/ ಜ್ವಾಲಾಮಾಲಾನ್ಯೂಸ್ / 2022

ಸಧರ್ಮ ಬಂಧುಗಳೆ ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದಲ್ಲಿ 2015 ಇಸವಿಯಲ್ಲಿ 1008 ಶ್ರೀ ನೇಮಿನಾಥ ತೀರ್ಥಂಕರರ ಬಸದಿಯನ್ನು ಜೀರ್ಣೋದ್ದಾರ ಮಾಡಬೇಕು ಎಂದು ಸ್ವಸ್ತಿಶ್ರೀ ಜಗದ್ಗುರು ಕರ್ಮ ಯೋಗಿ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಹಾಗೂ ಸಮಸ್ತ ಭಟ್ಟಾರಕ ಗುರುಗಳ ಆಜ್ಞೆಯ ಮೇರೆಗೆ ಈ ಬಸದಿಯ ಶಿಲಾನ್ಯಾಸ ನೆರವೇರಿಸಿ 2018ರಲ್ಲಿ ಸಂಪೂರ್ಣವಾಗಿ ಮಡಲಾಯಿತು. ನಂತರ ಬಸದಿಯ ಮುಂಭಾಗದಲ್ಲಿ ಮಾನಸ್ತಂಭವನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಒಂದು ವಿಶೇಷ ರೀತಿಯಲ್ಲಿ ಶ್ರೀ ಕ್ಷೇತ್ರದಲ್ಲಿ ನಿರ್ಮಾಣ ಮಾಡ ಬೇಕೆಂದು  ಆ ಮಾನಸ್ತಂಭವನ್ನು ಸಹಸ್ರಕೂಟ ಶ್ರೀ ಜಿನ ಮಾನಸ್ತಂಭ ಎಂದು ನಿರ್ಮಾಣ ಮಾಡ ಬೇಕೆಂದು ಗುರುಗಳ ಅಪ್ಪಣೆಯನ್ನು ತೆಗೆದುಕೊಂಡೆವು. ಇದಕ್ಕೆ ತುಂಬ ಸಂತೋಷದಿಂದ ಅನುಮತಿ ನೀಡಿದರು, ಇದು ಪ್ರಪಂಚದ ಯಾವುದೇ ಭಾಗದಲ್ಲಿ ಇಲ್ಲದೇ ಇರುವಂತಹ ಅದ್ವೀತಿಯ ಕಲಾಕೃತಿಯನ್ನು ಮಾಡುತ್ತಿರುವ ನಿಮಗೆ ಶುಭಾಶೀರ್ವಾದವನ್ನು ಮಾಡಿದರು. ನಂತರ ಇದನ್ನು ಎಲ್ಲಾ ಗುರುಗಳ ಹತ್ತಿರ ತೋರಿಸಿದಾಗ ಮಾಡಬಹುದು ಎಂದು ಎಲ್ಲರು ಶುಭ ಹಾರೈಕೆ ನೀಡಿದರು.

ನಂತರ ಶ್ರೀ ಜಿನ ಸಹಸ್ರಕೂಟ ಮಾನಸ್ತಂಭವನ್ನು ಶ್ರೀ ಕ್ಷೇತ್ರ ಸೊಂಧಾ ದಿಗಂಬರ ಜೈನ ಮಠದಲ್ಲಿ ನಿರ್ಮಾಣ ಮಾಡಲು ಪ್ರಾರಂಭ ಮಾಡಿದ್ದಿವಿ. ಜೈನ ಸಂಪ್ರದಾಯದಲ್ಲಿ ಮಾತ್ರ ಮಾನಸ್ತಂಭ ಕಲಾಕೃತಿಯನ್ನು ನೋಡಲು ಸಾದ್ಯವಾಗುತ್ತದೆ. ಮಾನ ಎಂದರೆ ಅಳತೆ ಎಂದು ಹೇಳುತ್ತೇವೆ, ತೀರ್ಥಂಕರರ ಅಳತೆಗಿಂತ ಹನ್ನೆರಡು ಪಟ್ಟು ಎತ್ತರ ಇರುವಂತಹ ಸ್ತಂಭಕ್ಕೆ ಮಾನಸ್ತಂಭ ಎಂದು ಹೇಳುತ್ತಾರೆ. ಮಾನಸ್ತಂಭವನ್ನು ಸಂವತ್ಸರಣದ ನಾಲ್ಕುದಿಕ್ಕಿನಲ್ಲಿ ಸ್ಥಾಪನೆ ಮಾಡುತ್ತಾರೆ, ಹಾಗೂ ಜಿನ ಬಸದಿಗಳು ತೀರ್ಥಂಕರರು ಎಲ್ಲಿ ಸ್ಥಾಪನೆ ವಿರಾಜಮಾನರಾಗಿರುತ್ತಾರೆ ಅವುಗಳೆಲ್ಲವು ಕೂಡ ಸಂವತ್ಸರಣದ ಪ್ರತಿಕಾ ಎಂದು ಬಾವಿಸುತ್ತೀವಿ. ಇಂತಹ ಒಂದು ವಿಶಿಷ್ಟಕಾಲಕೃತಿಯನ್ನು