ಪೂಜಾ ವಿಧಿವಿಧಾನಗಳನ್ನು ಪ್ರತಿಷ್ಟಾಚಾರ್ಯ ಪವನ್ ಅವರು ನೆರೆವೇರಿಸಿ ಕೊಡುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿ ಧರ್ಮ ಲಾಭವನ್ನು ಪಡೆಯ ಬೇಕಾಗಿ ವಿನಂತಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














