ಕ್ಷೇತ್ರ ಪರಿಚಯ- 38 / ಶ್ರೀ ಆದಿನಾಥ ದಿಗಂಬರ ಜಿನ ಮಂದಿರ / ಪಾವಗಡ Tq. / ತುಮಕೂರು ಜಿಲ್ಲೆ.

ಜೈ ಜಿನೇಂದ್ರ ವೀಕ್ಷಕರೆ ಅಮರಪುರ ಪಟ್ಟಣದ ಆಂದ್ರಪ್ರದೇಶದ ಹಾಗು ಸುತ್ತಮುತ್ತಲಿನ ಕರ್ನಾಟಕದ ಗಡಿಭಾಗದಲ್ಲಿಯೇ ಸುಮಾರು 300 ವರ್ಷಗಳ ಹಿಂದೆ ಈ ಊರನ್ನು ನಡುಗನಹಳ್ಳಿ ಎಂದು ಕರೆಯುತ್ತಿದ್ದರು.  ಈಗ ಇದು ಅಮರಪುರವಾಗಿದೆ, ಸುಮಾರು 400 ವರ್ಷಗಳ ಹಿಂದೆ ಕೆರೆಯ ಹತ್ತಿರ ಒಂದು ಶಾಸನ ಇಲ್ಲಿ ಸಿಗುತ್ತದೆ, ಕೆರೆಯ ಹತ್ತಿರವಿದ್ದ ಜಿನಾಲಯವನ್ನು ಬ್ರಹ್ಮಜೀನಲಾಯವೆಂದು ಕರೆಯುತ್ತಿರುತ್ತಾರೆ, ಸುಮಾರು 150 ವರ್ಷಗಳ ಹಿಂದೆ ಗೌಡನಕುಂಟೆ ಚನ್ನಪ್ಪನವರ ಕುಟುಂಬದವರು ಹಾಗು ಪದ್ಮಣ್ಣನವರ ಕುಟುಂಬದವರು ಸೇರಿ ಹಾಗು ಊರಿನ ಶ್ರವಕರಿಂದ ಜಿನೇಂದ್ರ ದೇವಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

ಮಧುಗಿರಿ ಮರುದೇವಮ್ಮನವರಿಂದ ಪಂಚಲೋಹದ ಶ್ರೀ ಸಾವಿರದ ಎಂಟು ಆದಿನಾಥರ ತೀರ್ಥಂಕರ ಜೀನಬಂಬವನ್ನು ದಾನವಾಗಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ, ಸುಮಾರು 800 ವರ್ಷಗಳ ಹಿಂದೆ ನಿಡಿಗಲ್ಲಿನ ಕಷ್ಟಹರ ಪಾಶ್ವನಾಥ ಸ್ವಾಮಿ ಜೀನಲಾಯದಲ್ಲಿ ಇದ್ದ ಪದ್ಮಾವತಿ ಅಮ್ಮನವರನ್ನು ತಂದು ಇಲ್ಲಿ ಪಂಚಕಲ್ಯಾಣ ವಿಧಿಪುರಕವಾಗಿ ಸ್ಥಾಪಿಸಲಾಗಿದೆ ಹಾಗು ಸುಮಾರು 50 ವರ್ಷಗಳ ಹಿಂದೆ ಸುಮಿತ್ರಮ್ಮ, ನೇಮಣ್ಣನವರಿಂದ ಬಿಳಿ ಅಮೃತ ಶಿಲಾ ಮೂರ್ತಿಯನ್ನು ಸ್ಥಾಪನೆಮಾಡಲಾಗುತ್ತದೆ.