ನಿರ್ಮಾಣ ಮಾಡುತ್ತಿದ್ದೀವಿ. ಈ ಒಂದು ಕಾಲಾಕೃತಿ ಪ್ರಪಂಚದಲ್ಲಿ ಮೊದಲನೆಯ ಕಾಲಾಕೃತಿಯಾಗಿದೆ, ಶ್ರೀ ಜಿನ ಸಹಸ್ರಕೂಟ ಮಾನಸ್ತಂಭ ಎನ್ನುವಂತಹದ್ದು ಪ್ರಪಂಚದಲ್ಲಿ ಮೊದಲನೆಯ ಮಾನಸ್ತಂಭ, ಸುಮಾರು 45 ಅಡಿ ಎತ್ತರದ ಮಾನ ಸ್ತಂಭ ಈ ಕ್ಷೇತ್ರದಲ್ಲಿ ನಿರ್ಮಾಣ ವಾಗುತ್ತಾ ಇದೆ. ಮಾನಸ್ತಂಭದ ಅಗಲ ಐದುವರೆ ಅಡಿ, ಪೌಂಡೇಶನ್ 17 ಅಡಿ. ಅಷ್ಟಪ್ರಾತಿಹಾರಿಗಳು, ಅಷ್ಟಮಂಗಲಗಳು, 16 ಸ್ವಪ್ನಗಳು, ಸಿದ್ದ ಕ್ಷೇತ್ರಗಳ ದರ್ಶನ ಹಾಗೂ 8 ಪ್ರಮುಖ ಜೈನ ಯಂತ್ರಗಳನ್ನ ಸ್ಥಾಪನೆ ಮಾಡುತ್ತಾಇದ್ದೀವಿ. ಮೇಲ್ಭಾಗದಲ್ಲಿ ಒಂದೇ ಶಿಲೆಯಲ್ಲಿ 8 ದಿಕ್ಕಿನಲ್ಲಿ 2.5ಅಡಿ ಎತ್ತರದ 8 ಜಿನ ಪ್ರತಿಮೆಗಳನ್ನು ಸ್ಥಾಪನೆ ಮಾಡುತ್ತಾ ಇದ್ದೀವಿ. ಸ್ತಂಭದಲ್ಲಿ ಸುಮಾರು 11ಇಂಚಿನ ಮಂಟಪ ಬರುತ್ತದೆ ಆ ಮಂಟಪದ ಒಳಗೆ ಅಷ್ಟಪ್ರಾತಿಹಾರಿ ಸಹಿತವಾಗಿ ಕಮಲ ಪೀಠದಲ್ಲಿ ಸ್ಥಿತರಾಗಿರುವಂತಹ ಹಾಗೂ ಛತ್ರಿ ಚಾಮರದಲ್ಲಿ ಇರುವಂತಹ 7ಇಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡುತ್ತಾಇದ್ದೀವಿ. ಈ ಒಂದು ಮಾನಸ್ತಂಭದಲ್ಲಿ 1000 ಜನರಿಗೆ ಮೂರ್ತಿಯನ್ನು ಸ್ಥಾಪನೆ ಮಾಡುವಂತಹ ಸದವಕಾಶ ದೊರೆತಿದೆ. ಇದರಲ್ಲಿ ಒಂದು ಪ್ರತಿಮೆಯನ್ನು ಸ್ಥಾಪನೆ ಮಾಡುವುದಕ್ಕೆ 11,000/-  ರೂಪಾಯಿಗಳನ್ನ ದಾನ ರಾಶಿ ನಿಗದಿಮಾಡಲಾಗಿದೆ. ಭಕ್ತರು ಜಿನ ಪ್ರತಿಮೆ ಸ್ಥಾಮನೆ ಮಾಡಬೇಕೆಂದರೆ 11,000/-  ರೂಪಾಯಿಗಳ ದಾನ ರಾಶಿಯನ್ನು ಶ್ರೀ ಮಠದಲ್ಲಿ ತಿಳಿಸಿ ನಂತರ ಶ್ರೀ ಜಿನ ಬಿಂಬವನ್ನು ಸ್ಥಾಪನೆ ಮಾಡಿ ಅನಂತ ಅತಿಶಯ ಪ್ರಾಪ್ತಿ ಮಾಡಿಕೊಳ್ಳಬೇಕು. ಇಂತಹ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಾವನೆ ಮಾಡುತ್ತ ಮಾನಸ್ತಂಭ ನಿರ್ಮಾಣಕ್ಕೆ ಸಮಸ್ತ ಸಧರ್ಮ ಶ್ರಾವಕ ಶ್ರಾವಕಿಯರು ತನು ಮನ ಧನಗಳ ಸಹಕಾರ ನೀಡಿ ಅತಿಶಯ ಪುಣ್ಯವನ್ನು ಪ್ರಾಪ್ತಿಮಾಡಿಕೊಳ್ಳಬೇಕು ಎಂದು ಈ ಮೂಲಕ ಅಪೇಕ್ಷಿಸುತ್ತೇವೆ, ಎಲ್ಲರಿಗೂ ಶುಭಾಷಯಗಳು ಶುಭಾಶೀರ್ವಾದಗಳು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್