ಬಸದಿ ಹೊಸಕೋಟೆ 18-09-2022/ ಜ್ವಾಲಾಮಾಲಾ ನ್ಯೂಸ್ / 2022

-: ಜೈ ಜಿನೇಂದ್ರ ಜ್ವಾಲಮಾಲ ಡಾಟ್ ನ್ಯೂಸ್ ಗೆ ಸ್ವಾಗತ :-

ಜೈ ಜಿನೇಂದ್ರ ವೀಕ್ಷಕರೆ, ನಿಮಗೆಲ್ಲಾ ತಿಳಿದಿರುವಂತೆ ಬಸದಿ ಹೊಸಕೊಟೆ ಕ್ಷೇತ್ರ ಸುಂದರ ಪ್ರಕೃತಿದತ್ತ ವಾತವರಣದಲ್ಲಿರುವಂತಹ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಕ್ಕೆ ಮುನ್ನುಡಿ ಎಂಬಂತೆ ಕರ್ನಾಟಕದಾದ್ಯಂತ ಜೈನ ಶ್ರಾವಕರು ಇಲ್ಲಿಗೆ ಆಗಮಿಸುತ್ತಿದ್ದಾರೆ. 

ಮುಂಜಾನೆಯ ನಸುಕಿನಲ್ಲಿ ಸಜ್ಜಾಗಿ ಹೊರಟು ಹಲುವು ರಾಜ್ಯಗಳು ಹಲವೆಡೆ ಇಂದ ಬಂದು ಸೇರಿದ್ದು ಸುಂದರ ವಾತವರಣದಲ್ಲಿ ಪ್ರಶಾಂತ ನಗುವಿನೊಂದಿಗೆ ಸ್ವಾಗತಿಸುವ ಭಗವಾನ್ ಬಾಹುಬಲಿ ಸ್ವಾಮಿ ನೆಲೆಸಿರುವ ಬಸದಿ ಹೊಸಕೊಟೆ ಕ್ಷೇತ್ರಕ್ಕೆ.

ಪರಮಪೂಜ ಯುಗಳ ಮುನಿ ಮಹಾರಾಜರ ಇಚ್ಛೆಯಂತೆ ಬೆಂಗಳೂರಿನ ತ್ಯಾಗಿ ಸೇವ ಸಮಿತಿಯಿಂದ ಆಯೋಜಿಸಲಾಗಿದ್ದು ಇಂದ್ರ ದ್ವಜ ಆರಾಧನೆಯಲ್ಲಿ ಭಾಗವಹಿಸಿದ ಪ್ರತಿಕರು ಹಾಗೂ ಅವರ ಅಪೇಕ್ಷೆಯಂತೆ ಹಲವಾರು ಕಡೆಯಿಂದ ನೂರಾರು ಜನ ಮನೋಗ್ಞ ಪರಿಸರದಲ್ಲಿ ವಿರಾಜಮಾನನಾಗಿರುವ ಕೆ ಆರ್ ಎಸ್ ಹಿನ್ನೀರಿನ ಪ್ರದೇಶದಲ್ಲಿರುವ ಭಗವಾನ್ ಬಾಹುಬಲಿ ಸ್ವಾಮಿ ದರ್ಶನ ಭಾಗ್ಯ ಪಡೆಯಲು ಸೇರಿದರು. ಅಷ್ಟೆ ಅಲ್ಲದೇ ಮುಂದಿನ ದಿನಗಳಲ್ಲಿ ಪವಿತ್ರ ಯಾತ್ರ ಸ್ಥಳವಾಗುವ ಶುಭಕಾರ್ಯಕ್ಕೆ ನಾಂದಿ ಎಂಬಂತೆ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕ ಪೂಜೆ ಮಾಡಿ ಸಂಭ್ರಮಿಸಿದರು. ಸ್ಥಳದಲ್ಲಿ ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ಸ್ವಾಮಿ ಟ್ರಸ್ಟ್ ಪದಾಧಿಕಾರಿಗಳು ತುಮಕೂರು ಹಾಗೂ ಬೆಂಗಳೂರಿನ ಸಮಾಜ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಆಯೋಜಿಸಿದರು. ಬೆಳ್ಳೂರು, ಮಂಡ್ಯ, ಸಂಕಿಘಟ್ಟ, ಮೈಸೂರು, ಬೆಂಗಳೂರು, ತುಮಕೂರು ಇಲ್ಲಿನ ಜೈನ ಬಾಂಧವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್