ಇಂತಹ ಅನೇಕ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡಂತಹ ಈ ಜೀನಲಾಯ ಹಾಗು ಜೀನಪ್ರತಿಮೆಗಳ ಒಂದು ವಿಶೇಷ ಮಾಹಿತಿಗಳನ್ನು ಶ್ರೀಮತಿ ಪದ್ಮಿಣಿ ಪದ್ಮರಾಜ್‌ ರವರ ನುಡಿಗಳಿಂದ ಕೇಳೋಣ, ದರ್ಮ ಬಂಧುಗಳೇ ಅಮರಪುರ ಪಟ್ಟಣದ ಆದಿನಾಥ ಜೀನಮಂದಿರ ಸುಮಾರು 150 ವರ್ಷಗಳ ಇತಿಹಾಸವಿದೆ ಎಂದು ನಮಗೆ ಶಾಸ್ರ್ತಗಳಿಂದ ತಿಳಿದುಬರುತ್ತದೆ, ಇಲ್ಲಿ ಮೂಲ ಸ್ವಾಮಿ ಆಧಿನಾಥ ಭಗವಾನ್‌ ಇದ್ದಾರೆ , ಇದು ಸ್ಥಾಪನೆಯಗಿ 150 ವರ್ಷವಾಗಿದೆ ಎಂದು ಹೇಳಿದರು ಈಗ ಸುಮಾರು 15 ವರ್ಷಗಳ ಹಿಂದೆ ಪೂಜ್ಯ ದೆವೇಂದ್ರ ಕೀರ್ತಿ ಭಟ್ಟರಕರು ಇಲ್ಲಿ ನಿಡಗಲ್ಲು ಬಸಿದಿಯ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಬಂದಾಗ ನಮ್ಮ ಈ ಬಸದಿಗೆ ಬಂದು ಆಧಿನಾಥ ಸ್ವಾಮಿಯಲ್ಲಿ ಕೆಲವು ನ್ಯೊನತೆಗಳು ಇವೆ ಅದನ್ನು ಸರಿಮಾಡಿಸಿ ಪುನಃ ಸ್ಥಾಪಿಸಲು ಆದೇಶ ನೀಡಿದ್ದರು, ಸ್ವಾಮಿಗಳ ಆದೇಶದಂತೆ ಈ ಮೂಲ ಸ್ವಾಮಿಯನ್ನ ನಾವು ಎಲ್ಲ ನ್ಯೊನತೆಗಳನ್ನ ಸರಿಪಡಿಸಿ ಮತ್ತೆ ಪೂಜ್ಯ ಸ್ವಾಮೀಜಿಯವರ ಬಳಿಯಲ್ಲಿ ಅವರಿಂದ ಪರಮರ್ಷೆ ಮಾಡಿಸಿ ನಂತರ ಅದರ ಪುನಹಃ ಸ್ಥಾಪಿಸಲಾಯಿತು. ನಮ್ಮ ದುರದೃಷ್ಠವೇನೊ ಸ್ವಾಮೀಜಿಯವರು ಸ್ವರ್ಗಸ್ಥರಾಗಿದ್ದರು, ಇವರಿಂದ ಸಾಕಷ್ಟು ಸಹಕಾರ, ಮಾರ್ಗದರ್ಶನ ಪಡೆಯಲಾಗಿತ್ತು. ಅನಂತರ ಶ್ರೀ  ಕ್ಷೇತ್ರ ಹರಹಂತಗಿರಿಯ ದವಳ ಕೀರ್ತಿ ಭಟ್ಟರಕರು ಮತ್ತು ಕನಕಗಿರಿಯ ಭುವನ ಕೀರ್ತಿ ಭಟ್ಟರಕರ ಮಾರ್ಗದರ್ಶನ ಮತ್ತು ಪಾವನ ಸಾನಿಧ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಅದ್ಧೂರಿಯಾಗಿ ನೆರವೇರಿಸಲಾಯಿತು. ಇದಕ್ಕು ಮೊದಲು ಪದ್ಮಣ್ಣ ಹಾಗು ಅಮರಪುರದ ನಿವಾಸಿಗಳು ಈವೊಂದು ನೀವೇಶನವನ್ನು ನೀಡಿದ್ದರು ಗೌಡನಕುಂಟೆಯ ಚಂದಪ್ಪ ಕುಟುಂಬಸ್ಧರು ಈ ಒಂದು ಬಸದಿಯ ನಿರ್ಮಾಣಮಾಡಿದ್ದಾರೆ.ಈ ಒಂದು ಎರಡು ಕುಟುಂಬ ಮಾತ್ರವಲ್ಲದೆ ಸುಮಾರು 50-60 ಕುಟುಂಬಗಳು ನುರಾರು ವರ್ಷದಿಂದ ಜೈನ ಶ್ರಾವಕರ ಮನೆಗಳು ಇತ್ತು ಆ ಎಲ್ಲ ಶ್ರಾವಕ ಕುಟುಂಬದವರು ಇಲ್ಲಿ ಭಕ್ತರಾಗಿದ್ದಾರೆ, ಈ ವರೆಗೂ ಅವರು ಇಲ್ಲಿ ಪೂಜೆಗಳನ್ನು ನೇರವೆರಿಸಿಕೊಂಡು ಬಂದಿದ್ದಾರೆ. ಮತ್ತು ಇನ್ನೊಂದು ವಿಶೇಷವೆನೇಂದರೆ ಈ ಬಸದಿಯಲ್ಲಿ ನೆಡೆಯುವಂತಹ ನವರಾತ್ರಿ ಉತ್ಸವ ಈಗ ನಾವು ಎಲ್ಲಕಡೆ ಅಮ್ಮನವರ ಆಲಂಕಾರದ ಪೂಜೆಗಳ್ಳನ್ನು ನೋಡುತ್ತೇವೆ, ಆದರೆ ಬಹಳ ಹಿಂದಿನಿಂದಲು ಇಲ್ಲಿನ ಸ್ಥಳಿಯ ಪೂರೋಹಿತರಾದ ದಿವಾಂಗತ ಸೌದರ್ಮೇಂದ್ರಯ್ಯನವರು ನೇರವೆರಿಸಿಕೊಡುತ್ತಿದ್ದರು, ಅದನ್ನು ಈಗ ಅವರ ಮಗ ಅದಂತಹ ಮದನ್‌ ಪಂಡಿತ್‌ ಮುಂದುವರೆಸುತ್ತ ಬಂದಿದ್ದಾರೆ.

