ಮೈಸೂರಿನಲ್ಲಿ ನಡೆದ ಶ್ರೀ ಜಿತೇಂದ್ರ ಕುಮಾರ್ ರವರ ಅಭಿನಂದನಾ ಕಾರ್ಯಕ್ರಮದಲ್ಲಿ ಅರಸು ಮನೆಯವರಿಂದ ಕೂಡ ಸನ್ಮಾನ ನಡೆದಿದ್ದು ಮಧುಸೂದನ್ ರವರು ನಡೆಸಿ ಕೊಟ್ಟರು. ಸನ್ಮಾನಿತರಾದ ಶ್ರೀ ಯುತ ಜಿತೇಂದ್ರ ಕುಮಾರ್ ರವರು ಮಾತನಾಡಿ,ತನ್ನ ಜನ್ಮಭೂಮಿ ಮೈಸೂರಿನಲ್ಲಿ ತಮಗೆ ಸನ್ಮಾನ ನಡೆಯುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ತನ್ನ ಹುಟ್ಟೂರಾದ ಮೈಸೂರಿನಲ್ಲಿ ನನಗೆ ಅಬಿನಂದಿಸಿರುವುದು ನನಗೆ ಬಹಳ ಹೆಮ್ಮೆಯ ವಿಷಯ ಈ ದಿನ ನನಗೆ ಜೀವನದಲ್ಲಿ ಎಂದೂ ಮರೆಯಲಾಗದ ದಿವಸ ಎಂದು ತುಂಬಾ ಭಾವುಕರಾಗಿ ಮಾತನಾಡಿದರು. ಹಾಗೂ ನನಗೆ ಕೊಟ್ಟಿರುವ ಈ ಸನ್ಮಾನವನ್ನು ನಾನು ಮೈಸೂರಿನಲ್ಲಿರುವ ನನ್ನ ಎಲ್ಲಾ ಕುಲಭಾಂದವರಿಗೆ ಸಮರ್ಪಣೆ ಮಾಡುತ್ತೇನೆ ಎಂದು ನುಡಿದರು.
ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಶ್ರೀ ಜಿತೇಂದ್ರ ಕುಮಾರ್ ಅಭಿನಂದನಾ ಸಮಿತಿವತಿಯಿಂದ ಸನ್ಮಾನಿಸಲಾಯಿತು. ಜಿತೇಂದ್ರ ಕುಮಾರ್ ರವರನ್ನು ಸನ್ಮಾನಿಸಲು ಅವರ ಅಭಿಮಾನಿಗಳ ಮಹಾ ಪೂರವೇ ಹರಿದು ಬಂದಿತ್ತು. ಒಬ್ಬೊಬ್ಬರಾಗಿ ವೇದಿಕೆಯ ಮೇಲೆ ಸನ್ಮಾನವನ್ನು ನೆರವೇರಿಸಿದರು.














