ಗೌರವ ಡಾಕ್ಟರೇಟ್ ಪದವಿ ಪಡೆದ ನಮ್ಮೆಲ್ಲರ ನೆಚ್ಚಿನ ಮಾತೃಶ್ರೀ ಡಾ|| ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಅಭಿನಂದನಾ ಸಮಾರಂಭ. ಹಾಗೂ “ ಹೇಮಾಭಿವಂದನೆ” ಎಂಬ ಅಭಿನಂದನಾ ಕೃತಿ ಯ ಬಿಡುಗಡೆಯ ಸಮಾರಂಭ . ದಿನಾಂಕ 17-7-2022 ರ ಭಾನುವಾರ ಸಮಯ: ಬೆಳಗ್ಗೆ10-00 ಗಂಟೆಯಿಂದ ಕರ್ನಾಟಕ ಜೈನ ಭವನ, ಶಂಕರಪುರಂ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. ಸಮಸ್ತ ಮಹಳಾ ಸಮಾಜಗಳ ಪರವಾಗಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಾಧ್ಯಕ್ಷರಾದ ಶ್ರೀಮತಿ ಪದ್ಮಿನಿ ಪದ್ಮರಾಜ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾತೃಶ್ರೀ ಹೇಮಾವತಿ ವ್ಯಕ್ತಿ ಮತ್ತು ವ್ಯಕ್ತಿತ್ವ ಶೀರ್ಷಿಕೆಯಡಿ ರಾಜಶ್ರೀ ಹಂಪನಾರವರು ಮಾತನಾಡಲಿದ್ದಾರೆ. ಹಾಗೂ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಪರಮಪೂಜ್ಯ 108 ಯುಗಳ ಮುನಿಮಹಾರಾಜರ ಪಾವನಸಾನಿಧ್ಯದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಸಮ್ಮೇಳನ ಕೂಡ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಅಮ್ಮನವರಿಗೆ ಅಭಿನಂದನೆಗಳನ್ನು ಸಲ್ಲಿಸಿ.
ಹೆಮ್ಮಾವತಿ ವಿ ಹೆಗ್ಡೆ ಪ್ರೋಮೋ / ಜ್ವಾಲಾಮಾಲಾ ನ್ಯೂಸ್ / 2022