ಈಗಲೂ ಸಹ ನವರಾತ್ರಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನೆಡೆಯುತ್ತಾ ಬಂದಿದೆ, ಮತ್ತು ಈ ಪಂಚಕಲ್ಯಾಣ ಪುನರ್‌ ಸ್ಥಾಪನೆ 2010 ರಲ್ಲಿ ಬಹಳ ವಿಶೇಷದಿಂದ ಜರುಗಿದೆ. ಈ ಒಂದು ಕಾರ್ಯಕ್ರಮಕ್ಕೆ ನಮ್ಮ ಪತಿ ಆದ ಶ್ರೀಯುತ ಪದ್ಮರಾಜ್‌ ರವರು ಸುಮಾರು 2 ವರ್ಷಗಳ ಕಾಲ ಶ್ರಮ ಪಟ್ಟು ಬೆಂಗಳೂರಿನಿಂದ ಕೆಲಸಗಾರರನ್ನು ಕರೆತಂದು, ಈ ಒಂದು ದೇವಸ್ಥಾನದ ಕೆಲಸ ಕಾರ್ಯವನ್ನು ನೆರವೇರಿಸಿಕೊಟ್ಟಿದ್ದಾರೆ.ಆನಂತರ ನಮ್ಮ ಅಮರಪುರದ ಎಲ್ಲಾ ದರ್ಮ ಶ್ರಾವಕರು  ದರ್ಮಬಂಧುಗಳು, ಶ್ರೀಯುತ ಅಜಿತ್‌ ಕುಮಾರ್‌ ಅವರು ಮತ್ತು ಕುಟುಂಬಸ್ಥರು, ಅಮರಪುರದ ಎಲ್ಲಾ ನಿವಾಸಿಗಳ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ಈ ಒಂದು ಮೂರ್ತಿಯ ಪ್ರತಿಷ್ಠಾಪನೆ ಮಾಡಿಸಿದ್ದೇವೆ. ಈಗಲೂ ಸಹ ಈ ಬಸದಿಯು ಅತ್ಯಂತ ನಿತ್ಯ ಪೂಜೆಯಿಂದ ಹಿಡಿದು ನವರಾತ್ರಿಯವರೆಗೆ ಅಷ್ಠಾನಿಕ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನೆಡೆಸಿಕೊಡಲಾಗುತ್ತದೆ. ಅನಂತನೋಪಿಯ ಉಪಾಸನೆಯನ್ನು ಸಹ ಪಂಡಿತರ ಸಹಕಾರದಿಂದ ಈಲ್ಲಿನ ಆಡಳಿತ  ವರ್ಗದವರಿಂದ ಅತ್ಯಂತ ಯಶಸ್ವಿಯಾಗಿ ನೆಡೆಯುತ್ತಾ ಬಂದಿದೆ.

ಸಾಧುನಾಮ್‌ ದರ್ಶನಂ ಪುಣ್ಯಂ ಸಾಧುವಿನ ದರ್ಶನ ಹತ್ತಿರ ಬಂದು ಪ್ರವಚನ ಕೇಳಿದರು, ಸಮಸ್ಯೆಗಳನ್ನು ವಿಚಾರ ಮಾಡಿದರು,ಇದು ನಿಮಗೆ ಒಳ್ಳೆಯ ಕಲ್ಯಾಣವಾಗುತ್ತದೆ, ಸಾಧು ಪ್ರವಚನ ನಿಮಗೆ ಸಂರ್ವಿರ್‌ ದರ್ಶನವಾಗುವುದಿಲ್ಲ ಯಾವ ಜನ್ಮಕ್ಕೆ ನಿಮಗೆ ಮುನಿಗಳ ದರ್ಶನ ಸಿಗಬೇಕು, ನಂತರ ಸಂರ್ವಿರ್‌ ದರ್ಶನವಾಗುತ್ತದೆ ,ನಿಸರ್ಗ ಮತ್ತು ಅದಿಗ್ಮದ್‌, ಹಿಂದಿನ ಜನ್ಮದಿಂದ ಆಗಬಹುದಾದದ್ದು ನಿಸರ್ಗ, ಉಪದೇಶದ ನಂತರ ಆಗುವುದು ಅದಿಗ್ಮದ್‌,  ಅದಿಗ್ಮದ್‌ ಎಂದರೆ ಜ್ಞಾನ.

ಪ್ರತಿಯೊಬ್ಬರು  ಬಂದು ದರ್ಶನಮಾಡಿ ಹೊಗಬೇಕೇಂದು ನಾನು ಕೇಳಿಕೊಳ್ಳುತೇನೆ.